ರಾಮನಗರದಲ್ಲಿ ಕಾಡಾನೆಗಳಿಂದ ಬೆಳೆ ಹಾನಿ, ರೈತರಿಂದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ರಾಮನಗರದಲ್ಲಿ ಕಾಡಾನೆಗಳಿಂದ ಬೆಳೆ ಹಾನಿ, ರೈತರಿಂದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ರಾಮನಗರದಲ್ಲಿ ಕಾಡಾನೆಗಳಿಂದ ಬೆಳೆ ಹಾನಿ, ರೈತರಿಂದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ರಾಮನಗರ: ತಾಲ್ಲೂಕಿನ ಗುನ್ನೂರು ಗ್ರಾಮದಲ್ಲಿ ಮೂರು ಕಾಡಾನೆಗಳ ಹಿಂಡು ಕೆಲ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿವೆ. ಇದರಿಂದಾಗಿ ಮಾವಿನಮರ, ತೆಂಗಿನಮರ, ನೀರಾವರಿ ಪೈಪ್‍ಗಳು ಹಾಗೂ ಇತರ ಪರಿಕರಗಳು ಹಾನಿಗೊಂಡಿವೆ. ಮಂಟೇದಯ್ಯ, ರಾಮಸ್ವಾಮಯ್ಯ, ರಾಮಶೆಟ್ಟಿ, ದೇವೇಗೌಡ, ಮಧು ಹಾಗೂ ಕೃಷ್ಣಶೆಟ್ಟಿ ಎಂಬುವರ ತೋಟದಲ್ಲಿ ಆನೆಗಳು ದಾಂಧಲೆ ಮಾಡಿವೆ.

ಕಾಡಿನಿಂದ ಗ್ರಾಮಗಳತ್ತ ಬರುವ ಆನೆಗಳು ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತವೆ. ಕೊಳವೆಬಾವಿ, ನೀರಾವರಿ ಪೈಪ್‌ಗಳು ಹಾಗೂ ಇತರ ಪರಿಕರಗಳನ್ನು ಹಾಳು ಮಾಡುತ್ತವೆ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ರೈತರು ಅಳಲು ತೋಡಿಕೊಂಡರು.

ಆನೆಗಳಿಂದಾಗಿ ತೋಟದಲ್ಲಿದ್ದ ಫಸಲು ಕೊಡುವ ಮಾವಿನ ಮರಗಳು ಹಾಗೂ ತೆಂಗಿನಮರಗಳಿಗೆ ಅರಣ್ಯ ಇಲಖೆಯುವರು ಚಿಲ್ಲರೆ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಅದರ ಬದಲು, ಆ ಮರಗಳಿಂದ ರೈತರಿಗೆ ಸಿಗುವ ಫಸಲನ್ನು ಸರಿಯಾಗಿ ಅಂದಾಜಿಸಿ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕಾಡಾನೆಗಳು ತೋಟಕ್ಕೆ ನುಗ್ಗದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್, ‘ಹಂದಿಗೊಂದಿ ಅರಣ್ಯಕ್ಕೆ ಮೂರು ದಿನಗಳ ಹಿಂದೆ ಮೂರು ಆನೆಗಳು ಬಂದಿವೆ. ತೆಂಗಿನಕಲ್ಲು ಅರಣ್ಯದಿಂದ ಬರುವಾಗ ಗುನ್ನೂರು ಗ್ರಾಮದ ರೈತರ ತೋಟಗಳಿಗೆ ನುಗ್ಗಿ ಫಸಲು ನಾಶ ಮಾಡಿವೆ. ಸದ್ಯ ಆನೆಗಳನ್ನು ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸಲಾಗಿದೆ. ಬೆಳೆ ಹಾನಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ