ಶಿಡ್ಲಘಟ್ಟ | ಹೂವಿನ ಬೆಳೆಗೆ ಅಳವಡಿಸಿದ್ದ ಕವರ್‌ ಕತ್ತರಿಸಿದ ದುಷ್ಕರ್ಮಿ

ಶಿಡ್ಲಘಟ್ಟ | ಹೂವಿನ ಬೆಳೆಗೆ ಅಳವಡಿಸಿದ್ದ ಕವರ್‌ ಕತ್ತರಿಸಿದ ದುಷ್ಕರ್ಮಿ

ಶಿಡ್ಲಘಟ್ಟ | ಹೂವಿನ ಬೆಳೆಗೆ ಅಳವಡಿಸಿದ್ದ ಕವರ್‌ ಕತ್ತರಿಸಿದ ದುಷ್ಕರ್ಮಿ

ಶಿಡ್ಲಘಟ್ಟ: ಹೂವಿನ ಬೆಳೆಯನ್ನು ಮಳೆಯಿಂದ ರಕ್ಷಿಸಲು ಅಳವಡಿಸಿದ್ದ ಕವರ್‌ಗಳನ್ನು ದುಷ್ಕರ್ಮಿಗಳು ಕತ್ತರಿಸಿರುವ ಘಟನೆ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿಯಲ್ಲಿ ಈಚೆಗೆ ನಡೆದಿದೆ.

ಗ್ರಾಮದ ಯುವ ರೈತ ಜಿ.ಎಂ.ಸುಧಾಕರ್ ತಮ್ಮ ತೋಟದಲ್ಲಿ ₹50 ಸಾವಿರ ವೆಚ್ಚದಲ್ಲಿ ಕವರ್ ಅಳವಡಿಸಿದ್ದರು.

ರಾತ್ರಿ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು 10ಕ್ಕೂ ಹೆಚ್ಚು ಸಾಲುಗಳ ಕವರ್‌ ಕತ್ತರಿಸಿ ತುಂಡು ಮಾಡಿದ್ದಾರೆ. ಸದ್ಯ ಮಳೆ ಬಾರದ ಕಾರಣ ಹೆಚ್ಚಿನ ಹಾನಿ ಆಗಿಲ್ಲ.

ಹೂವು ನೇರವಾಗಿ ಬಿಸಿಲಿಗೆ ಮತ್ತು ರಾತ್ರಿ ವೇಳೆ ಬೀಳುವ ಇಬ್ಬನಿಗೆ ಒಡ್ಡಿಕೊಂಡರೆ ಬೇಗ ಹಾಳಾಗುತ್ತದೆ. ಕವರ್ ಹಾನಿಯಿಂದ ಮುಂದಿನ ದಿನಗಳಲ್ಲಿ ಬೆಳೆ ಮೇಲೆ ಪರಿಣಾಮ ಆಗುವ ಆತಂಕ ಮೂಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ