
Amruthadhare Serial: ಜೈದೇವ್ ಬದುಕಿಲ್ಲ ಎಂಬ ಸತ್ಯ ಶಕುನಿ ಮಾವ ಮುಂದೆ ಬಯಲು; ಹೊಸ ಟ್ವಿಸ್ಟ್!
Amruthadhare Serial: ಅಮೃತಧಾರೆ ಸೀರಿಯಲ್‌ನ ಹೊಸ ಎಪಿಸೋಡ್‌ಗಳಲ್ಲಿ ಕೇಡಿ ಜೈದೇವ್ ಕೊಲೆ ಪ್ರಕರಣದಲ್ಲಿ ಭೂಮಿಕಾ ಹಾಗೂ ಜೀವಾ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಶಕುನಿ ಮಾವ ಜೈದೇವ್ ಕೊಲೆಯಾಗಿದ್ದಾನೆ ಎನ್ನುವ ಸತ್ಯ ತಿಳಿಯದೆ ಭೂಮಿಕಾ ಹಾಗೂ ಮಲ್ಲಿಗೆ ಸಪೋರ್ಟ್ ಮಾಡುತ್ತಿದ್ದಾನೆ. ಭೂಮಿಕಾ ವಿಚಾರಣೆ ಆಗಲೇ ಮುಗಿದಿದೆ ಅಲ್ವಾ, ಎಲ್ಲೋಗಿದ್ರಿ ಅಂತ ಕೇಳಿದ್ದಾನೆ. ಇದಕ್ಕೆ ಮಲ್ಲಿ ಯಾಕೆ ಅಂಕಲ್ ಇಲ್ಲಿಗೆ ಬರೋಕೆ ಹೋದ್ರಿ ಮನೆಗೇ ಬರ್ತಿದ್ವಲ್ಲ ಅಂತ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಉತ್ತರಿಸಿರುವ ಶಕುನಿ ಮಾವ ಮಲ್ಲಿ, ಮನೆಯಲ್ಲಿ ಗೋಡೆ ಗೋಡೆಗಳಿಗೂ ಹೆಡ್‌ಫೋನ್ ಇರುತ್ತಮ್ಮಾ... ಅಷ್ಟೇ ಅಲ್ಲ ಸೂಕ್ಷ್ಮಿದರ್ಶನಿಯೂ ಇರುತ್ತದೆ ಅಂತ ಹೇಳಿದ್ದಾನೆ.
ಶಕುನಿ ಮಾವನ ಮಾತುಗಳು ಅರ್ಥವಾಗದೆ ಭೂಮಿಕಾ ಹಾಗೂ ಮಲ್ಲಿ ಒಬ್ಬರನ್ನೊಬ್ಬರು ನೋಡಿಕೊಂಡಿದ್ದಾರೆ. ಮುಂದುವರಿದು ಮಾತನಾಡಿರುವ ಮಾವ, ಒಂದು ಕಣ್ಣು ಸದಾ ನಿಮ್ಮನ್ನು ಗಮನಿಸುತ್ತಿರುತ್ತದೆ ಅಂದ ಮೇಲೆ ನಿಮ್ಮ ಮೈ ಎಲ್ಲ ಕಣ್ಣಾಗಿ ಇರ್ಬೇಕಲ್ವಾ ಅಂತ ಕೇಳಿದ್ದಾರೆ. ಇದಕ್ಕೆ ಅರ್ಥವಾಗಲಿಲ್ಲ ಅಂಕಲ್ ಅಂತ ಭೂಮಿಕಾ ಕೇಳಿದ್ರೆ, ಅಲ್ಲ ಭೂಮಿಕಾ ನೀವು ಜೈದೇವ್ ಮಾತಾಡೋದನ್ನ ಮನೆಯಲ್ಲೇ ಕೇಳಿಸಿಕೊಳ್ಳಬೇಕು ಅಂತ ಒಂದು ಸೆಟಪ್ ಮಾಡಿಕೊಂಡಿದ್ರಲ್ಲ ಅದನ್ನ ಶಕುಂತಲಾ ದೇವಿ ಕಂಡು ಹಿಡಿದಿದ್ದಾಳೆ ಅಂತ ಹೇಳುವ ಮೂಲಕ ಶಾಕ್ ಕೊಟ್ಟಿದ್ದಾರೆ. ಬರೇ ನೋಡಿದ್ದಲ್ಲ ನೀವು ರೆಕಾರ್ಡ್ ಮಾಡಿದ್ದನ್ನೆಲ್ಲ ಕೇಳಿಸಿಕೊಂಡಿದ್ದಾಳೆ.
ಅವರು ಮೊದಲೇ ಎಲ್ಲವನ್ನೂ ಕೇಳಿಸಿಕೊಂಡಿದ್ದಾರೆ ಎಂದರೆ ಈ ಬಗ್ಗೆ ನನ್ನ ಬಳಿ ಏನೂ ಸಹ ಕೇಳಿಲ್ಲ ಯಾಕೆ ಅಂತ ಭೂಮಿಕಾ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಅದೆಲ್ಲ ಈಗ ಮುಖ್ಯವಲ್ಲ ಅಂತ ಶಕುನಿ ಮಾವ ಹೇಳಿದ್ದಾನೆ. ಅಲ್ಲದೆ ನಾಳೆ ಮನೆಗೆ ಪೊಲೀಸರು ವಿಚಾರಣೆಗೆ ಬಂದಾಗ ಶಕುಂತಲಾ ಈ ವಿಚಾರವನ್ನು ಪೊಲೀಸರಿಗೆ ಹೇಳಿದರೆ ಏನಾಗಬಹುದು ಅಂತ ಆತಂಕ ವ್ಯಕ್ತಪಡಿಸಿದ್ದಾನೆ. ನಿನ್ನ ಕತೆ ಏನು ಅಂತ ಹೆದರಿಕೆ ಆಗಿದೆ. ಪುತ್ರ ವ್ಯಾಮೋಹ ಇದೆ ಅವನು ಎಷ್ಟೇ ಕೆಟ್ಟವನಿರಲಿ ಮಗಾ ಅಲ್ಲವೇ. ಅವನ ಮೇಲೆ ಕೋಪ ಇರುವ ಕಾರಣಕ್ಕೆ ಸುಮ್ಮನಿದ್ದಾಳಷ್ಟೇ ಅಂತ ಹೇಳಿದ್ದಾನೆ.
Amruthadhare Serial: ಶಕುನಿ ಮಾವನ ಮುಂದೆ ಸತ್ಯ ಬಯಲು!
ನೋಡು ಈ ಕೋಪ ಶಾಶ್ವತ ಅಲ್ಲ. ಸರಿ ಮುಂದೇನಾಯ್ತು ಜೈದೇವ್ ಎಲ್ಲಿದ್ದಾನೆ. ನೀನು ಈ ತರ ಇದ್ದರೆ ನನಗೆ ತುಂಬಾ ಹೆದರಿಕೆ ಆಗುತ್ತದೆ ಏನಾಯ್ತು ಹೇಳು ಅಂತ ಶಕುನಿ ಮಾವ ಒತ್ತಾಯ ಮಾಡಿದ್ದಾನೆ. ಕೊನೆಗೂ ಭೂಮಿಕಾ ಮೌನ ಮುರಿದಿದ್ದಾಳೆ. ಜೈದೇವ್ ಬದುಕಿಲ್ಲ ಎನ್ನುವ ಸತ್ಯವನ್ನು ಜೈದೇವ್ ಮುಂದೆ ಹೇಳಿದ್ದಾಳೆ. ನೀವು ಜೈದೇವ್‌ನ ಕೊಂದು ಬಿಟ್ಟರಾ ಅಂತ ಕೇಳಿದ್ದಾನೆ. ಪೊಲೀಸರಿಗೆ ಶರಣಾಗಬೇಕು ಎಂದುಕೊಳ್ಳುತ್ತಿದ್ದೀನಿ ಅಂತ ಭೂಮಿಕಾ ಹೇಳುವಾಗಲೇ ಮಾವ ಭೂಮಿಕಾ ನೀನು ಶರಣಾಗಬಾರದಮ್ಮಾ ಅಂತ ಹೇಳಿದ್ದಾನೆ.
ಮುಂದುವರಿದು ನಾನು ವಯಸ್ಸಿನಲ್ಲಿ ನಿಮಗಿಂತ ಹಿರಿಯ ಅಲ್ವಾ. ನಾನು ಏನೇ ಹೇಳಿದರೂ ನನ್ನ ಮಾತಿನಲ್ಲಿ ಒಂದು ಅರ್ಥವಿರುತ್ತದೆ ಅಲ್ವಾ. ಇದು ಬೇಕು ಅಂತ ಮಾಡಿದ್ದು ಅಲ್ವಲ್ಲ ನೋಡು ನೀನು ಅದನ್ನು ಮೊದಲು ತಲೆಯಿಂದ ತೆಗೆದುಹಾಕು ಅಂತ ಹೇಳಿದ್ದಾನೆ. ಮುಂದೆ ಏನು ಮಾಡಬೇಕು ಅಂತ ನಾವು ಕುಳಿತು ಯೋಚನೆ ಮಾಡೋಣ ಅಂತಲೂ ಹೇಳಿದ್ದಾನೆ. ಅಂಕಲ್ ಇದರಲ್ಲಿ ಯೋಚನೆ ಮಾಡೋದು ಏನಿದೆ ಅಂತ ಕೇಳಿದ್ದಾಳೆ.
ಇದು ತುಂಬಾ ದೊಡ್ಡ ವಿಷಯ ಇದರಲ್ಲಿ ನೀನು ಸಿಕ್ಕಿ ಬೀಳೋದು ಮಾತ್ರವಲ್ಲ ಜೈದೇವ್ ಬಾಳು ಸಹ ಹಾಳಾಗಲಿದೆ ಅಂತ ಹೇಳಿದ್ದಾನೆ. ಇದಕ್ಕೆ ಮಲ್ಲಿ ಸಹ ಸಹಮತ ವ್ಯಕ್ತಪಡಿಸಿದ್ದಾಳೆ. ಜೀವಾ ಈಗ ತಂದೆ ಆಗುತ್ತಿದ್ದಾನೆ ಅಂತನೂ ಮಲ್ಲಿ ಹೇಳಿದ್ದಾಳೆ. ಭೂಮಿಕಾ ಇಂತಹ ಸ್ಥಿತಿಯಲ್ಲಿ ನೀನು ಸಿಕ್ಕಾಕಿಕೊಳ್ಳದೆ ಅವರನ್ನೂ ಇಲ್ಲಿ ಸಿಕ್ಕಿ ಹಾಕಿಸ್ತಿದ್ದಿಯ. ಇದನ್ನ ಇಲ್ಲಿಗೆ ಮುಗಿಸಿ ಬಿಡೋಣ ಅಂತಲೂ ಹೇಳಿದ್ದಾನೆ.