ವಿಜಯಪುರದಲ್ಲಿ ರೇಷ್ಮೆಗೂಡಿನ ಬೆಲೆ ಏರಿಕೆ: ರೈತರ ಸಂತಸ

ವಿಜಯಪುರದಲ್ಲಿ ರೇಷ್ಮೆಗೂಡಿನ ಬೆಲೆ ಏರಿಕೆ: ರೈತರ ಸಂತಸ

ವಿಜಯಪುರದಲ್ಲಿ ರೇಷ್ಮೆಗೂಡಿನ ಬೆಲೆ ಏರಿಕೆ: ರೈತರ ಸಂತಸ

ವಿಜಯಪುರ (ದೇವನಹಳ್ಳಿ): ಆರು ತಿಂಗಳ ಹಿಂದೆ ₹400ರಿಂದ ₹500ಕ್ಕೆ ಮಾರಾಟವಾಗುತ್ತಿದ್ದ ಒಂದು ಕೆ.ಜಿ ರೇಷ್ಮೆಗೂಡಿನ ಬೆಲೆ ಈಗ ₹600–₹850ಕ್ಕೆ ಬಿಕರಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರೇಷ್ಮೆ ಗೂಡಿನ ಬೆಲೆ ಏರಿಕೆಯತ್ತ ಮುಖ ಮಾಡಿರುವುದು ರೈತರ ಮುಖದಲ್ಲಿ ನಗು ತರಿಸಿದೆ.

ಆರು ತಿಂಗಳಿನಿಂದ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ದರ ಹೆಚ್ಚಳದತ್ತ ಸಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಆವಕದ ಪ್ರಮಾಣ ಕಡಿಮೆ ಆಗಿರುವುದರಿಂದ ಉತ್ತಮ ಬೆಲೆ ಬಂದಿದೆ. ವಿಜಯಪುರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಿಶ್ರ ತಳಿ ಗೂಡು ಗರಿಷ್ಠ ₹850ರಿಂದ ಕನಿಷ್ಠ ₹600 ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.

ಸೊಪ್ಪಿಗೂ ಬಂತು ಬೇಡಿಕೆ: ರೇಷ್ಮೆ ಗೂಡಿನ ಬೆಲೆ ಏರಿಕೆಯಾಗಿರುವುದರಿಂದ ರೈತರು ರೇಷ್ಮೆ ಕೃಷಿಯತ್ತ ಆಸಕ್ತಿ ತೋರಿದ್ದಾರೆ. ಹಿಂದೆ ನೂರು ಮೊಟ್ಟೆ ರೇಷ್ಮೆ ಹುಳು ಸಾಕುತ್ತಿದ್ದವರೂ, ಈಗ 50 ಮೊಟ್ಟೆ ರೇಷ್ಮೆ ಹುಳು ಸಾಕಿದರೂ ಸಾಕು ಎನ್ನುವಂತಾಗಿದೆ. ಗೂಡಿನ ಬೆಲೆ ಏರಿಕೆಯಾಗುತ್ತಿದ್ದಂತೆ ರೇಷ್ಮೆ ಸೊಪ್ಪಿಗೂ ಬೇಡಿಕೆ ಬಂದಿದೆ.

ರೇಷ್ಮೆ ಸೊಪ್ಪು ಬೆಳೆದಿರುವ ರೈತರಿಗೆ ಮುಂಗಡವಾಗಿ ಹಣ ನೀಡಿ ಸೊಪ್ಪು ಖರೀದಿಸಿ ರೇಷ್ಮೆ ಹುಳು ಸಾಕುತ್ತಿದ್ದಾರೆ. ಒಂದು ಮೂಟೆ ರೇಷ್ಮೆ ಸೊಪ್ಪು ₹600ರಿಂದ ₹800 ವರೆಗೂ ಮಾರಾಟವಾಗುತ್ತಿದ್ದು, ರೇಷ್ಮೆ ಸೊಪ್ಪು ಹೊಂದಿರುವ ರೈತರಿಗೂ ಒಳ್ಳೆಯ ಲಾಭ ದೊರೆಯುತ್ತಿದೆ.

ಜಿಲ್ಲೆಯಲ್ಲಿ 6,396 ರೇಷ್ಮೆ ಬೆಳೆಗಾರರಿದ್ದು, 567 ನೂಲು ಬಿಚ್ಚಣಿಕೆದಾರರು ಇದ್ದಾರೆ. ಹೊಸಕೋಟೆ, ದೇವನಹಳ್ಳಿಯಲ್ಲಿ ಆರು ಸಾವಿರಕ್ಕೂ ಹೆಚ್ಚು ರೇಷ್ಮೆ ಕೃಷಿಕರು ಇದ್ದಾರೆ. ವಿಜಯಪುರದಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಇದೆ. ಹಲವು ಕಾರಣಕ್ಕೆ ಇದರ ಸಂಖ್ಯೆಯಲ್ಲಿ ಅರ್ಧಕ್ಕಿಂತ ಕಡಿಮೆ ಮಂದಿಯಷ್ಟೇ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ತೊಡಗಿದ್ದಾರೆ.

ಮತ್ತೆ ಆಸಕ್ತಿ ತೋರಿದ ರೈತರು

ಈ ಹಿಂದೆ ರೇಷ್ಮೆ ಗೂಡು ಬೆಳೆಯುತ್ತಿದ್ದವರಿಗೆ ನಿರೀಕ್ಷಿತ ಮಟ್ಟದಲ್ಲಿ ಲಾಭ ದೊರೆಯದೆ ರೇಷ್ಮೆ ಕೃಷಿಗೆ ವಿದಾಯ ಹೇಳಿದ್ದರು. ಅಲ್ಲದೇ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಕೀಟ ಇತರೆ ಔಷಧಿಗಳ ಸಿಂಪಡಣೆಗೆ ಬೂಮ್ ಸ್ಪ್ರೇಯರ್ ಯಂತ್ರ ಬಳಕೆಯಿಂದ ಸಮೀಪದ ಹಿಪ್ಪುನೇರಳೆ ಸೊಪ್ಪಿನ ತೋಟಕ್ಕೆ ಹಾನಿಯಾಗುತ್ತಿತು. ಇದರಿಂದ ರೈತರು ಪರ್ಯಾಯ ಬೆಳೆಗಳತ್ತ ಮುಖ ಮಾಡಿದ್ದರು. ಪ್ರಸ್ತುತ ದಿನಗಳಲ್ಲಿ ರೇಷ್ಮೆ ಗೂಡಿಗೆ ಉತ್ತಮ ಬೆಲೆ ಬಂದಿರುವುದರಿಂದ ಮತ್ತೆ ರೇಷ್ಮೆ ಗೂಡು ಬೆಳೆಯುವತ್ತ ರೈತರು ಆಸಕ್ತಿ ತೋರಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ಶಾಣಪ್ಪನಹಳ್ಳಿಯ ಮುನಿಆಂಜನಪ್ಪ ಅವರು ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದ್ವಿತಳಿ (ಬಿವೋಲ್ಟೈನ್) ತಳಿಯ ರೇಷ್ಮೆ ಗೂಡು ಒಂದು ಕೆ.ಜಿ.ಗೆ ₹1,121ಕ್ಕೆ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-15-1983420934

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ