
ಕಲ್ಯಾಣ ಕರ್ನಾಟಕದಲ್ಲಿ ಪ್ರಾದೇಶಿಕ ಅಂಚೆ ವಲಯ ಸ್ಥಾಪಿಸಲು ಒತ್ತಾಯ: ಉಮೇಶ ಜಾಧವ
ನವದೆಹಲಿ: ಕಲ್ಯಾಣ ಕರ್ನಾಟಕದಲ್ಲಿ ಪ್ರತ್ಯೇಕ ಪ್ರಾದೇಶಿಕ ಅಂಚೆ ವಲಯ ಸ್ಥಾಪಿಸಬೇಕು. ಕಲಬುರಗಿಯಲ್ಲಿ ಅದರ ಕೇಂದ್ರ ಕಚೇರಿ ತೆರೆಯಬೇಕು ಎಂದು ಆಗ್ರಹಿಸಿ ಮಾಜಿ ಸಂಸದ ಡಾ. ಉಮೇಶ ಜಾಧವ ಅವರು ಮನವಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 14ರಂದು ನವದೆಹಲಿಯಲ್ಲಿ ಅಂಚೆ ಇಲಾಖೆ ಉಪ ಮಹಾನಿರ್ದೇಶಕ ದುಷ್ಯಂತ್ ಮುದ್ಗಲ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಪ್ರಸ್ತುತ ಉತ್ತರ ಕರ್ನಾಟಕ ಅಂಚೆ ಪ್ರಾದೇಶಿಕ ವಲಯದ ಕೇಂದ್ರ ಕಚೇರಿ ಧಾರವಾಡದಲ್ಲಿದೆ. ಧಾರವಾಡ ದೂರ ಇದೆ. ಇದರಿಂದ ಅನಾನುಕೂಲವಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.