ಗದಗ | ಕೆಆರ್‌ಐಡಿಎಲ್ ಎಂಜಿನಿಯರ್ ನಾಪತ್ತೆ: ಪತ್ರದಲ್ಲಿ ಇರುವುದೇನು?

ಗದಗ | ಕೆಆರ್‌ಐಡಿಎಲ್ ಎಂಜಿನಿಯರ್ ನಾಪತ್ತೆ: ಪತ್ರದಲ್ಲಿ ಇರುವುದೇನು?

ಗದಗ | ಕೆಆರ್‌ಐಡಿಎಲ್ ಎಂಜಿನಿಯರ್ ನಾಪತ್ತೆ: ಪತ್ರದಲ್ಲಿ ಇರುವುದೇನು?

ಗದಗ: ಇಲ್ಲಿನ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್‌ಐಡಿಎಲ್) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಫರ್ವೀಜ್ ಧಾರವಾಡ ಎಂಬುವರು ನಾಪತ್ತೆಯಾಗಿದ್ದು, ಅವರು ಬರೆದಿದ್ದಾರೆ ಎನ್ನಲಾದ ಪತ್ರದ ಅಂಶಗಳು ಹೀಗಿದೆ.

ಬೆಂಗಳೂರಿನ ಕೆ.ಆರ್.ಐ.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕರಿಗೆ ಸೆ.12ರಂದು ಫರ್ವೀಜ್ ಬರೆದ ಪತ್ರದಲ್ಲಿ, ‘ಗದಗ ಉಪವಿಭಾಗದಲ್ಲಿ ಸುಮಾರು ವರ್ಷಗಳಿಂದ ಅನುದಾನದ Diversion ಆಗಿರುವ ಕಾರಣ, ಕೆಲವು ಕಾಮಗಾರಿಗಳು ಸ್ಥಗಿತಗೊಂಡಿರುತ್ತವೆ. ಇದರಿಂದ ಜನಪ್ರತಿನಿಧಿಗಳು ಹಾಗೂ ಕಾಮಗಾರಿ ನೀಡಿರುವ ಇಲಾಖೆಗಳು ನಮ್ಮ ಇಲಾಖೆಗೆ ಛೀಮಾರಿ ಹಾಕುತ್ತಿದ್ದಾರೆ. ಕೆಲವು ಹಳೆಯ ಕಾಮಗಾರಿಗಳಿಗೆ ಬೇರೆ ಇಲಾಖೆಯಿಂದ ಅನುದಾನ ಬರಲಾರದೆ, ಅವುಗಳು ನಮ್ಮ ಇಲಾಖೆಯಿಂದ ಹೆಚ್ಚುವರಿ ವೆಚ್ಚ ಮಾಡಿರುತ್ತವೆ (ಸುಮಾರು ₹6 ಕೋಟಿ). ಸದರಿ ಅನುದಾನದ ಬಿಡುಗಡೆ ಬಗ್ಗೆ ಈಗಾಗಲೇ ಹಲವಾರು ಬಾರಿ ಇಲಾಖೆಗಳಿಗೆ ಪತ್ರ ಬರೆದರೂ ಬಿಡುಗಡೆ ಆಗಿರುವುದಿಲ್ಲ. ಕೆಲವು ಕಾಮಗಾರಿಗಳ ಅನುದಾನ ನಮ್ಮ ಕೇಂದ್ರ ಕಚೇರಿಯಲ್ಲಿ ಲಭ್ಯವಿರುತ್ತದೆ (ಸುಮಾರು ₹2 ಕೋಟಿ). ಕೆಲವು ಮುಕ್ತಾಯವಾದ ಕಾಮಗಾರಿಗಳಿಗೆ ಅನುದಾನದ ಕೊರತೆಯಿಂದ Group leadersಗಳಿಗೆ Payment ಮಾಡಲು ಕಷ್ಟ ಸಾಧ್ಯವಾಗಿರುತ್ತದೆ. ಅವರು ಪ್ರತಿನಿತ್ಯ ನನಗೆ ಹಿಂಸೆ ನೀಡುತ್ತಿರುವುದು, ಮನೆಯ ಮುಂದೆ ಬರುವುದು ಹಾಗೂ Officeನಲ್ಲಿ ಕೂಗಾಡುವುದರಿಂದ ನನ್ನ ಮನಸ್ಸಿಗೆ ಅಘಾತವಾಗಿದೆ. Paymentಗಳ ವಿಚಾರವಾಗಿ ಈಗಾಗಲೇ ನಾನು ಹಾಗೂ ನಮ್ಮ ಕಾರ್ಯಪಾಲಕ ಎಂಜಿನಿಯರ್‌, ಬೆಳಗಾವಿ ವಲಯ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆಯಲ್ಲಿ ತಮಗೆ ತಿಳಿಸಿರುತ್ತೇವೆ’

​‘ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಗದಗ ಉಪವಿಭಾಗವನ್ನು easyಯಾಗಿ ಕಾರ್ಯಕ್ಕೆ ತಂದು ನಡೆಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ. ಈ ವಿಷಯ ದಿನನಿತ್ಯ ನನ್ನನ್ನು, ನನ್ನ mental health, ವೈಯಕ್ತಿಕ ಜೀವನ ಹಾಗೂ ಮನಃಶಾಂತಿಯನ್ನು ಹಾಳುಮಾಡಿಬಿಟ್ಟಿದೆ. ಇದರಿಂದ ನಾನು ನೊಂದು ನನ್ನ ಜೀವನವನ್ನು ಕೊನೆಮಾಡುತ್ತಿದ್ದೇನೆ’

‘ನನ್ನನ್ನು ಕ್ಷಮಿಸಿ ಬಿಡಿ ಹಾಗೂ ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನೇ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸೋತಿದ್ದೇನೆ. ಗದಗ ಉಪವಿಭಾಗಕ್ಕೆ ಅನುದಾನದ ಕೊರತೆಯನ್ನು Solve ಮಾಡಿ ಸುಗಮವಾಗಿ ನಡೆಸಲು ಅನುವು ಮಾಡಿ ಕೊಡಿ ಹಾಗೂ ಬೇರೆ AEEಯನ್ನು ನಿಯುಕ್ತಿ ಮಾಡಿಕೊಡಿ. Please, ದಯವಿಟ್ಟು ನನ್ನ ಕುಟುಂಬದವರಿಗೆ ಕಿರುಕುಳ ನೀಡಬೇಡಿ’

ಆಂಧ್ರದತ್ತ ಪೊಲೀಸರು: ‘ಫರ್ವೀಜ್ ಪತ್ತೆಗೆ ಕ್ರಮ ವಹಿಸಲಾಗಿದೆ. ಎರಡು ದಿನಗಳ ಹಿಂದೆ ಆಂಧ್ರಪ್ರದೇಶದ ವಿಜಯವಾಡ ಬಳಿ ಕೊನೆಯ ಬಾರಿ ಮೊಬೈಲ್‌ಫೋನ್ ಸಂಪರ್ಕಕ್ಕೆ ಸಿಕ್ಕಿರುವುದು ಗೊತ್ತಾಗಿದೆ. ಅಲ್ಲಿಗೆ, ಗದಗ ಪೊಲೀಸರ ತಂಡ ಕಳುಹಿಸಲಾಗಿದ್ದು, ಅವರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಿದ್ದಾರೆ. ಸದ್ಯ ದೊರೆತಿರುವ ಪತ್ರವು ಫರ್ವೀಜ್ ಅವರದ್ದೆಂದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್. ತಿಳಿಸಿದರು.

ಹತ್ಯೆ: ಮತ್ತಿಬ್ಬರು ಆರೋಪಿಗಳ ಬಂಧನ

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಈಚೆಗೆ ನಡೆದ ಇರ್ಫಾನ್ ತಹಶೀಲ್ದಾರ್‌ ಹತ್ಯೆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುಲೇಮಾನ್ ಎಂ. ಅಡೂರ ಹಾಗೂ ಮಹ್ಮದ್‌ಗೌಸ್‌ ಎಸ್‌. ಸವಣೂರ ಬಂಧಿತರು. ಶುಕ್ರವಾರ ಇಬ್ಬರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸದ್ಯ ಇವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತರೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್ ಎಚ್‌.ಎನ್‌. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆಯೂ ಫರ್ವೀಜ್‌ ಯಾರಿಗೂ ಹೇಳದೆ ಮೂರು ದಿನ ಎಲ್ಲಿಗೋ ಹೋಗಿದ್ದರು. ಮನೆಗೆ ವಾಪಸ್ಸಾದಾಗ ಕೆಲಸ ವಿಚಾರದಲ್ಲಿ ಒತ್ತಡ ಇರುವುದಾಗಿ ತಿಳಿಸಿದ್ದರು ಅಲ್ತಾಫ್‌ ಶೇಖ್‌, ಫರ್ವೀಜ್ ಸಂಬಂಧಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ