ಬಾಗಲಕೋಟೆ: ಸಂಪೂರ್ಣ ಬರ ಪೀಡಿತ ಜಿಲ್ಲೆ, ಸರ್ಕಾರ ಘೋಷಣೆ

ಬಾಗಲಕೋಟೆ: ಸಂಪೂರ್ಣ ಬರ ಪೀಡಿತ ಜಿಲ್ಲೆ, ಸರ್ಕಾರ ಘೋಷಣೆ

ಬಾಗಲಕೋಟೆ: ಸಂಪೂರ್ಣ ಬರ ಪೀಡಿತ ಜಿಲ್ಲೆ, ಸರ್ಕಾರ ಘೋಷಣೆ

ಬಾಗಲಕೋಟೆ: ಮಳೆಯ ತೀವ್ರ ಕೊರತೆ ಹಾಗೂ ಬೆಳೆದ ಬೆಳೆಯೂ ಸರಿಯಾಗಿ ಬೆಳೆಯದೇ ಒಣಗಿ ಹೋಗಿರುವುದರಿಂದ ರಾಜ್ಯ ಸರ್ಕಾರವು ಇಡೀ ಜಿಲ್ಲೆಯನ್ನು ಬರ ಪೀಡಿತ ಪಟ್ಟಿಗೆ ಸೇರಿಸಿದೆ.

ಬಾಗಲಕೋಟೆ, ಬೀಳಗಿ, ಜಮಖಂಡಿ, ಗುಳೇದಗುಡ್ಡ, ಇಳಕಲ್‌ ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ಎಂದು ಈಗಾಗಲೇ ಘೋಷಿಸಲಾಗಿತ್ತು. ಈಗ ತೇರದಾಳ ತಾಲ್ಲೂಕು ಸಹ ತೀವ್ರ ಬರ ಪೀಡಿದ ಪಟ್ಟಿಯಲ್ಲಿದೆ. ಮುಧೋಳ, ಹುನಗುಂದ, ಬಾದಾಮಿ ಹಾಗೂ ರಬಕವಿ–ಬನಹಟ್ಟಿ ಮಧ್ಯಮ ಬರ ಪಟ್ಟಿಯಲ್ಲಿವೆ.

ನೀರಾವರಿ ಸೌಲಭ್ಯ ಹೊಂದದ ಹುನಗುಂದ, ಬಾದಾಮಿ ತಾಲ್ಲೂಕುಗಳು ಈಗಲೂ ಮಧ್ಯಮ ಬರ ಪಟ್ಟಿಯಲ್ಲಿರುವುದಕ್ಕೆ ರೈತರಿಂದ ಅಸಮಾಧಾನ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಪಟ್ಟಿ ಮಾಡಲಾಗಿದೆ. ಶೇ20ರಿಂದ ಶೇ50ರಷ್ಟು ಮಳೆ ಕೊರತೆಯಾಗಿರಬೇಕು. ಮೂರು ವಾರಗಳ ಕಾಲ ಸತತವಾಗಿ ಮಳೆ ಬಾರದಿರುವುದು. ಬೆಳೆ ಹಾನಿಯ ಪ್ರಮಾಣ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಪರಿಗಣಿಸಲಾಗುತ್ತದೆ.

ಜೂನ್‌ ತಿಂಗಳಿನಲ್ಲಿ ಬಹುತೇಕ ತಾಲ್ಲೂಕುಗಳಲ್ಲಿ ಮಳೆ ಕೊರತೆಯಾಗಿತ್ತು. ಬಿತ್ತನೆಯೂ ಆಗಿರಲಿಲ್ಲ. ಜುಲೈ ತಿಂಗಳಿನಲ್ಲಿ ಅಲ್ಲಲ್ಲಿ ಮಳೆ ಸುರಿಯಿತು. ಆಗಸ್ಟ್‌ ತಿಂಗಳಲ್ಲಿಯೂ ಮಳೆ ಕೊರತೆ ಎದುರಾಗಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ತೀವ್ರ ಮಳೆಯ ಕೊರತೆ ಕಾಡಿದೆ.

‘ಈಗಾಗಲೇ ಐದು ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಈಗ ಮತ್ತೈದು ತಾಲ್ಲೂಕುಗಳು ಘೋಷಣೆಯಾಗಿವೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್‌. ರುದ್ರೇಶಪ್ಪ ಹೇಳಿದರು.

ಸಮೀಕ್ಷೆ ಆರಂಭ: ಬರ ಘೋಷಣೆಯಾದ ಬೆನ್ನಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಲು ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಹೊಸದಾಗಿ ಬರ ಪಟ್ಟಿಗೆ ಸೇರ್ಪಡೆಯಾದ ತಾಲ್ಲೂಕುಗಳಲ್ಲಿ ಜಂಟಿ ಸಮೀಕ್ಷೆ ಆರಂಭಿಸಲಿದ್ದಾರೆ.

ಬಾಗಲಕೋಟೆ: ಸೆಪ್ಟೆಂಬರ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಶೇ89ರಷ್ಟು ಮಳೆ ಕೊರತೆಯಾಗಿದೆ.

ಸೆ.10ರಿಂದ 16ರವರೆಗೆ ಜಿಲ್ಲೆಯಲ್ಲಿ ಶೇ99ರಷ್ಟು ಮಳೆ ಕೊರತೆಯಾಗಿದೆ. ಇಳಕಲ್ ತಾಲ್ಲೂಕಿನಲ್ಲಿ ಶೇ96, ಬಾಗಲಕೋಟೆ ತಾಲ್ಲೂಕಿನಲ್ಲಿ ಶೇ99ರಷ್ಟಿದ್ದರೆ, ಉಳಿದೆಲ್ಲ ತಾಲ್ಲೂಕಿನಲ್ಲಿ ಶೇ100ರಷ್ಟು ಮಳೆಯಾಗಿಲ್ಲ.

ದಿನದಿಂದ ದಿನಕ್ಕೆ ಬೆಳೆಗಳು ಒಣಗುತ್ತಿವೆ. ತೊಗರಿ ಹೂವು ಕಾಯಿಯಾಗುತ್ತಿಲ್ಲ. ಸೂರ್ಯಕಾಂತಿ ತೆನೆಯಲ್ಲಿ ಕಾಳುಗಳ ಸಂಖ್ಯೆ ಕಡಿಮೆಯಾಗಿದೆ. ಈರುಳ್ಳಿ ಗಡ್ಡೆಗಳು ದೊಡ್ಡದಾಗುತ್ತಿಲ್ಲ.

ಈಗಾಗಲೇ ಬರ ಪೀಡಿತವಾಗಿರುವ ಐದು ತಾಲ್ಲೂಕುಗಳಲ್ಲಿ ಕೃಷಿಯ 1.14 ಲಕ್ಷ ಹೆಕ್ಟೇರ್‌, ತೋಟಗಾರಿಕೆಯ 28,224 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ