ಆ್ಯಪಲ್‌ನಲ್ಲಿ ಉದ್ಯೋಗ ಕಡಿತ: ಎರಡು ತಿಂಗಳ ಅಂತರದಲ್ಲಿ ಎರಡನೇ ಬಾರಿ ಲೇ–ಆಫ್

ಆ್ಯಪಲ್‌ನಲ್ಲಿ ಉದ್ಯೋಗ ಕಡಿತ: ಎರಡು ತಿಂಗಳ ಅಂತರದಲ್ಲಿ ಎರಡನೇ ಬಾರಿ ಲೇ–ಆಫ್

ಆ್ಯಪಲ್‌ನಲ್ಲಿ ಉದ್ಯೋಗ ಕಡಿತ: ಎರಡು ತಿಂಗಳ ಅಂತರದಲ್ಲಿ ಎರಡನೇ ಬಾರಿ ಲೇ–ಆಫ್

ನವದೆಹಲಿ: ಟೆಕ್ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ಆ್ಯಪಲ್‌ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಕಂಪನಿಯು ಎರಡನೇ ಸುತ್ತಿನ ಉದ್ಯೋಗ ಕಡಿತ ಮಾಡಿದೆ. ಈ ಬಾರಿ ಫಿಟ್‌ನೆಸ್+ ವಿಭಾಗದ ಕೆಲವು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

‘ಕಳೆದ ವಾರ ಫಿಟ್‌ನೆಸ್+ ತಂಡದ ಕೆಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಪ್ರಮುಖವಾಗಿ ಆಡಿಯೊ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮೇಲೆ ಪರಿಣಾಮ ಬೀರಿದೆ. ಆಲಿಸಬಹುದಾದ ‘ಟೈಮ್ ಟು ವಾಕ್’ ಮತ್ತು ‘ಟೈಮ್ ಟು ರನ್’ ವಾಚ್‌ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ತಂಡವೂ ಇದರಲ್ಲಿ ಸೇರಿದೆ’ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ.

ಆಗಸ್ಟ್‌ನಲ್ಲೂ 200ಕ್ಕೂ ಹೆಚ್ಚು ಉದ್ಯೋಗ ಕಡಿತ

ಇದೇ ವರ್ಷದ ಆಗಸ್ಟ್‌ನಲ್ಲಿ ಆ್ಯಪಲ್‌ ಸಂಸ್ಥೆಯು ಸುಮಾರು 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಆಗ ‘ಸಿರಿ’ ಡಿಜಿಟಲ್ ಸಹಾಯಕ, ವಿಷನ್ ಪ್ರೊ ಹೆಡ್‌ಸೆಟ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್ ವಿಭಾಗದ ಇಂಟೆಲಿಜೆಂಟ್ ಸಿಸ್ಟಮ್ಸ್ ಎಕ್ಸ್‌ಪೀರಿಯನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದವರನ್ನು ವಜಾ ಮಾಡಲಾಗಿತ್ತು ಎಂದು ವರದಿಯಾಗಿತ್ತು.

ಸಂಸ್ಥೆಯು ತಂಡಗಳ ಕಾರ್ಯವೈಖರಿಯನ್ನು ಮರುಹೊಂದಿಸುತ್ತಿದೆ. ಹಾಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಆ್ಯಪಲ್ ಆ ಸಂದರ್ಭದಲ್ಲಿ ಹೇಳಿತ್ತು. ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಹೊಸ ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ. ಆದರೆ ಹಾಲಿ ಇರುವ ಕೆಲವು ಹುದ್ದೆಗಳ ಮೇಲೆ ಪರಿಣಾಮ ಬೀರಲಿದೆ ಎಂದೂ ಸಂಸ್ಥೆ ತಿಳಿಸಿತ್ತು.

ಫಿಟ್‌ನೆಸ್+ ಸೇವೆಯಲ್ಲಿ ಬದಲಾವಣೆ ಸಾಧ್ಯತೆ

ಫಿಟ್‌ನೆಸ್+ ಆಪಲ್‌ನ ಚಂದಾದಾರಿಕೆ ಆಧಾರಿತ ಸೇವೆಯಾಗಿದೆ. ಈ ಸೇವೆಗೆ ನಿರಂತರವಾಗಿ ಹೊಸ ವಿಷಯಗಳನ್ನು ಸಿದ್ಧಪಡಿಸಬೇಕಾಗಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಚಂದಾದಾರರು ಸೇವೆಯನ್ನು ನಿಷ್ಕ್ರೀಯಗೊಳಿಸಿದರೆ ಕಂಪನಿಯ ವೆಚ್ಚ ಮತ್ತು ಕಾರ್ಯಯೋಜನೆಗಳ ಮೇಲೆ ಪರಿಣಾಮ ಬೀರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮುಂದಿನ ದಿನಗಳಲ್ಲಿ ಫಿಟ್‌ನೆಸ್+ ಸೇವೆಯ ಕೆಲವು ಕಾರ್ಯಗಳನ್ನು ಹೆಲ್ತ್ ಆ್ಯಪ್‌ ಜೊತೆ ಸಂಯೋಜಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ ಸದ್ಯಕ್ಕೆ ಫಿಟ್‌ನೆಸ್+ ಸೇವೆಯನ್ನು ಸ್ಥಗಿತಗೊಳಿಸುವ ಯಾವುದೇ ನಿರ್ಧಾರದ ಕುರಿತು ಮಾಹಿತಿ ಇಲ್ಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ