ಉತ್ತರ ಕನ್ನಡಕ್ಕೆ ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್ ನಿರೀಕ್ಷೆ

ಉತ್ತರ ಕನ್ನಡಕ್ಕೆ ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್ ನಿರೀಕ್ಷೆ

ಉತ್ತರ ಕನ್ನಡಕ್ಕೆ ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್ ನಿರೀಕ್ಷೆ

ಕಾರವಾರ: ರಾಜ್ಯದಲ್ಲೇ ಅತಿ ಉದ್ದದ ಕಡಲತೀರ ಪ್ರದೇಶ, ಕಪ್ಪು ಮರಳಿನ ಕಡಲತೀರ, ಐತಿಹಾಸಿಕ ತಾಣಗಳು ಸೇರಿದಂತೆ ಪ್ರವಾಸೋದ್ಯಮ ವಿಫುಲವಾಗಿ ಬೆಳೆಯಲು ಸೂಕ್ತ ಪರಿಸರ ಹೊಂದಿರುವ ಜಿಲ್ಲೆಗೆ ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ‘ಪ್ರವಾಸೋದ್ಯಮ ವಿಶೇಷ ಪ್ಯಾಕೇಜ್’ ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಿದೆ.

ಆಡಳಿತಾರೂಢ ಕಾಂಗ್ರೆಸ್‌ನಿಂದ ಆಯ್ಕೆಯಾದ ನಾಲ್ವರು, ಓರ್ವ ಕಾಂಗ್ರೆಸ್ ಬೆಂಬಲಿತ ಶಾಸಕರು ಜಿಲ್ಲೆಯಲ್ಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಏರಲು ಕೊಡುಗೆ ನೀಡಿದ ಜಿಲ್ಲೆಯ ‘ಋಣ’ ತೀರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶೇಷ ಯೋಜನೆಗಳಿಗೆ ಅನುಮೋದನೆ ಕೊಡಿಸಬಹುದು ಎಂಬುದು ನಿರೀಕ್ಷೆ.

‘ಪರಿಸರ ಸೂಕ್ಷ್ಮ ಪ್ರದೇಶ, ಅರಣ್ಯ ಹೆಚ್ಚಿರುವ ಕಾರಣಕ್ಕೆ ಬೃಹತ್ ಕೈಗಾರಿಕೆ, ದೊಡ್ಡ ಮಟ್ಟದ ಉದ್ಯಮಗಳ ಸ್ಥಾಪನೆ ಜಿಲ್ಲೆಯಲ್ಲಿ ಸಾಧ್ಯವಾಗುತ್ತಿಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶವೂ ಇಲ್ಲ. ಆರ್ಥಿಕತೆಗೆ ಉತ್ತೇಜನ ನೀಡಲು ಪ್ರವಾಸೋದ್ಯಮ ಕ್ಷೇತ್ರ ಬೆಳೆಸುವುದೇ ಮುಖ್ಯ ಮಾರ್ಗ’ ಎಂಬುದು ಪ್ರವಾಸೋದ್ಯಮಿಗಳ ವಾದ.

160 ಕಿ.ಮೀ. ಉದ್ದದ ಕಡಲತೀರ ಇದ್ದರೂ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಕಾರಣಕ್ಕೆ ಆತಿಥ್ಯ ವಲಯದ ಅಭಿವೃದ್ಧಿಗೆ, ಕಡಲತೀರಗಳಲ್ಲಿ ಮೂಲಸೌಕರ್ಯಗಳ ಅಳವಡಿಕೆಗೆ ಅಡ್ಡಿಯಾಗುತ್ತಿದೆ.

‘ಗೋವಾ ರಾಜ್ಯದಲ್ಲಿ ಕಡಲತೀರ ಪ್ರವಾಸೋದ್ಯಮ ವಿಫುಲವಾಗಿ ಬೆಳೆದು ನಿಂತಿದೆ. ಅಲ್ಲಿನ ಮಾದರಿಯಲ್ಲೇ ಸಿಆರ್‌ಝಡ್ ವಿನಾಯಿತಿಗೆ ಅನುಮೋದನೆ ಪಡೆಯಲು ಸರ್ಕಾರ ಕೇಂದ್ರಕ್ಕೆ ಒತ್ತಡ ಹೇರಬೇಕು. ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಗೆ ನಿರ್ಣಯ ಕೈಗೊಳ್ಳಬೇಕು’ ಎಂಬುದಾಗಿ ಪ್ರವಾಸೋದ್ಯಮಿ ವಿನಯ್ ನಾಯ್ಕ ಒತ್ತಾಯಿಸುತ್ತಾರೆ.

‘ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಮೀನುಗಾರಿಕೆ ಮ್ಯೂಸಿಯಂ ನಿರ್ಮಾಣ, ಮೂಲಸೌಕರ್ಯಗಳ ಅಳವಡಿಕೆ ಸೇರಿದಂತೆ ₹50 ಕೋಟಿ ಮೊತ್ತದ ಯೋಜನೆಯ ಪ್ರಸ್ತಾವ ಸಚಿವ ಸಂಪುಟ ಸಭೆಗೆ ಸಲ್ಲಿಕೆಯಾಗುತ್ತಿದೆ. ಅದರ ಹೊರತಾಗಿ ದೊಡ್ಡ ಮಟ್ಟದ ಯೋಜನೆಯ ಪ್ರಸ್ತಾವ ಸದ್ಯಕ್ಕಿಲ್ಲ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ವಿಶ್ವವಿದ್ಯಾಲಯ ಸ್ಥಾಪನೆಯ ಕನಸು

‘ಶಿರಸಿಯಲ್ಲಿ ಈ ಹಿಂದಿನ ಸರ್ಕಾರದಲ್ಲಿ ಪರಿಸರ ವಿಶ್ವವಿದ್ಯಾಲಯ ಘೋಷಣೆ ಆಗಿತ್ತು. ಈವರೆಗೂ ಅದು ಕೈಗೂಡಿಲ್ಲ. ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಇದರ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಇದೆ’ ಎನ್ನುತ್ತಾರೆ ಶಿಕ್ಷಣ ತಜ್ಞರು.

ಸೇತುವೆಗಳ ಪ್ರಸ್ತಾವವೇ ಹೆಚ್ಚು

‘ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲು ಸಲ್ಲಿಕೆಯಾಗಲಿರುವ ಪ್ರಸ್ತಾವಗಳಲ್ಲಿ ಸೇತುವೆ, ಗ್ರಾಮಿಣ ಮೂಲಸೌಕರ್ಯಗಳ ಯೋಜನೆಯ ಪಟ್ಟಿಗಳೇ ಹೆಚ್ಚಿವೆ. ಕಾಳಿ ನದಿಗೆ ಹೊಸ ಸೇತುವೆ, ತೀಳಮಾತಿಗೆ ಸೇತುವೆ, ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಸೇತುವೆ ಯೋಜನೆಗಳ ಮುಂದುವರಿಕೆಗೆ ಹೆಚ್ಚುವರಿ ಅನುದಾನ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‍ನಂತಹ ಪ್ರಸ್ತಾವಗಳಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ