ದೊಡ್ಡಬಳ್ಳಾಪುರದಲ್ಲಿ 950 ಕೋಳಿ ಸಾವು: ಚಿರತೆ ದಾಳಿ ಶಂಕೆ

ದೊಡ್ಡಬಳ್ಳಾಪುರದಲ್ಲಿ 950 ಕೋಳಿ ಸಾವು: ಚಿರತೆ ದಾಳಿ ಶಂಕೆ

ದೊಡ್ಡಬಳ್ಳಾಪುರದಲ್ಲಿ 950 ಕೋಳಿ ಸಾವು: ಚಿರತೆ ದಾಳಿ ಶಂಕೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಸೋಮಶೆಟ್ಟಿಹಳ್ಳಿ ಕೋಳಿಫಾರ್ಮ್‌ನಲ್ಲಿ ಶನಿವಾರ ತಡರಾತ್ರಿ 950ಕ್ಕೂ ಅಧಿಕ ಕೋಳಿಗಳು ಮೃತಪಟ್ಟಿವೆ. ಚಿರತೆ ಹೆಜ್ಜೆ ಗುರುತು ಆಧಾರಿಸಿ, ಅವುಗಳ ದಾಳಿಯಿಂದಲೂ ಮೃತಟ್ಟಿರಬಹುದು ಎಂದು ಶಂಕಿಸಲಾಗಿದ್ದು, ನಿಖಿರ ಕಾರಣ ತಿಳಿದು ಬಂದಿಲ್ಲ.

ಕೆಂಪೇಗೌಡ ಎಂಬುವರು ಸುಮಾರು 10 ಸಾವಿರಕ್ಕೂ ಅಧಿಕ ಕೋಳಿಮರಿಗಳನ್ನು ಸಾಕಿದ್ದರು. ಭಾನುವಾರ ಬೆಳಗಿನ ಜಾವ 3 ಗಂಟೆ ವೇಳೆಗೆ ಚಿರತೆ ದಾಳಿ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಫಾರ್ಮ್‌ ಮಾಲೀಕ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವಲಯ ಅರಣ್ಯ ಅಧಿಕಾರಿ ಹಂಸವಿ, ‘ಕೋಳಿ ಫಾರ್ಮ್‌ ನೆಲದಲ್ಲಿ ಚಿರತೆ ಹೆಜ್ಜೆ ಗುರುತು ಹೆಜ್ಜೆ ಇರುವ ಅನುಮಾನವಿದೆ. ಸುತ್ತಮುತ್ತ ಕ್ಯಾಮೆರಾ ಅಳವಡಿಸಿ ನಂತರ ದೃಢೀಕರಿಸಲಾಗುವುದು. ಮಾನದಂಡಗಳಂತೆ ಪರೀಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ