ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆಗೆ ಯತ್ನ: ಬಾಗಲಕೋಟೆಯಲ್ಲಿ ಇಬ್ಬರ ಬಂಧನ

ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆಗೆ ಯತ್ನ: ಬಾಗಲಕೋಟೆಯಲ್ಲಿ ಇಬ್ಬರ ಬಂಧನ

ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆಗೆ ಯತ್ನ: ಬಾಗಲಕೋಟೆಯಲ್ಲಿ ಇಬ್ಬರ ಬಂಧನ

ಬಾಗಲಕೋಟೆ: ಭಾರತೀಯ ಸೇನೆಯಲ್ಲಿ ಸಿಪಾಯಿ ಕೆಲಸ ಕೊಡಿಸುವುದಾಗಿ ಹೇಳಿ ಯುವಕರನ್ನು ವಂಚಿಸಲು ಯತ್ನಿಸಿದ ಆರೋಪದ ಮೇಲೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕರಂಜ್ಯಾಳದ ಧಾಕಲು ಬೀಮರಾವ್ ಲಕ್ಕೇಬೈಯಲಕರ್, ಕಡತನ ಬಾಗೇವಾಡಿಯ ವೀರಣ್ಣ ನಿಚ್ಚಣ್ಣಿ ಎಂಬುವರನ್ನು ಬೀಳಗಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರದಲ್ಲಿ ಈಚೆಗೆ ನಡೆದ ಸೇನೆ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಬೀಳಗಿ ತಾಲ್ಲೂಕಿನ ಪ್ರವೀಣ ಪೆಂಡಾರಿ ಸೇರಿ ಕೆಲ ಯುವಕರಿಗೆ ಆರೋಪಿಗಳಿಬ್ಬರು ಭೇಟಿಯಾಗಿ, ‘ನಾವು ಸೇನಾ ನಿವೃತ್ತ ಅಧಿಕಾರಿಳು. ನಿಮಗೆ ಕೆಲಸ ಕೊಡಿಸುತ್ತೇವೆ’ ಎಂದಿದ್ದರು.

‘ವೈದ್ಯಕೀಯ ಪರೀಕ್ಷೆ ಮಾಡಿಸಿಕೊಡಲು ₹50 ಸಾವಿರ, ನೇಮಕಾತಿ ಆದೇಶ ಬಂದ ನಂತರ ₹2 ಲಕ್ಷ ನೀಡಬೇಕು  ಎಂದಿದ್ದ ಆರೋಪಿಗಳಾದ ಭೀಮರಾವ್ ಹಾಗೂ ವೀರಣ್ಣ ಇಬ್ಬರೂ ನಮ್ಮ ಮನೆಗೆ ಬಂದು ಶಾಲಾ ದಾಖಲಾತಿಯ ನಕಲು ಪ್ರತಿಗಳನ್ನು ಪಡೆದುಕೊಂಡಿದ್ದರು’ ಎಂದು ಪ್ರವೀಣ ದೂರಿನಲ್ಲಿ ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ