ವಿಭಿನ್ನ ‍ಪಾತ್ರದಲ್ಲಿ ನಟ ನಾನಿ: ‘ದ ಪ್ಯಾರಡೈಸ್‌’ 24ಕ್ಕೆ ತೆರೆಗೆ

ವಿಭಿನ್ನ ‍ಪಾತ್ರದಲ್ಲಿ ನಟ ನಾನಿ: ‘ದ ಪ್ಯಾರಡೈಸ್‌’ 24ಕ್ಕೆ ತೆರೆಗೆ

ವಿಭಿನ್ನ ‍ಪಾತ್ರದಲ್ಲಿ ನಟ ನಾನಿ: ‘ದ ಪ್ಯಾರಡೈಸ್‌’ 24ಕ್ಕೆ ತೆರೆಗೆ

ಸಾಹಸ ಮತ್ತು ಭಾವನಾತ್ಮಕ ಪಾತ್ರಗಳ ನಟನೆಯಿಂದ ತನ್ನದೇ ಅಭಿಮಾನಿ ವಲಯವನ್ನು ಹೊಂದಿರುವ ತೆಲುಗು ನಟ ನಾನಿ ನಟಿಸಿರುವ ಚಿತ್ರ ‘ದ ಪ್ಯಾರಡೈಸ್’ ಇದೇ 24ಕ್ಕೆ ತೆರೆಕಾಣಲಿದೆ.

‘ದ ಪ್ಯಾರಡೈಸ್‌’ –1980ರ ದಶಕದಲ್ಲಿ ಸಿಕಂದರಾಬಾದ್‌ನಲ್ಲಿ ನಡೆದಿರುವ ಬೆಳವಣಿಗೆಗಳನ್ನು ಆಧರಿಸಿದ ಚಿತ್ರ. ಹತ್ತಿಕ್ಕುವ ವ್ಯವಸ್ಥೆಯ ವಿರುದ್ಧ ನೆಲದ ಹಕ್ಕಿಗಾಗಿ ನಿರ್ಲಕ್ಷ್ಯಿತ ಬುಡಕಟ್ಟು ಸಮುದಾಯದ ಪರವಾಗಿ ನಾಯಕ ಹೋರಾಟ ನಡೆಸುವುದು ಕಥೆ.

ಚಿತ್ರದ ಪ್ರಚಾರಾರ್ಥವಾಗಿ ನಾನಿ ಅವರು ಈಚೆಗೆ ಬೆಂಗಳೂರಿಗೂ ಬಂದಿದ್ದರು. ‘ಬೆಂಗಳೂರು ನನ್ನ ಮೆಚ್ಚಿನ ತಾಣ. ಮಂದೆ ಎಂದಾದರೂ ಇಲ್ಲಿಯೇ ಕೆಲ ದಿನಗಳನ್ನು ವಿರಾಮವಾಗಿ ಕಳೆಯುವ ಚಿಂತನೆಯು ಇದೆ’ ಎಂದು ಹೇಳಿದರು.

ಚಿತ್ರದಲ್ಲಿನ ತಮ್ಮ ಭಿನ್ನ, ನೀಳವಾದ ಹೇರ್‌ಸ್ಟೈಲ್‌ ಕುರಿತ ಪ್ರಶ್ನೆಗೆ, ‘ಅದು ವಿಶೇಷ ಲುಕ್‌ ದೃಷ್ಟಿಯಿಂದ ಮಾಡಿದ್ದಲ್ಲ. ಚಿತ್ರದ ಕಥೆಗೆ ಪೂರಕವಾಗಿಯೇ ಈ ಸ್ಟೈಲ್‌ ಅನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಕನ್ನಡದಲ್ಲಿಯೇ ಮಾತು ಆರಂಭಿಸಿದ ನಾನಿ, ‘ಇದು, ತಾಯಿ–ಮಗನ ಬಾಂಧವ್ಯದ ಕಥೆ. ಆ್ಯಕ್ಷನ್ ದೃಶ್ಯಗಳಿಗೆ ಒತ್ತು ನೀಡಲಾಗಿದೆ’ ಎಂದರು. ಮುಂದಿನ ಬಾರಿ ಬೆಂಗಳೂರಿಗೆ ಬಂದಾಗ ಇನ್ನಷ್ಟು ಸ್ಪಷ್ಟ ಕನ್ನಡದಲ್ಲಿ ಮಾತನಾಡಲು ಯತ್ನಿಸುವೆ ಎಂದರು

ಶ್ರೀಕಾಂತ್‌ ನಿರ್ದೇಶಿಸಿರುವ ಚಿತ್ರಕ್ಕೆ ಅನಿರುದ್ಧ್ ಅವರ ಸಂಗೀತ ನಿರ್ದೇಶನವಿದೆ. ಮೋಹನ್ ಬಾಬು, ಸೊನಾಲಿ ಕುಲಕರ್ಣಿ, ರಾಘವ್ ಜುಯಲ್ ಹಾಗೂ ಕಯಾದು ಲೋಹರ್ ತಾರಾಬಳಗದಲ್ಲಿ ಇದ್ದಾರೆ. v

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ