ಬಂಡೀಪುರ ಸಫಾರಿ ವಾಹನಗಳಿಗೆ ಜಿಪಿಎಸ್‌, ಡ್ಯಾಶ್ ಕ್ಯಾಮ್‌ ಅಳವಡಿಕೆ

ಬಂಡೀಪುರ ಸಫಾರಿ ವಾಹನಗಳಿಗೆ ಜಿಪಿಎಸ್‌, ಡ್ಯಾಶ್ ಕ್ಯಾಮ್‌ ಅಳವಡಿಕೆ

ಬಂಡೀಪುರ ಸಫಾರಿ ವಾಹನಗಳಿಗೆ ಜಿಪಿಎಸ್‌, ಡ್ಯಾಶ್ ಕ್ಯಾಮ್‌ ಅಳವಡಿಕೆ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದೊಳಗೆ ಸಫಾರಿ ಮಾಡುವಾಗ ವನ್ಯಜೀವಿಗಳಿಗೆ ತೊಂದರೆಯಾಗದಂತೆ, ಸಹಜ ಚಲನವಲನಕ್ಕೆ ಅಡ್ಡಿಯಾಗದಂತೆ ನಿಗಾ ಇರಿಸುವ ಉದ್ದೇಶದಿಂದ ಅರಣ್ಯ ಇಲಾಖೆಯು 18 ಸಫಾರಿ ವಾಹನಗಳಿಗೆ ಜಿಪಿಎಸ್ ಹಾಗೂ ಡ್ಯಾಶ್‌ ಕ್ಯಾಮೆರಾ ಅಳವಡಿಕೆ ಮಾಡಿದೆ.

ಸಫಾರಿ ವೇಳೆ ಹುಲಿ, ಚಿರತೆ ಸಹಿತ ಇನ್ನಿತರ ವನ್ಯಪ್ರಾಣಿಗಳು ಕಾಣಿಸಿಕೊಂಡರೆ ವಾಹನ ಚಾಲಕರು ಇತರೆ ಸಫಾರಿ ವಾಹನಗಳ ಚಾಲಕರಿಗೆ ಸುದ್ದಿ ಮುಟ್ಟಿಸುತ್ತಿದ್ದರು. ಪರಿಣಾಮ ಸಫಾರಿಗೆ ತೆರಳಿದ್ದ ಎಲ್ಲ ವಾಹನಗಳು ಪ್ರಾಣಿಗಳು ಇರುವ ಜಾಗಕ್ಕೆ ದಾಂಗುಡಿ ಇಡುತ್ತಿದ್ದವು. ಒಂದೇ ಕಡೆ ಹಲವು ವಾಹನಗಳು ಜಮಾಯಿಸುತ್ತಿದ್ದರಿಂದ ಪ್ರಾಣಿಗಳ ಸಹಜ ಬೇಟೆ ಹಾಗೂ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿತ್ತು.

ಇದಲ್ಲದೆ ಸಫಾರಿ ವಲಯ ಹೊರತುಪಡಿಸಿ ನಿರ್ಬಂಧಿತ ಸ್ಥಳಗಳಿಗೂ ಕೆಲವರು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೂರುಗಳು ಹೆಚ್ಚಾಗಿದ್ದವು. ಆಗಾಗ ವನ್ಯಜೀವಿಗಳು ಪ್ರವಾಸಿಗರ ಮೇಲೆ ದಾಳಿಗೂ ಮುಂದಾಗುತ್ತಿದ್ದ ಘಟನೆಗಳು ನಡೆಯುತ್ತಿದ್ದವು. ಇಂತಹ ನಿರ್ಬಂಧಿತ ಚಟುವಟಿಕೆಗಳನ್ನು ತಡೆಯಲು ಹಾಗೂ ನಿಗಾ ಇರಿಸಲು ವಾಹನಗಳಲ್ಲಿ ಜಿಪಿಎಸ್ ಹಾಗೂ ಡ್ಯಾಶ್ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಜಿಪಿಎಸ್‌ ಹಾಗೂ ಕ್ಯಾಮೆರಾ ಅಳವಡಿಕೆಯಿಂದ ವಾಹನಗಳು ಸಂಚರಿಸುವ ಮಾರ್ಗ, ವೇಗ, ಪ್ರಾಣಿಗಳ ಚಲನವಲನ ಸಹಿತ ಹಲವು ಮಾಹಿತಿಗಳು ಲಭ್ಯವಾಗಲಿದೆ. ಸಫಾರಿ ವೇಳೆ ನಡೆಯುವ ಚಟುವಟಿಕೆಗಳನ್ನು ದಾಖಲಿಸಿಕೊಳ್ಳಬಹುದು, ವನ್ಯಜೀವಿಗಳ ಹಾಗೂ ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ತಂತ್ರಜ್ಞಾನ ಅಳವಡಿಕೆ ಹೆಚ್ಚು ಸಹಕಾರಿ ಎನ್ನುತ್ತಾರೆ ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್.

ಕೆಲ ಪ್ರವಾಸಿಗರು ಸಫಾರಿ ಸಮಯದಲ್ಲಿ ಪ್ರಾಣಿಗಳನ್ನು ಕಂಡಾಗ ಜೋರಾಗಿ ಕೂಗುವುದು, ಗದ್ದಲ, ಗಲಾಟೆ ಮಾಡುವುದು, ಚಲನವಲನಗಳಿಗೆ ಅಡ್ಡಿಪಡಿಸುವ ಘಟನೆಗಳು ನಡೆಯುತ್ತಿತ್ತು. ಚಾಲಕರು ಹಾಗೂ ಗೈಡ್‌ಗಳ ಎಚ್ಚರಿಕೆ ನೀಡಿದಾಗ ಅವರ ವಿರುದ್ಧವೇ ಇಲಾಖೆ ಅಧಿಕಾರಿಗಳಿಗೆ ದೂರು ನೀಡುತ್ತಿರುವುದು ನಡೆಯುತ್ತಿತ್ತು. ಜಿಪಿಎಸ್‌ ಹಾಗೂ ಡ್ಯಾಶ್‌ ಕ್ಯಾಮೆರಾ ಅಳವಡಿಕೆಯಿಂದ ಆರೋಪಗಳ ಬಗ್ಗೆ, ನಿಯಮ ಉಲ್ಲಂಘನೆಯ ಬಗ್ಗೆ ಮೇಲಧಿಕಾರಿಗಳು ತಿಳಿಯಲು ಸಹಕಾರಿಯಾಗಿದೆ ಎನ್ನುತ್ತಾರೆ ಸಫಾರಿ ವಾಹನಗಳ ಚಾಲಕರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ