ಜಂಬೂಸವಾರಿಗೂ ಮುನ್ನವೇ ‘ಬೆಳಕಿನ ದಸರೆ’; ಏನಿದರ ಪರಿಣಾಮ

ಜಂಬೂಸವಾರಿಗೂ ಮುನ್ನವೇ ‘ಬೆಳಕಿನ ದಸರೆ’; ಏನಿದರ ಪರಿಣಾಮ

ಜಂಬೂಸವಾರಿಗೂ ಮುನ್ನವೇ ‘ಬೆಳಕಿನ ದಸರೆ’; ಏನಿದರ ಪರಿಣಾಮ

ಮಡಿಕೇರಿ: ಮೈಸೂರು ದಸರೆಗೂ ಮುನ್ನವೇ ಮಡಿಕೇರಿಯ ‘ಬೆಳಕಿನ ದಸರೆ’ ನಡೆಯುವುದರಿಂದ ಆಗುವ ಪರಿಣಾಮಗಳನ್ನು ಕುರಿತು ಚರ್ಚೆಗಳು ಆರಂಭವಾಗಿವೆ.

ಇದರಿಂದ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಬಹುದೇ?, ನಗರದಲ್ಲಿ ಪ್ರವಾಸಿಗರ ಕೊರತೆ ಎದುರಾಗಬಹುದೇ? ಎಂಬಿತ್ಯಾದಿ ಚರ್ಚೆಗಳೂ ಶುರುವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಈ ಬಗೆಯ ನಿರ್ಧಾರ ಇದೇ ಮೊದಲು ಎನಿಸಿರುವ ಕಾರಣ ಪರಿಣಾಮಗಳ ಕುರಿತು ಯಾರಿಗೂ ಖಚಿತತೆ ಇಲ್ಲ.

ಮುಖ್ಯವಾಗಿ, ಮಡಿಕೇರಿ ದಸರೆ ನೋಡಲೆಂದೇ ಬರುವ ಪ್ರವಾಸಿಗರಿಗೆ ಇದರಿಂದ ತೊಂದರೆಯಾಗುವುದು ನಿಶ್ಚಿತ. ಆಯುಧಪೂಜೆಯ ದಿನವೇ ಈ ಬಾರಿ ಮಡಿಕೇರಿಯಲ್ಲಿ ದಸರೆ ನಡೆಯುವುದರಿಂದ ಸಹಜವಾಗಿಯೇ ಸಾರ್ವಜನಿಕರು ಆಯುಧಪೂಜೆ ಹಬ್ಬದಲ್ಲಿ ತೊಡಗಿರುವುದರಿಂದ ಇತ್ತ ಬರುವುದು ಕಡಿಮೆ.

ಮೈಸೂರು ದಸರೆಗೆ ಬಂದವರು ಅಲ್ಲಿ ಜಂಬೂಸವಾರಿಯನ್ನು ವೀಕ್ಷಿಸಿ ಬೆಳಕಿನ ದಸರೆಯನ್ನು ಕಣ್ತುಂಬಿಕೊಳ್ಳಲೆಂದೇ ಬರುವವರು ಅಧಿಕ. ಇವರಿಗೂ ಈ ದಿನ ಬದಲಾವಣೆಯಿಂದ ತೊಂದರೆಯಾಗುತ್ತದೆ. ಅವರು ಒಂದು ದಿನ ಮುಂಚಿತವಾಗಿಯೇ ಬಂದು ರಾತ್ರಿ ಇಡೀ ಇಲ್ಲಿ ಕಳೆದು ಮರುದಿನ ಮೈಸೂರಿಗೆ ಹೋಗಬೇಕಾಗಿದೆ. ಇಂತಹ ಕಾರ್ಯ ಮಾಡುವವರ ಸಂಖ್ಯೆಯೂ ಕಡಿಮೆಯಾಗಲಿದೆ ಎಂದೇ ಅಂದಾಜಿಸಲಾಗಿದೆ.

ಮುಖ್ಯವಾಗಿ, ದಸರೆ ಪ್ರಿಯರಲ್ಲಿ ಗೊಂದಲ ಮೂಡುತ್ತದೆ. ಹೆಚ್ಚಿನ ಪ್ರಚಾರ ನಡೆಸದೇ ಹೋದರೆ ಖಂಡಿತವಾಗಿಯೂ ಮಡಿಕೇರಿ ದಸರೆ ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಲಿದೆ. ಕೇವಲ ಕೊಡಗು ಜಿಲ್ಲೆ ಅಥವಾ ಅಕ್ಕಪಕ್ಕದ ಜಿಲ್ಲೆಯವರಷ್ಟೇ ದಸರೆ ವೀಕ್ಷಿಸುವಂತಾಗುತ್ತದೆ.

ದಿನ ಬದಲಾವಣೆಯಾಗಿರುವುದು ಅರಿಯದೇ ಮೈಸೂರು ದಸರೆಗೆ ಬಂದವರು ಅಲ್ಲಿನ ದಸರೆಯನ್ನು ಕಣ್ತುಂಬಿಕೊಂಡು ಇಲ್ಲಿಗೆ ಬಂದರೆ ಅವರಿಗಂತೂ ತೀವ್ರತರವಾದ ನಿರಾಸೆಯಾಗುವುದು ಖಚಿತ. ಆ ದಿನ ಇಲ್ಲೇನೂ ಇರದೇ ಇರುವುದರಿಂದ ಸಹಜವಾಗಿಯೇ ಮೂರು ಗಂಟೆಗಳಿಗೂ ಅಧಿಕ ಕಾಲ ಪ್ರಯಾಣ ಮಾಡಿ ಬರುವ ಅವರು ತೀವ್ರ ನಿರಾಸೆಗೆ ಒಳಾಗಾಗುತ್ತಾರೆ.

ಪಂಚಾಂಗದ ಪ್ರಕಾರ ದಶಮಿ ತಿಥಿ ಇದೇ ಮೊದಲ ಬಾರಿಗೆ ಮಧ್ಯಾಹ್ನ ಮುಕ್ತಾಯವಾಗಿಲ್ಲ. ಈ ಹಿಂದೆಯೂ ಅನೇಕ ಬಾರಿ ಆಗಿದೆ. ಆಗ ಬದಲಾವಣೆ ಮಾಡದೇ ಈಗ ಬದಲಾವಣೆ ಮಾಡಿದ್ದಾದರೂ ಏಕೆ ಎಂದು ಬಹುಜನರು ಪ್ರಶ್ನಿಸುತ್ತಿದ್ದಾರೆ.

ಮೈಸೂರು ದಸರೆಗೆ ಇಲ್ಲದ ಪಂಚಾಂಗದ ತೊಡಕು ಮಡಿಕೇರಿ ದಸರೆಗೆ ಏಕೆ ಎಂದೂ ಕೇಳುತ್ತಿದ್ದಾರೆ.

ಮಡಿಕೇರಿ ದಸರೆಯ ಬದಲಾದ ದಿನದ ಕುರಿತು ಉಂಟಾಗಿರುವ ಗೊಂದಲಗಳನ್ನು ಪರಿಹರಿಸಲು ಸಂಬಂಧಪಟ್ಟ ಎಲ್ಲರೂ ಮತ್ತೊಮ್ಮೆ ಸಭೆ ಸೇರುವ ಸಾಧ್ಯತೆ ಇದೆ. ಈ ಕುರಿತು ಕೇರಳ ಮತ್ತು ದಕ್ಷಿಣಕನ್ನಡದ ಜ್ಯೋತಿಷಿಗಳ ಸಲಹೆ ಪಡೆಯಲೂ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ