
ಕೋಲಾರ: ಮನೆಯಲ್ಲಿ ಕಳ್ಳತನ, ಆರೋಪಿ ಬಂಧನ
ಬೇತಮಂಗಲ: ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೆಜಿಎಫ್ ತಾಲ್ಲೂಕಿನ ಅಂಡರ್‌ಸನ್ ಪೇಟೆ ನಿವಾಸಿ ಕಿರಣ್ ಆರ್. ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನಿಂದ ₹10.8 ಲಕ್ಷ ಮೌಲ್ಯದ 72 ಗ್ರಾಂ ಚಿನ್ನದ ಆಭರಣ ಜಪ್ತಿ ಮಾಡಿದ್ದಾರೆ.
ಮಾರ್ಚ್ 1ರಂದು ಸಿದ್ದಾರೆಡ್ಡಿದಿನ್ನೆ ನಾರಾಯಣಸ್ವಾಮಿ ಮನೆಯಲ್ಲಿ 40 ಗ್ರಾಂ ಚಿನ್ನದ ಒಡವೆ ಮತ್ತು ನಗದು ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ಆಗಸ್ಟ್‌ನಲ್ಲಿ ಜಕ್ಕರಸನಕುಪ್ಪ ಗ್ರಾಮ ಪಂಚಾಯಿತಿಯ ಸಂಗನಹಳ್ಳಿ ದೇವಸ್ಥಾನದಲ್ಲಿ ತಾಳಿಬೊಟ್ಟುಗಳನ್ನು ಹಾಗೂ ರಾಬರ್ಟ್‍ಸನ್‍ಪೇಟೆ ಸ್ವರ್ಣನಗರದ ಮನೆಯೊಂದರಲ್ಲಿ ಚಿನ್ನದ ಒಡವೆಗಳನ್ನು ಕಳುವು ಮಾಡಿರುವುದಾಗಿಯೂ ಆರೋಪಿ ಒಪ್ಪಿಕೊಂಡಿದ್ದಾನೆ.