ಪ್ರೀತಿ ಇಲ್ಲದ ಅನುವಾದ ಯಾಂತ್ರಿಕ: ಪ್ರೊ.ಸಿ.ಎನ್‌.ರಾಮಚಂದ್ರನ್‌ ಪ್ರತಿಪಾದನೆ

ಪ್ರೀತಿ ಇಲ್ಲದ ಅನುವಾದ ಯಾಂತ್ರಿಕ: ಪ್ರೊ.ಸಿ.ಎನ್‌.ರಾಮಚಂದ್ರನ್‌ ಪ್ರತಿಪಾದನೆ

ಪ್ರೀತಿ ಇಲ್ಲದ ಅನುವಾದ ಯಾಂತ್ರಿಕ: ಪ್ರೊ.ಸಿ.ಎನ್‌.ರಾಮಚಂದ್ರನ್‌ ಪ್ರತಿಪಾದನೆ

ಬೆಂಗಳೂರು: ‘ಅನುವಾದಕರು ಮೂಲ ಕೃತಿಯನ್ನು ಪ್ರೀತಿಸದೆ ಅನುವಾದಿಸಿದರೆ ಯಾಂತ್ರಿಕವಾಗುತ್ತದೆ‌’ ಎಂದು ಪ್ರೊ.ಸಿ.ಎನ್‌.ರಾಮಚಂದ್ರನ್‌ ಪ್ರತಿಪಾದಿಸಿದರು.

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿಬುಧವಾರ ಕನ್ನಡ ಭಾಷಾ ವಿಭಾಗ ಏರ್ಪಡಿಸಿದ್ದ ‘ಕನ್ನಡ ಅನುವಾದ: ಹೊಸ ಸಾಧ್ಯತೆಗಳು’ –ರಾಷ್ಟ್ರಮಟ್ಟದ ಆನ್‌ಲೈನ್‌ ಅನುವಾದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಅನುವಾದವು ಯಶಸ್ವಿಯಾಗಬೇಕಾದರೆಅನುವಾದಕರು ಮೂಲ ಕೃತಿಯನ್ನು ಪ್ರೀತಿಸಬೇಕು. ಆ ತವಕವಿದ್ದಾಗಷ್ಟೇ ಅನುವಾದವು ಮೂಲದಂತೆಯೇ ನಮ್ಮ ಸಂತೋಷ ವನ್ನೂ, ಜ್ಞಾನವನ್ನೂ ಹೆಚ್ಚಿಸುತ್ತದೆ’ ಎಂದರು.

‘ಕೃತಕ ಬುದ್ಧಿ ಮತ್ತೆಯ ತಂತ್ರಜ್ಞಾನ ಗಳಿಂದ ಮಾಡುವ ಅನುವಾದಗಳು ಸರಿಯಾದುವಲ್ಲ’ ಎಂದರು.

‘ಭಾಷೆ ಮತ್ತು ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಅನುವಾದ ಅತ್ಯಗತ್ಯ. ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ಕಾಲಘಟ್ಟಗಳಲ್ಲಿ ನಡೆದಿರುವ ಅನುವಾದ ಪ್ರಕ್ರಿಯೆಯಿಂದ ಹಲವು ಭಾಷೆ-ಸಾಹಿತ್ಯಗಳು ಶ್ರೀಮಂತಗೊಂಡಿವೆ’ ಎಂದರು.

ವಿಶ್ವವಿದ್ಯಾಲಯದ ಜಯಂತಿಯನ್ ಎಕ್ಸ್‌ಟೆನ್ಷನ್ ಸರ್ವೀಸಸ್ ವಿಭಾಗದ ನಿರ್ದೇಶಕ ಫಾ.ಅನೂಪ್ ಕುರಿಯನ್ ಅಧ್ಯಕ್ಷತೆ ವಹಿಸಿದ್ದರು. ಭಾಷಾ ವಿಭಾಗದಮುಖ್ಯಸ್ಥ ಸರ್ವೇಶ್ ಬಿ.ಎಸ್, ಕಾರ್ಯಾಗಾರದ ಸಂಯೋಜಕ ಎಂ.ಭೈರಪ್ಪ, ಕನ್ನಡ ವಿಭಾಗದ ಪ್ರೊ.ಚಂದ್ರಶೇಖರ್ ಎನ್., ಸೈಯದ್ ಮುಯಿನ್, ರವಿಶಂಕರ್ ಎ.ಕೆ ಹಾಗೂ ಕಿರಣಕುಮಾರ್ ಎಚ್.ಜಿ ಪಾಲ್ಗೊಂಡಿದ್ದರು. ಕಾರ್ಯಾಗಾರ ಒಂದು ವಾರ ನಡೆಯಲಿದ್ದು, ವಿವಿಧ ವಿಶ್ವವಿದ್ಯಾಲಯ, ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧಕರು, ಸಾಹಿತಿಗಳು. ವಿದ್ಯಾರ್ಥಿಗಳು ಭಾಗವಹಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ