
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆ; ಯಾವ ಭಾಗದಲ್ಲಿ ಎಷ್ಟು?
ಬೆಂಗಳೂರು: ಕರ್ನಾಟಕದ ಕರಾವಳಿ ಭಾಗದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.
ಕಳೆದ 24 ಗಂಟೆ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ವಿಟ್ಲ, ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆ ಹಾಗೂ ಕಾಪು ತಾಲ್ಲೂಕಿನ ಹೆಜಮಾಡಿಯಲ್ಲಿ ತಲಾ 41 ಮಿ.ಮೀ ಮಳೆಯಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಕಾರ್ಕಳ ತಾಲ್ಲೂಕಿನ ಇನ್ನಾದಲ್ಲಿ 40.5 ಮಿ.ಮೀ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕಡಬದಲ್ಲಿ 40 ಮಿ.ಮೀ, ಬಂಟ್ವಾಳ ತಾಲ್ಲೂಕಿನ ಬೊಳಂತಾರುವಿನಲ್ಲಿ 40.25 ಮಿ.ಮೀ, ವಿಟ್ಲಪದನೂರಿನಲ್ಲಿ 40 ಮಿಲಮೀ, ಕುಂದಾಪುರ ತಾಲ್ಲೂಕಿನ ಅಂಪಾರುವಿನಲ್ಲಿ 39.5 ಮಿ.ಮೀ, ಬಂಟ್ವಾಳ ತಾಲ್ಲೂಕಿನ ಅಮ್ಮುಂಜೆಯಲ್ಲಿ 38 ಮಿ.ಮೀ ಮಳೆಯಾಗಿದೆ.
ಉಡುಪಿ ತಾಲ್ಲೂಕಿನ ಕೊಟತಟ್ಟುವಿನಲ್ಲಿ 37.6 ಮಿ.ಮೀ, ಮಂಗಳೂರಿನ ಯಕ್ಕಾರಿನಲ್ಲಿ 37 ಮಿ.ಮೀ, ಕಾಪು ತಾಲ್ಲೂಕಿನ ಕಟ್ಪಾಡಿಯಲ್ಲಿ 36.5 ಮಿ.ಮೀ, ಬಂಟ್ವಾಳ ತಾಲ್ಲೂಕಿನ ಕರಿಯಂಗಳ ಹಾಗೂ ಉಡುಪಿಯ ಕೋಟಾದಲ್ಲಿ ತಲಾ 36 ಮಿ.ಮೀ, ಮಂಗಳೂರಿನ ಯೆಡಪದವು, ಬೈಂದೂರು ತಾಲ್ಲೂಕಿನ ಕಿರಿಮಂಜೇಶ್ವರ ಹಾಗೂ ಕಾಪು ತಾಲ್ಲೂಕಿನ ಇನ್ನಂಜೆಯಲ್ಲಿ ತಲಾ 34.5 ಮಿ.ಮೀ ಮಳೆಯಾಗಿದೆ.
ವಿಟ್ಲ ಹಾಗೂ ಮುಲ್ಕಿ ಕಿಲ್ಪಾಡಿಯಲ್ಲಿ ತಲಾ 34 ಮಿ.ಮೀ, ಬೈಂದೂರು ತಾಲ್ಲೂಕಿನ ನಾವುಂದದಲ್ಲಿ 33.5 ಮಿ.ಮೀ, ಕುಂದಾಪುರ ತಾಲ್ಲೂಕಿನ ಹಕ್ಲಾಡಿಯಲ್ಲಿ 33 ಮಿ.ಮೀ. ಶಂಕರನಾರಾಯಣದಲ್ಲಿ 32.5 ಮಿ.ಮೀ, ಬಂಟ್ವಾಳ ತಾಲ್ಲೂಕಿನ ಕಳ್ಳಿಗೆಯಲ್ಲಿ 32 ಮಿ.ಮೀ ಮಳೆಯಾಗಿದೆ.
ಮಂಗಳೂರಿನ ಬಡಗ ಯೆಡಪದವು ಹಾಗೂ ಮುತ್ತೂರಿನಲ್ಲಿ 31.5 ಮಿ.ಮೀ, ಉಳ್ಳಾಲದ ಬೆಲ್ಮ, ಉಡುಪಿಯ ಕಡೇಕಾರ್ ಹಾಗೂ ಬೈಂದೂರಿನಲ್ಲಿ ಕಂಬದಕೋಣೆಯಲ್ಲಿ ತಲಾ 31 ಮಿ,ಮೀ. ಬಂಟ್ವಾಳ ತಾಲ್ಲೂಕಿನ ಕೇಪು, ಉಡುಪಿಯ ವಡ್ಡರ್ಸೆ ಹಾಗೂ ಕಾಪುವಿನ ಫಲಿಮಾರಿನಲ್ಲಿ ತಲಾ 30 ಮಿ.ಮೀ ಮಳೆಯಾಗಿದೆ.