ಗಣೇಶೋತ್ಸವ: ಡಿಜೆ, ಪಟಾಕಿ ಬಿಟ್ಟು ಶಾಲೆ ಅಂದಗೊಳಿಸಿದ ‘ಕಾಮನಕಟ್ಟಿ ಗೆಳೆಯರ ಬಳಗ’

ಗಣೇಶೋತ್ಸವ: ಡಿಜೆ, ಪಟಾಕಿ ಬಿಟ್ಟು ಶಾಲೆ ಅಂದಗೊಳಿಸಿದ ‘ಕಾಮನಕಟ್ಟಿ ಗೆಳೆಯರ ಬಳಗ’

ಗಣೇಶೋತ್ಸವ: ಡಿಜೆ, ಪಟಾಕಿ ಬಿಟ್ಟು ಶಾಲೆ ಅಂದಗೊಳಿಸಿದ ‘ಕಾಮನಕಟ್ಟಿ ಗೆಳೆಯರ ಬಳಗ’

ಕೊಪ್ಪಳ: ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ರಾಜ್ಯದಾದ್ಯಂತ ಈಗ ಡಿ.ಜೆ. ಬಳಕೆ ಹಾಗೂ ಪಟಾಕಿಗಳ ಅಬ್ಬರ ಜೋರಾಗಿದ್ದರೆ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದ ಕಾಮನಕಟ್ಟಿ ಗೆಳೆಯರ ಬಳಗದ ಸದಸ್ಯರು ಈ ಅಬ್ಬರವನ್ನೆಲ್ಲ ಕೈಬಿಟ್ಟು ಅದೇ ಹಣವನ್ನು ತಮ್ಮೂರಿನ ಶಾಲೆಗಳ ಅಂದ ಹೆಚ್ಚಿಸಲು ಬಳಕೆ ಮಾಡಿದ್ದಾರೆ.

ಗೆಳೆಯರ ಬಳಗದ ಸದಸ್ಯರು ಕಿನ್ನಾಳದಲ್ಲಿ ಹಿಂದೂ ಗಜಾನನ ಮಂಡಳಿ ಹೆಸರಿನಲ್ಲಿ 11ನೇ ವರ್ಷದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಇದಕ್ಕಾಗಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಮೂರ್ತಿ ಖರೀದಿ, ಹಬ್ಬ ಆಚರಣೆಗೆ ಬಳಕೆ ಮಾಡಿ ಉಳಿದಿದ್ದನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸಿದ್ದಾರೆ.

ಕಿನ್ನಾಳದ ಕುವೆಂಪು ಶತಮಾನೋತ್ಸವ ಮಾದರಿ ಶಾಲೆ, ಅದೇ ಆವರಣದಲ್ಲಿರುವ ಪ್ರೌಢಶಾಲೆ ಹಾಗೂ ಕೌಲಪೇಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌ಗೆ ಅಂದವಾದ ಬಣ್ಣ ಹಚ್ಚಿದ್ದಾರೆ.

50 ಸದಸ್ಯರನ್ನು ಹೊಂದಿರುವ ತಂಡವು ಆಯಾ ವರ್ಷ ಗಣೇಶೋತ್ಸವ ಆಚರಣೆ ವೇಳೆ ಉಳಿಯುವ ಹಣ ಏನು ಮಾಡಬೇಕೆಂದು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಅದೇ ರೀತಿ ನಡೆದುಕೊಳ್ಳುತ್ತಾರೆ. ಈ ಬಣ್ಣಗಳ ಮೇಲೆ ಈಗ ಕಿನ್ನಾಳ ಕಲಾಕೃತಿಗಳ ಚಿತ್ರಗಳನ್ನು ಕಲಾವಿದರಿಂದ ಬರೆಯಿಸಲು ಮುಂದಾಗಿದ್ದಾರೆ.

ಇದೇ ಗೆಳೆಯರ ಬಳಗದವರು 2024ರಲ್ಲಿ ತಮ್ಮೂರಿನಿಂದ ಏಳು ಕಿ.ಮೀ. ದೂರವಿರುವ ಚಿಲವಾಡಗಿ ಗ್ರಾಮದ ತನಕದ ಗುಂಡಿಗಳೇ ತುಂಬಿ ಹೋಗಿದ್ದ ರಸ್ತೆ ದುರಸ್ತಿ ಮಾಡಿದ್ದರು. ಕಿನ್ನಾಳ ಗ್ರಾಮ ಪ್ರವೇಶಿಸುವ ಮಾರ್ಗದಲ್ಲಿ ಹೊಸದಾಗಿ ಮಣ್ಣಿನ ರಸ್ತೆ ನಿರ್ಮಿಸಿದ್ದರು. ಇದು ಜಿಲ್ಲಾ ನ್ಯಾಯಾಧೀಶರ ಪ್ರಶಂಸೆಗೆ ಕಾರಣವಾಗಿ ಆಗಿನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಚಂದ್ರಶೇಖರ ಸಿ. ಅವರು ಗ್ರಾಮವನ್ನು ದತ್ತು ತೆಗೆದುಕೊಂಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ