ಉಮಾಪುರದ ಗಣೇಶ ದೇಗುಲ ಭಾವೈಕ್ಯ ತಾಣ

ಉಮಾಪುರದ ಗಣೇಶ ದೇಗುಲ ಭಾವೈಕ್ಯ ತಾಣ

ಉಮಾಪುರದ ಗಣೇಶ ದೇಗುಲ ಭಾವೈಕ್ಯ ತಾಣ

ಬಸವಕಲ್ಯಾಣ: ತಾಲ್ಲೂಕಿನ ಉಮಾಪುರದ ಗಣೇಶ ದೇವಸ್ಥಾನ ಎಲ್ಲ ಜಾತಿ, ಧರ್ಮದವರ ಶ್ರದ್ಧಾ ಸ್ಥಾನವಾಗಿದ್ದು ಮೋಹರಂ ಪೀರ್‌ಗಳು ಸಹ ಇಲ್ಲಿಗೆ ಭೇಟಿ ನೀಡುತ್ತವೆ. ಇಂಥ ಭಾವೈಕ್ಯದ ತಾಣದಲ್ಲಿ ಸೆಪ್ಟೆಂಬರ್ 25 ರವರೆಗೆ ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯಲಿವೆ.

ಪೂರ್ವಾಭಿಮುಖವಾದ ಉಮಾ- ಮಹೇಶ್ವರರ ಜೋಡಿ ದೇವಸ್ಥಾನಗಳಿದ್ದು ಎದುರಲ್ಲಿ ವೈಶಿಷ್ಟ್ಯಪೂರ್ಣವಾದ ಆಳೆತ್ತರದ ಗಣೇಶ ವಿಗ್ರಹವಿದೆ. ಹೀಗಾಗಿ ಈ ಸ್ಥಳ ಐತಿಹಾಸಿಕ ಮಹತ್ವದ್ದಾಗಿದ್ದು ಅನೇಕ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಜೊತೆಗೆ ಭಕ್ತಿ, ಶ್ರದ್ಧೆಯ ಕೇಂದ್ರವೂ ಆಗಿರುವುದರಿಂದ ಮಹಾರಾಷ್ಟ್ರ, ತೆಲಂಗಾಣಾ ಮತ್ತು ರಾಜ್ಯದ ವಿವಿಧೆಡೆಯ ಭಕ್ತರೂ ಇಲ್ಲಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.

ಗಣಪತಿ ವಿಗ್ರಹ ಉತ್ತರಾಭಿಮುಖವಾಗಿ ಛಾವಣಿ ಇಲ್ಲದ ಕಟ್ಟೆಯ ಮೇಲಿದೆ. ಆದರೆ, ಶಿವ-ಪಾರ್ವತಿ ದೇವಸ್ಥಾನಗಳು ಎಂದು ಕೂಡ ಕರೆಯಲಾಗುವ ಉಮಾ-ಮಜೇಶ್ವರರ ದೇವಸ್ಥಾನಗಳು ಎತ್ತರದ ಅಧಿಷ್ಠಾನದ ಮೇಲಿವೆ. ಈ ಮೊದಲು ಶಿಥಿಲಗೊಂಡಿದ್ದರಿಂದ ಪ್ರಾಚ್ಯವಸ್ತು ಇಲಾಖೆಯಿಂದ ಇವುಗಳ ಕಲ್ಲುಗಳನ್ನು ಬಿಚ್ಚಿ ತೆಗೆದು ಪುನರ್ ನಿರ್ಮಾಣ ಕಾರ್ಯ ನಡೆಸಲಾಗಿದೆ. ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದ ಈ ದೇಗುಲಗಳಿಗೆ ನಾಗರ ಶೈಲಿಯ ಶಿಖರಗಳಿವೆ. ಗರ್ಭಗೃಹದಲ್ಲಿ ಶಿವಲಿಂಗಗಳಿವೆ. ಎದುರಲ್ಲಿ ಶಿಲಾ ಮಂಟಪ, ಆಕರ್ಷಕ ಪ್ರಭಾವಳಿ, ವಿವಿಧ ಭಂಗಿಯ ಶಿಲ್ಪಗಳು, ವೀರಗಲ್ಲುಗಳಿವೆ.

ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮಕ್ಕೆ ಬರುವ ರಸ್ತೆಯಲ್ಲಿ ಹಾಗೂ ಇತರೆ ಮೂರು ಸ್ಥಳಗಳಲ್ಲಿ ಈಚೆಗೆ ಆಕರ್ಷಕ ಪ್ರವೇಶದ್ವಾರ ಮತ್ತು ಸುತ್ತಲಿನಲ್ಲಿ ಆವರಣಗೋಡೆ ಕಟ್ಟಲಾಗಿದೆ. ಎರಡೂ ಗುಡಿಗಳಲ್ಲಿನ ಲಿಂಗಗಳಿಗೆ ಪೂಜೆ, ಅಭಿಷೇಕ ಕೈಗೊಳ್ಳಲಾಗುತ್ತದೆ. ಆದರೂ, ಗಣೇಶನಿಗೆ ಮಾತ್ರ ಹರಕೆ ಹೊತ್ತು ನೈವೇದ್ಯ ಅರ್ಪಿಸುವವರ ಸಂಖ್ಯೆ ಹೆಚ್ಚಿದೆ. ಗಣೇಶ ಚತುರ್ಥಿಯಿಂದ ಪ್ರತಿದಿನ ಇಲ್ಲಿಗೆ ಭಕ್ತರು ಬರುತ್ತಾರೆ. ಗಣೇಶ ಪ್ರತಿಷ್ಠಾಪನೆಯ 11ನೇ ದಿನ ಗೋಪಾಲಕಾಲಾ ನಡೆಯುವುದರೊಂದಿಗೆ ಜಾತ್ರೆ ಸಮಾರೋಪಗೊಳ್ಳುತ್ತದೆ.

‘ಗ್ರಾಮದಲ್ಲಿ ಉತ್ಸವ ಮೂರ್ತಿಯ ಪಲ್ಲಕ್ಕಿ, ಮಂತ್ರದಂಡ, ಪತಾಕೆಯ ಮೆರವಣಿಗೆ ನಡೆಯುತ್ತದೆ. ಮರುದಿನ ಸೆಪ್ಟೆಂಬರ್ 25ರಂದು ಭಜನೆ, ಭಾರೂಢ ಹಮ್ಮಿಕೊಂಡು ಸಂಜೆ ಸೂರ್ಯಾಸ್ತದೊಂದಿಗೆ ಸಾವಿರಾರು ಭಕ್ತರ ಮಧ್ಯೆ ಮೊಸರಿನ ಗಡಿಗೆ ಒಡೆಯುವ ಕಾಲಾ ನಡೆಯುತ್ತದೆ’ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ತಿಪ್ಪಣ್ಣ ಪಾಟೀಲ ತಿಳಿಸಿದ್ದಾರೆ.

‘ಜಾತ್ರೆಯಲ್ಲಿ ಗಣ್ಯರಿಂದ ಮಾರ್ಗದರ್ಶನ, ಸನ್ಮಾನ ನಡೆಯುತ್ತದೆ. ಮಹಾದಾಸೋಹದ ವ್ಯವಸ್ಥೆ ಇರುತ್ತದೆ’ ಎಂದು ಉಪಾಧ್ಯಕ್ಷ ವಿಶ್ವನಾಥ ಪಾಟೀಲ ಹೇಳಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ