
Bigg Boss Kannada Season 13: ತಾಂಡವ್-ಗಗನ್‌ಗೆ ಕಿಚ್ಚ ಸುದೀಪ್ ಕ್ಲಾಸ್: ಈ ಸ್ಪರ್ಧಿ ಬಳಿ ಕ್ಷಮೆ ಕೇಳಲು ಸೂಚನೆ!
Bigg Boss Kannada Season 13: ಬಿಗ್‌ಬಾಸ್ ಕನ್ನಡ ಸೀಸನ್ 13ರ ವಾರದ ಕಥೆ ಕಿಚ್ಚನ ಜೊತೆ ಮೊದಲ ವಾರದಲ್ಲಿಯೇ ಕಿಚ್ಚ ಸುದೀಪ್ (Kiccha Sudeep) ಅವರು ಇಬ್ಬರು ಸ್ಪರ್ಧಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಇಬ್ಬರು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳಬೇಕು ಎನ್ನುವುದು ಬಿಗ್‌ಬಾಸ್ ವೀಕ್ಷಕರ ಒತ್ತಾಯವೂ ಆಗಿತ್ತು. ಈ ವಾರಾಂತ್ಯದ ಬಿಗ್‌ಬಾಸ್ ಕನ್ನಡ ಸೀಸನ್ 13ರ ಹೈಲೆಟ್ಸ್ ವಿವರ ಇಲ್ಲಿದೆ.
ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ - ವಾರದ ಕತೆ ಕಿಚ್ಚನ ಜೊತೆಯಲ್ಲಿ ತಾಂಡವ್-ಗಗನ್‍ಗೆ ಕಿಚ್ಚನ ತರಾಟೆ ತೆಗೆದುಕೊಂಡಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ಸಖತ್ ಕ್ಲಾಸ್ ತೆಗೆದುಕೊಂಡಿರುವುದು ಇದೆ.
Bigg Boss Kannada Season 13: ಲವ್ ಜೋಡಿಸ್ ಎಂದ ಕಿಚ್ಚ ಸುದೀಪ್!
ಬಿಗ್ ಬಾಸ್ - ವಾರದ (Bigg Boss Kannada Season 13) ಕತೆ ಕಿಚ್ಚನ ಜೊತೆಯ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ನಟ ಗಗನ್ ಚಿನ್ನಪ್ಪ (Gagan Chinnappa) ಹಾಗೂ ತಾಂಡವ್ ರಾಮ್ (Tandav Ram)ಗೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇವರಿಬ್ಬರನ್ನು ಲವ್ ಜೋಡಿಸ್ ಅಂತ ಕರೆದಿದ್ದಾರೆ. ಒಟ್ಟೊಟ್ಟಿಗೆ ನಾಮಿನೇಷನ್ ಬಗ್ಗೆ ಮಾತನಾಡುತ್ತೀರಿ, ಒಟ್ಟೊಟ್ಟಿಗೆ ಯಾರನ್ನ ಹೊರಗಡೆ ಕಳುಹಿಸಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡುತ್ತೀರಿ. ಯಾರಾದರೂ ನಾಮಿನೇಷನ್‌ನ ಡಿಸ್ಕಷನ್ ಮಾಡಿದ್ರೆ ಬಾಗಿಲು ಓಪನ್ ಆಗುತ್ತೆ, ಮನೆಗೆ ಕಳ್ಸತಾ ಇರ್ತೀವಿ ಅಂತ ಕಿಚ್ಚ ಸುದೀಪ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ನಟ "ಜಗ್ಗಿ ಮಮ್ಮಿ' (ಜಗದೀಶ್) ಅವರನ್ನು ನಡೆಸಿಕೊಂಡಿರುವ ರೀತಿಗೂ ಕಿಚ್ಚ ಸುದೀಪ್ ಅವರು ಗರಂ ಆಗಿದ್ದಾರೆ.
ಜಗದೀಶ್ ಅವರೇ ನೀವು ಒಳಗಡೆ ಹೋಗಿರುವುದು ಸ್ಪರ್ಧಿಯಾಗಿ, ಮನೆಯ ಕೆಲಸದವರಾಗಿ ಅಲ್ಲ. ಹೋಗೇ - ಬಾರೆ ಅಂತ ಕರಿತಾರೆ ಜಗದೀಶ್ ಅವರನ್ನ ಅಂತ ತಾಂಡವ್ ಅವರು ಜಗದೀಶ್ ಅವರನ್ನು ಕರೆದಿರುವುದಕ್ಕೂ ಕಿಚ್ಚ ಸುದೀಪ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ತಮಾಷೆಯಲ್ಲಿ ಆ ರೀತಿ ಕರೆದೆ ಅಂತ ತಾಂಡವ್ ರಾಮ್ ಅವರು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.
ಇದಕ್ಕೆ ರಿಯಾಕ್ಟ್ ಮಾಡಿರುವ ಸುದೀಪ್ ಅವರು, ನೀವು ಇದನ್ನ ಜಗದೀಶ್ ಅವರಿಗೆ ಕೇಳಿದ್ರಾ ಇದರಲ್ಲಿ ತಮಾಷೆ ಇದ್ಯಾ ಅಂತ ಸುದೀಪ್ ಪ್ರಶ್ನಿಸಿದ್ದಾರೆ. ಅವರು ಫ್ಯಾಮಿಲಿ ಮ್ಯಾನ್.. ಅವರ ಫ್ಯಾಮಿಲಿಗೆ ಅವರು ಹೀರೋ ಸರ್ ಅಂತ ಸುದೀಪ್ ಹೇಳಿದ್ದಾರೆ. ಅಲ್ಲದೆ ಮುಂದುವರಿದು ಜಗದೀಶ್ ಅವರು ಕ್ಷಮಾಪಣೆಗೆ (He Deserve an Apology)ಅರ್ಹರು ಅಂತಲೂ ಹೇಳಿದ್ದಾರೆ.