ಸಹಕಾರ ಸಂಘಗಳ ಪಾತ್ರ ಮಹತ್ವ: ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ

ಸಹಕಾರ ಸಂಘಗಳ ಪಾತ್ರ ಮಹತ್ವ: ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ

ಸಹಕಾರ ಸಂಘಗಳ ಪಾತ್ರ ಮಹತ್ವ: ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ

ವಿರಾಜಪೇಟೆ: ಸಹಕಾರ ಸಂಘಗಳು ಕೃಷಿಕರ ಬದುಕಿನಲ್ಲಿ ಇಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿವೆ ಎಂದು ಕೊಡಗು ಜಿಲ್ಲಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರು ಅಭಿಪ್ರಾಯಪಟ್ಟರು.

ಸಮೀಪದ ಅರಮೇರಿ ಗ್ರಾಮದ ಭಗವತಿ ವಿವಿಧೋದ್ದೇಶ ಸಹಕಾರ ದವಸ ಭಂಡಾರದ ಸುವರ್ಣ ಮಹೋತ್ಸವದ ಅಂಗವಾಗಿ ಈಚೆಗೆ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಹಕಾರ ಸಂಘದ ಸಭೆಯಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡುವ ಮೂಲಕ ಸಂಘದ ಪ್ರಗತಿಗೆ ಕೈಜೋಡಿಸಬೇಕು. ಸಹಕಾರ ಸಂಘಗಳು ತಮ್ಮ ಉಳಿವಿಗಾಗಿ ವಿವಿದ ರೀತಿಯ ಯೋಜನೆ ರೂಪಿಸಿಕೊಂಡು ಮುನ್ನಡೆಯಬೇಕು. ಇಂದು ಭತ್ತದ ಕೃಷಿಯ ಹಿನ್ನಡೆಯಿಂದ ಒಂದು ಕಾಲದಲ್ಲಿ ರೈತರಿಗೆ ಅನೂಕೂಲವಾಗಿದ್ದ ದವಸ ಭಂಡಾರಗಳು ಇಂದು ಮುಚ್ಚುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ‘ಅಂದು ಅಕ್ಷರದ ಕೊರತೆಯ ನಡುವೆ ಹಿರಿಯರು ದೂರ ದೃಷ್ಟಿಯಿಂದ ರೈತರ ಕಷ್ಟಗಳಿಗೆ ಸ್ವಂದಿಸಲು ದವಸಭಂಡಾರ ತೆರದು ಸಹಕಾರ ನೀಡಿದರು. ಇಂದು ಈ ಸಹಕಾರ ಸಂಘಗಳನ್ನು ಉಳಿಸಿ ಬೆಳೆಸುವ ಮಹತ್ವ ಹೊಣೆ ನಿಭಾಯಿಸಬೇಕು. ಯುವ ಜನತೆಯನ್ನು ಸಂಘದ ಸದಸ್ಯರಾಗಿ ಪ್ರೇರೇಪಿಸಲು ಸದಸ್ಯತ್ವ ಅಭಿಯಾನ ನಡೆಸಬೇಕು. ಇದು ಭವಿಷ್ಯದಲ್ಲಿ ಸಹಕಾರಿ ಸಂಘ ಬೆಳೆಯಲು ಸಹಕಾರಿಯಾಗುತ್ತದೆ’ ಎಂದರು.

ಕಾಕೋಟುಪರಂಬು ಸಹಕಾರ ಸಂಘದ ಅಧ್ಯಕ್ಷ ಪೂಳಂಡ ವಿನು ಪೆಮ್ಮಯ್ಯ ಹಾಗೂ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅರಮೇರಿ ಸಹಕಾರ ದವಸ ಭಂಡಾರ ನಿಯಮಿತದ ಅಧ್ಯಕ್ಷ ಪೂಳಂಡ ಎಸ್. ಮಾಚಯ್ಯ ಅವರು ಮಾತನಾಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕುಂಬೇಯಂಡ ದೇವಯ್ಯ, ಆಡಳಿತ ಮಂಡಳಿಯ ನಿರ್ದೇಶಕ ಬಾಚೀರ ಜಗದೀಶ್ ಉಪಸ್ಥಿತರಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ