
ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ: ಶಾಸಕ ಬಿ.ಆರ್. ಪಾಟೀಲರ
ಆಳಂದ: ‘ಖಾಸಗೀಕರಣ ಹಾಗೂ ಸರ್ವಾಧಿಕಾರ ವ್ಯವಸ್ಥೆಯಿಂದ ಸಮೂಹ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡಿದೆ, ಇಂದು ಹಲವು ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ’ ಎಂದು ಶಾಸಕ ಬಿ.ಆರ್.ಪಾಟೀಲ ಅಭಿಮತಪಟ್ಟರು.
ಪಟ್ಟಣದಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುದ್ರಣ ಮಾಧ್ಯಮಗಳಿಗೆ ಖರ್ಚುವೆಚ್ಚ ಹೆಚ್ಚುತ್ತಿದ್ದು, ಇಂತಹ ಪತ್ರಿಕೆಗಳು ಜಾಹೀರಾತು ಅವಲಂಭಿಸುವುದು ಅನಿವಾರ್ಯ. ಇದರ ಮಧ್ಯೆ ಪ್ರಜಾವಾಣಿ, ಲಂಕೇಶ್ ಅಂತಹ ಕೆಲ ಪತ್ರಿಕೆಗಳು ಜನಪರ ಧ್ವನಿಯಾಗಿವೆ. ಸುಳ್ಳು ಹಾಗೂ ವೈಭವೀಕರಣದ ಸುದ್ದಿಗಳೇ ದೃಶ್ಯ ಮಾಧ್ಯಮಗಳಲ್ಲಿ ವಿಜೃಂಭಿಸುತ್ತಿವೆ ಎಂದರು.
ತಹಶೀಲ್ದಾರ್ ಅಣ್ಣಾರಾವ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಹಿರೇಮಠದ ಸಿದ್ದೇಶ್ವರ ಸ್ವಾಮೀಜಿ, ವಿಜಯಕುಮಾರ ಜಿಡಗಿ ಮಾತನಾಡಿದರು. ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಲಿಂಗ ತೇಲ್ಕರ್ ಅಧ್ಯಕ್ಷತೆ ವಹಿಸಿ ಪತ್ರಿಕಾ ಭವನ ಹಾಗೂ ಪತ್ರಕರ್ತರಿಗೆ ವಿವಿಧ ಸೌಲಭ್ಯ ಒದಗಿಸಲು ಮನವಿ ಮಾಡಿದರು.
ಸಿಪಿಐ ಶರಣಬಸಪ್ಪ ಕೋಡ್ಲಾ, ವೈದ್ಯಾಧಿಕಾರಿ ಉಸ್ಮಾನ್ ಅಲಿ, ಸುವರ್ಣಾ, ಈರಣ್ಣಾ ಝಳಕಿ, ರೇವಣಸಿದ್ದಪ್ಪ ನಾಗೂರೆ, ಸಲಾಂ ಸಗರಿ, ಅಭಿನಂದನ್ ಬೇಡಗೆ, ಬಾಬುರಾವ ಅರುಣೋದಯ, ಸಂಜೀವಕುಮಾರ ಕಾಂಬಳೆ, ಸೂರ್ಯಕಾಂತ ತಟ್ಟಿ, ಬಾಬುರಾವ ಮಡ್ಡೆ, ಅಪ್ಪಾಸಾಹೇಬ ತೀರ್ಥೆ, ಪ್ರವೀಣ ಮೊದಲೆ, ಸುನೀಲ ಹಿರೋಳ್ಳಿ, ಎಲ್ ಎಸ್ ಬೀದಿ, ರಾಜಶೇಖರ ಯಕಂಚಿ, ತೈಯಬಲಿ ಜರ್ಧಿ, ಪ್ರಭಾಕರ ಸಲಗರೆ, ಡಿ.ಎಂ.ಪಾಟೀಲ, ಶಾಂತಪ್ಪ ಕೋರೆ, ಪ್ರಭು ಪಾಟೀಲ, ಪ್ರಕಾಶ ಜಂಗಲೆ, ಹಣಮಂತ ಶೇರಿ, ಹಣಮಂತ ಕುಲಕರ್ಣಿ, ಮಹೇಶ ಸಾಕರೆ, ಚಂದ್ರಶೇಖರ ಜಂಗಲೆ ಉಪಸ್ಥಿತರಿದ್ದರು. ಪತ್ರಿಕಾ ವಿತರಕರಾದ ಮಹಾವೀರ ಕಾಸರ, ಋಷಭನಾಥ ಡೋಲೆ ಹಾಗೂ ನೂತನ ಅಧ್ಯಕ್ಷ ಶಿವಲಿಂಗ ತೇಲ್ಕರ್ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.