ತುಳುಭಾಷೆಯ ಪೌರಾಣಿಕ ಸ್ಥಾನಮಾನ ಮರುಸ್ಥಾಪನೆಯಾಗಲಿ..

ತುಳುಭಾಷೆಯ ಪೌರಾಣಿಕ ಸ್ಥಾನಮಾನ ಮರುಸ್ಥಾಪನೆಯಾಗಲಿ..

ತುಳುಭಾಷೆಯ ಪೌರಾಣಿಕ ಸ್ಥಾನಮಾನ ಮರುಸ್ಥಾಪನೆಯಾಗಲಿ..

ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವಂತೆ ಕರಾವಳಿ ಭಾಗದ ಜನರಿಂದ ಸುದೀರ್ಘ ಕಾಲದ ಒತ್ತಾ ಯವಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಗಳು ಈ ದಿಸೆಯಲ್ಲಿ ಸಕಾರಾತ್ಮಕವಾಗಿರುವುದು ಒಳ್ಳೆಯ ವಿಚಾರ.

2011ರ ಜನಗಣತಿಯ ಪ್ರಕಾರ ಸುಮಾರು 18,46,427 ಮಂದಿ ತುಳು ಮಾತನಾಡುವವರಿದ್ದಾರೆ. ಸಂವಿಧಾನದಲ್ಲಿ ಮಾನ್ಯತೆ ಪಡೆದಿರುವ ಸಂಸ್ಕೃತ ಹಾಗೂ ಮಣಿಪುರಿ ಭಾಷೆಗಳಿಗಿಂತಲೂ ತುಳು ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಸೆ.18ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳುವಿಗೆ ದ್ವಿತೀಯ ಭಾಷೆಯ ಸ್ಥಾನಮಾನ ನೀಡುವ ಘೋಷಣೆಯಾಗಲಿ. ಇದರಿಂದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಪೂರಕ ವೇದಿಕೆ ಸೃಷ್ಟಿಯಾಗುತ್ತದೆ.

ಸಾಂಸ್ಕೃತಿಕ ಮಹತ್ವ: ತುಳು ಸ್ವಂತ ಲಿಪಿ ಹೊಂದಿ ರುವ ಸಮೃದ್ಧ ಭಾಷೆ. ಸಹಸ್ರ ವರ್ಷಗಳ ಮೌಖಿಕ ಸಾಹಿತ್ಯ, ದೇವಾಧಿ ದೇವರ ಜಿನ, ಯಕ್ಷ ಯಕ್ಷಿ ಶಿವ ವಿಷ್ಣು, ದುರ್ಗಾ ಧರ್ಮ ದೇವತೆ, ಬ್ರಹ್ಮ ನಾಗ ದೈವ ದೇವರ ಕಥೆಗಳಲ್ಲೂ ಉಲ್ಲೇಖವಿರುವ ಇತಿಹಾಸ ಹೊಂದಿದೆ. ಜೈನ, ಹಿಂದೂ, ಕ್ರೈಸ್ತ, ಮುಸ್ಲಿಂ ಧರ್ಮಗಳ ಜನರು ಸಾಮರಸ್ಯದಿಂದ ಬದುಕಿರುವ ನೆಲ ತುಳು ನಾಡು. ಕೃಷಿ ಸಂಸ್ಕೃತಿ, ಮೌಖಿಕ ಸಾಹಿತ್ಯ ದಂತಹ ಪಾಡ್ದನ, ಸಿರಿ ಮಹಾ ಕಾವ್ಯ, ಯಕ್ಷ ಗಾನ ದಂತಹ ವಿಶಿಷ್ಟ ಕಲಾ ಪ್ರಕಾ ರದ ಶ್ರೀಮಂತಿಕೆ ಈ ನೆಲದ ಹೆಗ್ಗಳಿಕೆ.

ಪುರಾಣ, ದಂತಕಥೆ, ಇತಿಹಾಸ ಹೇಳುವಂತೆ ಇಕ್ಷಾಕು ವಂಶ, ಆದಿನಾಥರ ಕಾಲದಿಂದಲೂ ತುಳುನಾಡು ಅಸ್ತಿತ್ವದಲ್ಲಿತ್ತು. ಭರತ ಚಕ್ರ ವರ್ತಿ ದಿಗ್ವಿಜಯದ ಮೂಲಕ ಷಟ್‌ಖಂಡ ಗೆದ್ದಾಗ ಈ ತುಳುನಾಡು ಸೇರಿತ್ತು. ಹೆಚ್ಚಿನ ರಾಜ್ಯ ಭಾರ ಮಾಡಿದ ಎಲ್ಲ ಅರಸರ ಬಳಿ ಇದ್ದ ವೀರ ಕಟ್ಟಾಳಯಗಳಲ್ಲಿ ತುಳುನಾಡಿನ ಸೈನಿ ಕರಿದ್ದರು ಎಂಬುದು ಇತಿಹಾಸ ಕೃತಿಗಳಿಂದ ತಿಳಿದು ಬರುತ್ತದೆ. ಸಂಗಮರ ಕಾಲದಲ್ಲಿ ಕ್ರಿ.ಪೂ. 3ನೇ ಶತಮಾನದಿಂದ ಒಂದನೇ ಶತ ಮಾನದ ನಡುವಿನ ಅವಧಿಯಲ್ಲಿ ಆಚಾರ್ಯ ಕುಂದುಕುಂದರು ತುಳುನಾಡಿನಲ್ಲಿ ಮಠ ಸ್ಥಾಪಿಸಿರುವುದನ್ನು ದಾಖಲೆಗಳು ಸಾಕ್ಷ್ಯೀಕರಿಸುತ್ತವೆ.

ನೂರಾರು ಸವಾಲುಗಳ ನಡುವೆಯೂ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ತನ್ನ ಸ್ವಂತಿಕೆ ಉಳಿಸಿಕೊಂಡು ಜಗತ್ತಿನಲ್ಲಿ ವಿಶಿಷ್ಟ ಭಾಷೆ ಎಂದು ಗುರುತಿಸಿಕೊಂಡಿದೆ. ಹೃದಯ ವೈಶಾಲ್ಯ ಹೊಂದಿರುವ ತುಳುವರು, ತಮ್ಮ ಭಾಷೆಗೆ ಒಂದಲ್ಲ ಒಂದು ದಿನ ಮಾನ್ಯತೆ ಸಿಗಬಹುದೆಂದು ಸಹನೆಶೀಲರಾಗಿ ವರ್ಷಗಳಿಂದ ಕಾಯುತ್ತ ಬಂದಿದ್ದಾರೆ.

ದೇವಾಲಯ, ಬಸದಿಗಳು, ಧಾರ್ಮಿಕ ವೈವಿಧ್ಯ, ಜಾನಪದ ಕಥೆ, ಹಾಡು, ಡಕ್ಕೆ, ದುಡಿ, ಗಗ್ಗರ ಡೋಲು, ಚೆಂಡೆ, ತಾಳ, ವಾಸ್ತು ವೈಭವ, ಆಹಾರ ಸಂಸ್ಕೃತಿ ಹೀಗೆ ಕಲಾ ಸಮೃದ್ಧಿ, ಜನರ ಶ್ರದ್ಧೆ, ಆರಾಧನೆ ತುಳುನಾಡಿನ ಸಮಷ್ಟಿಯ ಪ್ರತಿಮೆಯಂತಿವೆ. ತುಳುನಾಡ ತಿಗಳಾರಿ ಲಿಪಿ ಬಳಸಿಕೊಂಡು ಕೇರಳದ ಮಲಯಾಳ ಭಾಷೆ ಸಮೃದ್ಧವಾಗಿದೆ. ರಾಜರು, ಮಠಮಾನ್ಯಗಳ ಆಶ್ರಯದಲ್ಲಿ ಪುರಾ ತನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಇಂಥ ಶ್ರೇಷ್ಠ ಭಾಷೆಗೆ ಸಿಗಬೇಕಾದ ಸ್ಥಾನಮಾನ ಮರಳಿ ಸಿಗಲಿ.

(ಲೇಖಕರು ಮೂಡುಬಿದಿರೆ ದಿಗಂಬರ ಜೈನ ಮಠದ ಪೀಠಾಧಿಪತಿ)

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ