
Bigg Boss Kannada 13: ಗಳಸ್ಯ - ಕಂಠಸ್ಯರಿಗೆ "ಡೋಲು - ಬೋಲು' ಎಂದ ಕಿರಣ್ ಶಾಸ್ತ್ರಿ, ಕಿತ್ತೋದ ಆ್ಯಕ್ಟಿಂಗ್ - ಧನುಷ್
Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13ರ ಎರಡನೇ ವಾರದ ಮೊದಲ ದಿನ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಗಳಸ್ಯ ಕಂಠಸ್ಯ (ಇಬ್ಬರ ನಡುವಿನ ಗೆಳತನ) ಮುಂದುವರಿದಿದೆ. ಕಿಚ್ಚ ಸುದೀಪ್ ಅವರು ವಾರಾಂತ್ಯದ ಶೋನಲ್ಲಿ ಇಬ್ಬರಿಗೂ ವೈಯಕ್ತಿಕ ಆಟವನ್ನು ಆಡುವಂತೆ ಸೂಚನೆ ನೀಡಿದರ ಹೊರತಾಗಿಯೂ ಸಹ ಇಬ್ಬರು ಗುಸುಗುಸು ಮುಂದುವರಿದಿದೆ. ಗಗನ್ - ತಾಂಡವ್ ಅವರ ಗಳಸ್ಯ - ಕಂಠಸ್ಯಕ್ಕೆ ಕಿರಣ್ ಶಾಸ್ತ್ರಿ ಡೋಲು - ಬೋಲು (ಮಕ್ಕಳ ಕಥೆ ಅಥವಾ ಬೊಂಬೆಯಾಟದ ಪಾತ್ರಗಳು) ತರ ಮೇಲೆ ಕೆಳಗೆ ಓಡಾಡ್ತಿದ್ದೀರಾ ಅಂತ ಕೇಳಿರುವುದು ಗಗನ್‌ನ ಟ್ರಿಗರ್ ಮಾಡಿದೆ. ಇದಕ್ಕೆ ಗಗನ್ ಗರಂ ಆಗಿದ್ದು, ಹಿಂಗೆಲ್ಲ ಕರಿಬೇಡ ಅಂತ ಹೇಳಿದ್ದಾರೆ. ಹೊಸ ಪ್ರೋಮೋದಲ್ಲಿ ಕಿರಣ್ ಶಾಸ್ತ್ರಿ, ಧನುಷ್ ಹಾಗೂ ಗಗನ್ ಚಿನ್ನಪ್ಪ ನಡುವೆ ಕಿರಿಕ್ ಆಗಿರುವುದು ಇದೆ.
ಕಿರಣ್ ಶಾಸ್ತ್ರಿ ಡೋಲು - ಬೋಲು ಅಂತ ಹೇಳಿರುವುದಕ್ಕೆ ಗಗನ್ ಚಿನ್ನಪ್ಪ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮನ್ನ ಡೋಲು - ಬೋಲು ಅಂತ ಕರೆಯೋದನ್ನ ಮೊದಲು ನಿಲ್ಲಿಸು ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಇದಕ್ಕೆ ಧನಿಗೂಡಿಸಿರುವ ಧನುಷ್, ಅಲ್ಲ ನಾರ್ಮಲ್ ಆಗಿ ಯಾವಾಗಲೂ ಇಬ್ಬರು ಜೊತೆಯಲ್ಲೇ ಇರ್ತಿರಲ್ಲ ಅದಕ್ಕೆ ಹೇಳಿದ್ದು ಅಂತ ಹೇಳಿದ್ದಾರೆ. ಇದಕ್ಕೆ ಮತ್ತೆ ಗಗನ್ ಚಿನ್ನಪ್ಪ ಅವರು ಟ್ರಿಗರ್ ಆಗಿದ್ದಾರೆ. ಗೆ ಸಲುಗೆ ತಗೋಬೇಡ ಅಂತ ಗಗನ್ ಹೇಳಿದ್ದಾರೆ.
Bigg Boss Kannada 13: ಯಾರು - ಯಾರಿಗೆ trigger ಮಾಡಿದ್ದು?
ಮುಂದುವರಿದು ನೀವು ನನ್ನ ಕ್ಯಾರೆಕ್ಟರ್‌ವೈಸ್ ನನ್ನೂ ನನ್ನ ಫ್ರೆಂಡ್ಸ್‌ಗೆಲ್ಲ ಹೇಳಬಹುದು ಅಂತಲೂ ಧನುಷ್ ಹೇಳಿದ್ದಾರೆ. ಅಲ್ಲದೆ ಎಂಜಾಯ್ ಮಾಡಬಹುದು ಎನ್ನುವ ಮಾತು ಸಹ ಕೇಳಿಸಿದೆ. ಇದಕ್ಕೆ ಗಗನ್ ಚಿನ್ನಪ್ಪ, ನೀನು ಯಾವುದೋ ಕಿತ್ತೋಗಿರೊ ಸೈಕಲ್ ಓಡಿಸಿಕೊಂಡು ಬಂದಿದ್ಯಾ ಅಂತ ಹೇಳಿದ್ರೆ ನಿನಗೆ ಇಷ್ಟ ಆಗುತ್ತಾ ಅಂತ ಗಗನ್ ಕೇಳಿದ್ದಾರೆ. ಇದಕ್ಕೆ ಧನುಷ್ ನಾನು ನಿಮಗೆ ಕಿತ್ತೋಗಿರೊ ಆ್ಯಕ್ಟಿಂಗ್ ಮಾಡಿಕೊಂಡು ಬಂದಿದ್ದಿರ ಅಂತ ತಾನೆ ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಗಗನ್ ಮರ್ಯಾದೆ ಕೊಟ್ಟು ಮರ್ಯಾದೆ ತಗೋ ಅಂತ ಹೇಳಿದ್ದಾರೆ.
ನೀನು ಒಂದು ಲೆವೆಲ್ ಇಟ್ಕೋ ಅಂತ ಗಗನ್ ಹೇಳಿದ್ರೆ, ಒಂದು ಲೆವೆಲ್ ಇರೋದಕ್ಕೆ ಇಲ್ಲಿಗೆ ಬಂದಿರೋದು ಅಂತ ಧನುಷ್ ತಿರುಗೇಟು ಕೊಟ್ಟಿದ್ದಾರೆ. ನನ್ನ ಟ್ರಿಗರ್ ಮಾಡ್ಬೇಡ... ನಾನು ಸರಿಯಾಗಿ ಸೈಕ್ ಆಗ್ತೀನಿ ಯಾರಾದರೂ ಟ್ರಿಗರ್ ಮಾಡಿದ್ರೆ ಅಂತ ಗಗನ್ ಹೇಳಿದ್ದಾರೆ.
Bigg Boss Kannada 13: ಏನ್ ಗುರು ಒಂದೇ ವಾರದಲ್ಲಿ ಫೇಮಸ್ ಆಗ್ಬಿಟ್ಟೆ!
ಇನ್ನು ಗಗನ್ ಚಿನ್ನಪ್ಪಗೆ ಏನ್ ಗುರು ಒಂದೇ ವಾರದಲ್ಲಿ ಇಷ್ಟೊಂದು ಫೇಮಸ್ ಆಗ್ಬಿಟ್ಟೆ ಅಂತ ತಾಂಡವ್ ರಾಮ್ ಅವರು ಪ್ರಶ್ನಿಸಿದ್ದಾರೆ. ಇಬ್ಬರು ಒಟ್ಟಿಗೆ ಓಡಾಡುತ್ತಿದ್ದರೂ ಸಹ ವೈಯಕ್ತಿಕ ಆಟವಾಡೋಣ ಎನ್ನುವಂತೆ ಮಾತನಾಡಿಕೊಂಡಿದ್ದಾರೆ.
Bigg Boss Kannada 13: ಈ ಸೀಸನ್‌ನ ಮೊದಲ ಎಲಿಮಿನೇಷನ್: ಪ್ರಥಮಾ
ಮೊದಲ ವಾರವೇ ವಿನಯ್ ಪ್ರಸಾದ್ ಅವರ ಪುತ್ರಿ ನಟಿ ಪ್ರಥಮಾ ಪ್ರಸಾದ್ ಅವರು ಎಲಿಮಿನೇಷನ್ ಆಗಿದ್ದಾರೆ. ಈ ಸೀಸನ್‌ನ ಮೊದಲ ಎಲಿಮಿನೇಷನ್ ಇದಾಗಿದ್ದು ಒಂದೇ ವಾರದಲ್ಲಿ ಪ್ರಥಮಾ ಎಲಿಮಿನೇಷನ್ ಆಗಿದ್ದಾರೆ. ಆದರೆ ವೀಕ್ಷಕರು ಈ ವಾರ ನೋ ಎಲಿಮಿನೇಷನ್ ಇದ್ದಿದ್ದರೆ ಚೆನ್ನಾಗಿತ್ತು ಅಂತ ಹೇಳಿದ್ದಾರೆ. ಇನ್ನೂ ಕೆಲವರು ಪ್ರಥಮಾ ಅವರು ತಾವೇ ಶ್ರೇಷ್ಠ ಎನ್ನುವಂತೆ ವರ್ತಿಸಬಾರದಿತ್ತು ಅಂತ ಅಭಿಪ್ರಾಯಪಟ್ಟಿದ್ದಾರೆ.