
ವಿಜಯಪುರ| ಅಕ್ರಮ ಸಂಬಂಧ ಹಿನ್ನೆಲೆ; ಯುವಕನ ಕೊಲೆ
ದೇವರಹಿಪ್ಪರಗಿ: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಯುವಕನೊಬ್ಬ ಕೊಲೆಯಾದ ಘಟನೆ ತಾಲ್ಲೂಕಿನ ಜಾಲವಾದ ಗ್ರಾಮದಲ್ಲಿ ಜರುಗಿದೆ.
ಜಾಲವಾದ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ಜರುಗಿದ್ದು , ಘಟನೆಯಲ್ಲಿ ಮಹ್ಮದ್ ಇಸಾಕ್ ನಬಿಸಾಬ್ ಬಾಗವಾನ(26) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಈತ ತನ್ನ ಸಂಬಂಧಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಕಾರಣವೇ ಈ ಘಟನೆಗೆ ಕಾರಣ ಎಂದು ಮೃತನ ತಂದೆ ದೂರು ನೀಡಿದ್ದು, ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಟಿ.ಎಸ್.ಸೂಲ್ಪಿ, ಸಿಪಿಆಯ್ ಆವುಜಿ, ಪಿಎಸೈ ಸಚೀನ ಆಲಮೇಲಕರ ಭೇಟಿ ನೀಡಿದ್ದಾರೆ.