ಪಶ್ಚಿಮಘಟ್ಟ ಜೀವ ಸಂಕುಲದ ಉಸಿರು: ಪರಿಸರ ಸತ್ಯಾಗ್ರಹ ಬಳಗದ ಸದಸ್ಯರ ಪ್ರತಿಪಾದನೆ

ಪಶ್ಚಿಮಘಟ್ಟ ಜೀವ ಸಂಕುಲದ ಉಸಿರು: ಪರಿಸರ ಸತ್ಯಾಗ್ರಹ ಬಳಗದ ಸದಸ್ಯರ ಪ್ರತಿಪಾದನೆ

ಪಶ್ಚಿಮಘಟ್ಟ ಜೀವ ಸಂಕುಲದ ಉಸಿರು: ಪರಿಸರ ಸತ್ಯಾಗ್ರಹ ಬಳಗದ ಸದಸ್ಯರ ಪ್ರತಿಪಾದನೆ

ಬೆಂಗಳೂರು: ಪಶ್ಚಿಮಘಟ್ಟವನ್ನುನಾಶಪಡಿಸುವ ಯಾವುದೇ ಯೋಜನೆಗಳನ್ನು ಕೈಗೊಳ್ಳಬಾರದು ಎಂಬುದೂ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪರಿಸರ ಸತ್ಯಾಗ್ರಹ ಬಳಗದ (ನಮ್ಮ ಉಳಿವಿಗಾಗಿ ಸುಳಿವನ್ನು ಹುಡುಕುವ ಹಾದಿಯಲ್ಲಿ...) ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸತ್ಯಾಗ್ರಹ ನಡೆಯಿತು.

ದಟ್ಟವಾದ ಕಾಡನ್ನು ಒಳಗೊಂಡಿರುವ ಪಶ್ಚಿಮಘಟ್ಟವು ಜೀವಸಂಕುಲದ ಉಸಿರು ಎಂದು ಹೋರಾಟಗಾರರು ಪ್ರತಿಪಾದಿಸಿದರು.

ಪಶ್ಚಿಮಘಟ್ಟ ನಾಶವಾದರೆ, ಮಾನವ ಪ್ರಭೇದವು ಸೇರಿದಂತೆ ಸಕಲ ಜೀವರಾಶಿಗಳು, ನದಿ, ಬೆಟ್ಟಗುಡ್ಡಗಳು ನಾಶವಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಮಾರು 2.5 ಲಕ್ಷ ಹೆಕ್ಟೇರ್‌ಗೂ ಅಧಿಕ ಜಾಗದಲ್ಲಿ ಸಣ್ಣಸಣ್ಣ ಕಾಡು, ಕುರುಚಲು ಕಾಡು, ಗೋಮಾಳ, ಬೆಡ್ಡಗುಡ್ಡಗಳಲ್ಲಿನ ಕಾಡು ಪರಿಸರ ಪ್ರಕೃತಿಯನ್ನು ಸಮತೋಲನದಲ್ಲಿ ಇಡಲು ಸಹಕಾರಿ ಆಗಿದೆ. ಇಂತಹ ಜಾಗವನ್ನು ಸಂರಕ್ಷಿಸಬೇಕು. ಪರಿಸರಕ್ಕೆ ಹಾನಿಕಾರಕವಾದ ಯಾವುದೇ ಯೋಜನೆಗಳು ಅಲ್ಲಿ ಜಾರಿಗೊಳ್ಳದ ಹಾಗೇ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

ನದಿಮೂಲ ಬರಿದಾಗದಂತೆ ಹಾಗೂ ಅದು ಕಲುಷಿತವಾಗದಂತೆ ನೋಡಿಕೊಳ್ಳಬೇಕು. ನದಿ ಪಾತ್ರದಲ್ಲಿ ಒತ್ತುವರಿ ಆಗಿರುವ ಭೂಮಿಯನ್ನು ತೆರವು ಮಾಡಬೇಕು. ನದಿ ವಲಯ ಒತ್ತುವರಿ ಮಾಡಿದವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು ಮಾಡಬೇಕು. ರಾಜ್ಯದಲ್ಲಿ 40,483 ಕೆರೆಗಳಿವೆ ಎಂದು ಅಂಕಿಅಂಶಗಳು ತಿಳಿಸುತ್ತವೆ. ಕೆರೆಕಟ್ಟೆಗಳನ್ನು ಪುನಃಶ್ಚೇತನಗೊಳಿಸಿ ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಹಾಗೂ ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆಯ ಬಗ್ಗೆ ರಾಜ್ಯದಜನರಿಗೆ ತಿಳಿಸಬೇಕು. ಈ ಯೋಜನೆ ಗಳಲ್ಲಿ ಉಲ್ಲೇಖಿಸಿರುವ ಎಲ್ಲ ಕೆಲಸ ಗಳನ್ನು ಮುಂದಿನ ಹತ್ತು ವರ್ಷಗಳಲ್ಲಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಸತ್ಯಾಗ್ರಹದಲ್ಲಿ ರೈತ ಮುಖಂಡ ರಾದ ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್, ಸಾಮಾಜಿಕ ಕಾರ್ಯಕರ್ತ ಎಸ್‌.ಆರ್.ಹಿರೇಮಠ್‌, ಇಂದೂಧರ ಹೊನ್ನಾಪುರ, ಪರಿಸರ ಸತ್ಯಾಗ್ರಹಬಳಗದ ಟಿ.ಜಿ.ಎಸ್. ಅವಿನಾಶ್ ಸೇರಿ ಹಲವರು ಪಾಲ್ಗೊಂಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ