ಅನಂತನಾಗ್‌ಗೆ ಅಭಿನಂದನೆ ಪ್ರಸ್ತಾವ: ಕಾಂಗ್ರೆಸ್ ಸದಸ್ಯರು ಗೈರು; ಕೆರಳಿದ ಬಿಜೆಪಿ

ಅನಂತನಾಗ್‌ಗೆ ಅಭಿನಂದನೆ ಪ್ರಸ್ತಾವ: ಕಾಂಗ್ರೆಸ್ ಸದಸ್ಯರು ಗೈರು; ಕೆರಳಿದ ಬಿಜೆಪಿ

ಅನಂತನಾಗ್‌ಗೆ ಅಭಿನಂದನೆ ಪ್ರಸ್ತಾವ: ಕಾಂಗ್ರೆಸ್ ಸದಸ್ಯರು ಗೈರು; ಕೆರಳಿದ ಬಿಜೆಪಿ

ಬೆಂಗಳೂರು: ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ನಟ ಅನಂತ್ ನಾಗ್ ಅವರಿಗೆ ಅಭಿನಂದನೆ ಸಲ್ಲಿಸುವ ಪ್ರಸ್ತಾವ ವೇಳೆ ಆಡಳಿತ ಪಕ್ಷದ ಸದಸ್ಯರ ಗೈರು ಹಾಜರಿ ವಿರೋಧ ಪಕ್ಷ ಬಿಜೆಪಿ ಸದಸ್ಯರನ್ನು ಕೆರಳಿಸಿತು.

ವಿರೋಧ ಪಕ್ಷದ ನಾಯಕ ಆರ್. ಅಶೋಕ ಕಲಾಪ ಆರಂಭವಾಗುತ್ತಿದ್ದಂತೆ ಈ ವಿಷಯದ ಕುರಿತು ಅಸಮಾಧಾನ ಹೊರಹಾಕಿ, ಶ್ರೇಷ್ಠ ಕಲಾವಿದನಿಗೆ ಈ ರೀತಿ ಅಗೌರವ ತೋರುವುದು ಎಷ್ಟು ಸರಿ? ಮುಖ್ಯಮಂತ್ರಿಗಳಾದರೂ ಸಭೆಯಲ್ಲಿ ಉಪಸ್ಥಿತರಿರಬಹುದಿತ್ತು. ಬೆರಳೆಣಿಕೆಯಷ್ಟು ಆಡಳಿತ ಪಕ್ಷದ ಸದಸ್ಯರೂ ಹಾಜರಿಲ್ಲದಿರುವುದು ಏನು ತೋರಿಸುತ್ತದೆ, ಹೀಗಾಗಿ ಕೆಲವು ಹೊತ್ತು ಕಲಾಪವನ್ನು ಮುಂದೂಡಿ ಎಂದು ಒತ್ತಾಯಿಸಿದರು.

ಆಗ ಮಧ್ಯ ಪ್ರವೇಶಿಸಿದ ಸಚಿವ ಕೃಷ್ಣ ಭೈರೆಗೌಡ, ಅಭಿನಂದನೆ ಪ್ರಸ್ತಾವ ಆರಂಭವಾಗಲಿ, ಆ ಹೊತ್ತಿಗೆ ಎಲ್ಲ ಸದಸ್ಯರು ಬರುತ್ತಾರೆ, ಸರ್ಕಾರದ ಪರವಾಗಿ ನಾನು ಮಾತನಾಡುವೆ ಎಂದು ಮಾತನಾಡಲು ಅಣಿಯಾದರು. ಆಗ ಆರ್. ಅಶೋಕ್, ನೀವು ಈ ರೀತಿ ಖಾಲಿ ಕುರ್ಚಿಗಳ ಸಮ್ಮುಖದಲ್ಲಿ ಅನಂತನಾಗ್ ಅವರನ್ನು ಅಭಿನಂದನೆ ಸಲ್ಲಿಸುವುದು ಎಂದರೆ ಏನು ಗೌರವ, ಖಾಲಿ ಖುರ್ಚಿಯಲ್ಲಿ ಅನಂತನಾಗ್‌ಗೆ ಗೌರವ ಎಂದು ಸುದ್ದಿಯಾದರೆ ಕಲಾವಿದರಿಗೆ ನೋವಾಗುವುದಿಲ್ಲವೇ? ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಿದ ಕಲಾವಿದ, ಎಲ್ಲರೂ ಅವರನ್ನು ಅಭಿನಂದಿಸಬೇಕಿದೆ, ಸದಸ್ಯರ ಗೈರು ಹಾಜರಿಯಲ್ಲಿ ನೀವು ಮಾತನಾಡಲು ಆರಂಭಿಸಿದರೆ ನಾವು ಸಭಾತ್ಯಾಗ ಮಾಡಬೇಕಾಗುತ್ತದೆ ಎಂದರು.

ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರ ವಿರುದ್ಧ ವಾಕ್ ಪ್ರಹಾರ ನಡೆಸಿದ ಆರ್. ಅಶೋಕ, ಮುಖ್ಯ ಸಚೇತಕರಿಗೆ ಒಂದಿಷ್ಟು ಕೆಲಸ ಹಚ್ಚಿ, ಅವರು ಸದಸ್ಯರನ್ನು ಫೋನ್ ಮಾಡಿ ಎಲ್ಲರನ್ನೂ ಹಾಜರಾಗುವಂತೆ ಮಾಡಲಿ, ಈ ಮಹತ್ವದ ಅಭಿನಂದನೆ ಹಾಗೂ ಬರಗಾಲದ ಚರ್ಚೆ ವೇಳೆಯಲ್ಲಿಯೂ ಸದಸ್ಯರು ಬಾರದೇ ಹೋದರೆ ಏನು? ಸಭಾಧ್ಯಕ್ಷರಾದ ನೀವು ಸಮಯಕ್ಕೆ ಸರಿಯಾಗಿ ಬಂದು ಕಲಾಪ ಆರಂಭಿಸಿದ್ದೀರಿ ಅದಕ್ಕೆ ಅಭಿನಂದನೆ ಸಲ್ಲಿಸುವೆ, ಆದರೆ, ಈಗ ಕಲಾಪ ಮುಂದೂಡಿ ಅಶೋಕ್ ಪಟ್ಟಣ ಅವರಿಗೆ ಕೆಲಸ ಹಚ್ಚಿ ಎಂದರು.

ಬಿಜೆಪಿಯ ಆರಗ ಜ್ಞಾನೇಂದ್ರ, 'ಅಶೋಕ ಪಟ್ಟಣ ಅವರಿಗೆ ಮಂತ್ರಿಯಾಗಬೇಕಿತ್ತು, ಆದರೆ ಮಂತ್ರಿಯಾಗದ ಹಿನ್ನೆಲೆಯಲ್ಲಿ ಅವರು ಬೇಸರಗೊಂಡಿದ್ದಾರೆ, ಹಿಗಾಗಿ ಈ ಜವಾಬ್ದಾರಿ ಸರಿಯಾಗಿ ನಿಭಾಯಿಸುತ್ತಿಲ್ಲವೇನೋ' ಎಂದು ಕಾಲೆಳೆದರು.

ಮಂತ್ರಿಗಳ ಗೈರು ಹಾಜರಿಗೆ ಬಗ್ಗೆ ಅಸಮಾಧಾನ ಹೊರಹಾಕುವ ವೇಳೆ ಆರ್. ಅಶೋಕ `ಮನೆಯಲ್ಲಿರುವ ಮಂತ್ರಿಗಳು ಕಲಾಪಕ್ಕೆ ಬರಲಿ, ಪೇಮೆಂಟ್ ಕೊಟ್ಟು ಮಿನಿಸ್ಟರ್ ಆದವರು ಬೇಕಾದರೆ ಮನೆಯಲ್ಲಿಯೇ ಇರಲಿ ಎಂದು ಹೇಳಿದ್ದು ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿತು.

ಕಾಂಗ್ರೆಸ್ ನ ಕೋನರೆಡ್ಡಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸಚಿವರ ಬಗ್ಗೆ ಈ ರೀತಿ ಅಸಂಬದ್ಧವಾಗಿ ಮಾತನಾಡುವುದು ಸರಿಯಲ್ಲ, ಕೂಡಲೇ ಇದನ್ನು ಕಡತದಿಂದ ತೆಗೆದು ಹಾಕಿ ಎಂದು ಒತ್ತಾಯಿಸಿದರು.

ಈ ಎಲ್ಲ ಚರ್ಚೆ ತಾರಕಕ್ಕೇರುವುದನ್ನು ಅರಿತ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಕಲಾಪವನ್ನು 10 ನಿಮಿಷ ಮುಂದೂಡಿದರು.  

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ