ಯರಗಟ್ಟಿ, ಸವದತ್ತಿ ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಯರಗಟ್ಟಿ, ಸವದತ್ತಿ ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಯರಗಟ್ಟಿ, ಸವದತ್ತಿ ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಯರಗಟ್ಟಿ: ಯರಗಟ್ಟಿ ಮತ್ತು ಸವದತ್ತಿ ತಾಲ್ಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆ, ಬೆಳೆಹಾನಿ ಪರಿಹಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪಕ್ಷದ ಮುಖಂಡರಾದ ವಿರುಪಾಕ್ಷ ಮಾಮನಿ, ಮತ್ತು ಸಂಜು ನವಲಗುಂದ ಮಾತನಾಡಿ, ‘ಮುಂಗಾರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಹೆಸರು, ಶೇಂಗಾ, ಸೂರ್ಯಕಾಂತಿ, ಉದ್ದು ವಿವಿಧ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಾನುವಾರುಗಳಿಗೆ ಕುಡಿಯಲು ನೀರು, ಮೇವಿನ ಕೊರತೆ ಎದುರಾಗಿದೆ, ಆದರೆ ಸರ್ಕಾರದಿಂದ ಬೆಳೆಹಾನಿ ಪರಿಹಾರ ಸೇರಿದಂತೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ, ಮಂದೆ ಬರುವ ಅಧಿವೇಶನದಲ್ಲಿ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತವಾರಿ ಸಚಿವರು ಯರಗಟ್ಟಿ, ಮತ್ತು ಸವದತ್ತಿ ಬರಪೀಡಿತ ತಾಲ್ಲೂಕು ಎಂದು ಘೋಷಿಸಲು ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

‘ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು, ಪ್ರತಿ ರೈತರ ಖಾತಗೆ ₹50 ಸಾವಿರ, ಬೆಳೆಹಾನಿ ಪರಿಹಾರ ನೀಡಲು ಕ್ರಮ ವಹಿಸಬೇಕು,. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದರು.

ಸಂಜು ನವಲಗುಂದ, ವೇಂಕಟೇಶಗೌಡ ದೇವರಡ್ಡಿ, ಕಿಟ್ಟಿ ತೋರಗಲ್ಲ, ಸದನಂದ ಹಣಬರ, ಈರಣ್ಣ ಚಂದ್ರಗಿ, ಗೌಡಪ್ಪ ಸವದತ್ತಿ, ಪರತಗೌಡ ಪಾಟೀಲ, ಕೆ.ವಿ.ಪಾಟೀಲ, ಸುರೇಶ ಬಂಟನೂರ, ಮಹಾದೇವ ಮುರಗೋಡ, ಶಂಕರ ದಂಡನ್ನವರ, ವೆಂಕಣ್ಣ ಹುರಕ್ಕನ್ನವರ, ಚೇತನ ಜಕಾತಿ, ಸಕುಬಾಯಿ ಕುಂಬಾರ, ಮೈತ್ರಾ ಹೊಂಗಲ, ಶಿವಾನಂದ ಪಟ್ಟಣಸೇಟ್ಟಿ, ಮಹಾಂತೇಶ ತೋಟಗಿ ಇತರರು ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ