‘ಬ್ರಹ್ಮಾಂಡದ ಸೃಷ್ಟಿಕರ್ತ ವಿಶ್ವಕರ್ಮ’ - ಗದಗದಲ್ಲಿ ಉಪನ್ಯಾಸಕ ಶಂಕ್ರಪ್ಪ ಬಡಿಗೇರ

‘ಬ್ರಹ್ಮಾಂಡದ ಸೃಷ್ಟಿಕರ್ತ ವಿಶ್ವಕರ್ಮ’ - ಗದಗದಲ್ಲಿ ಉಪನ್ಯಾಸಕ ಶಂಕ್ರಪ್ಪ ಬಡಿಗೇರ

‘ಬ್ರಹ್ಮಾಂಡದ ಸೃಷ್ಟಿಕರ್ತ ವಿಶ್ವಕರ್ಮ’ - ಗದಗದಲ್ಲಿ ಉಪನ್ಯಾಸಕ ಶಂಕ್ರಪ್ಪ ಬಡಿಗೇರ

ಗದಗ: ‘ವಿಶ್ವಕರ್ಮರು ಇಡೀ ಬ್ರಹ್ಮಾಂಡದ ಸೃಷ್ಟಿಕರ್ತರಾಗಿದ್ದಾರೆ’ ಎಂದು ಇತಿಹಾಸ ವಿಭಾಗದ ಉಪನ್ಯಾಸಕ ಶಂಕ್ರಪ್ಪ ಬಡಿಗೇರ ಹೇಳಿದರು.

ತಾಲ್ಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಸಮಾರಂಭದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಅಪ್ಪಣ್ಣ ಎನ್. ಹಂಜೆ ಮಾತನಾಡಿ, ‘ವಿಶ್ವಕರ್ಮ ಎಂದರೆ ಎಲ್ಲವನ್ನೂ ಸಾಧಿಸುವವನು ಎಂಬ ಅರ್ಥವಿದೆ. ವಿಶ್ವಕರ್ಮ ಸಮುದಾಯದವರು, ಎಂಜಿನಿಯರ್‌ಗಳು, ಕುಶಲಕರ್ಮಿಗಳು ಹಾಗೂ ವಾಸ್ತುಶಿಲ್ಪಿಗಳು ವಿಶ್ವಕರ್ಮರನ್ನು ಆರಾಧಿಸುತ್ತಾರೆ. ಅವರ ಜಯಂತಿಯು ಕಾಯಕ, ಕೌಶಲ, ಕೈಗಾರಿಕೆ, ಸೃಜನಶೀಲತೆ ಪ್ರತಿಬಿಂಬಿಸುತ್ತದೆ’ ಎಂದರು.

ಸಾಂಸ್ಕೃತಿಕ ಘಟಕದ ಸಂಯೋಜಕ ರಮೇಶ ಹುಲಕುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಲಿಂಗ ಬಡಿಗೇರ, ಭೀಮಣ್ಣ ಬಡಿಗೇರ, ರೇಂಜರ್ಸ್ ಘಟಕದ ಸಂಯೋಜಕಿ ಸಾವಿತ್ರಿ ಟಿ., ಬಸವಂತಪ್ಪ ದೊಡ್ಡಮನಿ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ