Bigg Boss Kannada 13: ಮಾಡ್ರನ್ ಮಂಜಾಗೆ ಕಿಚ್ಚ ಸುದೀಪ್ ಕ್ಲಾಸ್; ‘ಅಣ್ಣ ಅಂತ ಅನಿಸಿಕೊಳ್ಳಬೇಕಾದರೆ...’ 50 ಪೈಸೆ ಬೆಲೆ ಇಲ್ಲ..

Bigg Boss Kannada 13: ಮಾಡ್ರನ್ ಮಂಜಾಗೆ ಕಿಚ್ಚ ಸುದೀಪ್ ಕ್ಲಾಸ್; ‘ಅಣ್ಣ ಅಂತ ಅನಿಸಿಕೊಳ್ಳಬೇಕಾದರೆ...’  50 ಪೈಸೆ ಬೆಲೆ ಇಲ್ಲ..

Bigg Boss Kannada 13: ಮಾಡ್ರನ್ ಮಂಜಾಗೆ ಕಿಚ್ಚ ಸುದೀಪ್ ಕ್ಲಾಸ್; ‘ಅಣ್ಣ ಅಂತ ಅನಿಸಿಕೊಳ್ಳಬೇಕಾದರೆ...’ 50 ಪೈಸೆ ಬೆಲೆ ಇಲ್ಲ..

Bigg Boss Kannada 13: ಬಿಗ್‌ಬಾಸ್ ಕನ್ನಡ ಸೀಸನ್ 13ನಲ್ಲಿ ಕಿಚ್ಚ ಸುದೀಪ್ ಅವರು ಕಾಮನ್ ಮ್ಯಾನ್ / ಅಗ್ನಿ ಪರೀಕ್ಷೆಯ ಮೂಲಕ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 13ಯಲ್ಲಿ ಕಾಮನ್ ಮ್ಯಾನ್‌ಗಳಿಗೆ ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿ ನಾಲ್ವರು ಕಾಮನ್ ಮ್ಯಾನ್‌ಗಳು ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಕಾಮನ್‌ಮ್ಯಾನ್‌ಗಳ ವರ್ತನೆಗೆ ನೆಟ್ಟಿಗರು, ವೀಕ್ಷಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮಾಡ್ರನ್ ಮಂಜಾ ಅವರ ಮಾತು ಭಾರೀ ಟೀಕೆಗೆ ಕಾರಣವಾಗುತ್ತಿದೆ. ಇದೀಗ ಕೊನೆಗೂ ಕಿಚ್ಚ ಸುದೀಪ್ ಅವರು ಮಾಡ್ರನ್ ಮಹಾಕವಿ ಮಂಜಾ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ವಾರದ ಕಥೆ ಕಿಚ್ಚ ಸುದೀಪ್ ಜೊತೆ ವಾರಾಂತ್ಯದ ಶೋನಲ್ಲಿ ಕಿಚ್ಚ ಸುದೀಪ್ ಅವರು ಕಾಮನ್‌ ಮ್ಯಾನ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇವರಿಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ವೀಕ್ಷಕರು ಸಹ ಒತ್ತಾಯಿಸಿದ್ದರು. ಅದರಂತೆಯೇ ಬಿಗ್‌ಬಾಸ್ ಕನ್ನಡ ಸೀಸನ್‌ 13ರ ಎರಡನೇ ವಾರದ ಶೋನಲ್ಲಿ ಹಲವು ಪ್ರಮುಖ ವಿಷಯಗಳು ಚರ್ಚೆ ಆಗಿವೆ.

Bigg Boss Kannada 13: ಇದು ತಪ್ಪು ಮಾಡಿದವರಿಗೆ ದಂಡನೆ...!

ಇದು ತಪ್ಪು ಮಾಡಿದವರಿಗೆ ದಂಡನೆ ಎನ್ನುವ ಸಾಲುಗಳೊಂದಿಗೆ ಕಲರ್ಸ್ ಕನ್ನಡ ವಾಹಿನಿಯಿಂದ ಹೊಸ ಪ್ರೋಮೋ ಹಂಚಿಕೊಳ್ಳಲಾಗಿದೆ. ಅದರಲ್ಲಿ ಕಿಚ್ಚ ಸುದೀಪ್ ಅವರು ಮಂಜಾಗೆ ಕ್ಲಾಸ್ ತಗೊಂಡಿದ್ದಾರೆ. ಮಾಡ್ರನ್ ಮಹಾಕವಿ ಮಂಜಾ... ಸಾರಿ ಅಂತೇಳಿ ಮಂಜಾ ಅವರು ಮಾಡುವಂತೆಯೇ ಕಿಚ್ಚ ಸುದೀಪ್ ಅವರು ಆ್ಯಕ್ಷನ್ ಮಾಡಿ ತೋರಿಸಿದ್ದಾರೆ. "ನಾನು ಅಣ್ಣ ಅಂತ ಅನಿಸಿಕೊಳ್ಳಬೇಕಾದರೆ, ತಮ್ಮನಿಗೆ ಕೆಲವೊಂದು ಬೆಲೆ ಇರಬೇಕು' ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ. ಮುಂದುವರಿದು ಮನೆಯ ಸದಸ್ಯರೆಲ್ಲ ನಮಗೆ.. ಅಂತ ಮಂಜಾ ಅವರು ಹೇಳಿದ್ದಾರೆ ಇದಕ್ಕೆ ಕಿಚ್ಚ ಸುದೀಪ್ ಅವರು, ಮನೆಯ ಸದಸ್ಯರಾ ಅವರ್ಯಾವ ಸದಸ್ಯರು ರೀ... ಕಿತ್ತೋಗಿರೋರಿಗೆ 50 ಪೈಸೆ ಬೆಲೆ ಇಲ್ಲ ಅವರಿಗೆ ಅಂತಲೂ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

ಜನ ಈ ಶೋ ನೋಡುತ್ತಿದ್ದಾರೆ ಅಂತ ತಾನೇ ನೀವೆಲ್ಲ ಬರ್ತಾ ಇರೋದು. ಆ ಜನ 12 ಸೀಸನ್‌ಗಳಿಂದ ಸಂಪಾಸಿರುವ ಆಸ್ತಿ. ಯಾವುದೋ ನಾಲ್ಕು ಜನಗಳಿಗೋಸ್ಕರ ಅಷ್ಟು ಕೋಟಿ.. ಕೋಟಿ ಜನಗಳನ್ನು ಕಳೆದುಕೊಳ್ಳುವುದಕ್ಕೆ ನಾವು ಯಾರೂ ಸಿದ್ಧವಾಗಿಲ್ಲ ಅಂತಲೂ ಕಿಚ್ಚ ಸುದೀಪ್ ಅವರು ಕೋಪವಾಗಿಯೇ ಹೇಳಿದ್ದಾರೆ.

Bigg Boss Kannada 13: ನೆಟ್ಟಿಗರು ಹೇಳಿದ್ದೇನು ?

ಕಾಮನ್ ಮ್ಯಾನ್ ಅಂತ ಒಳಗೆ ಬಿಟ್ಟಿದ್ದೇ ತಪ್ಪಾಯ್ತು. ಇಷ್ಟು ದಿನದ ಬಿಗ್‌ಬಾಸ್ ಹೆಸರು ಇವರಿಂದಾಗಿ ಹಾಳಾಯ್ತು ಅಂತ ಕೆಲವು ನೆಟ್ಟಿಗರು ಹೇಳಿದ್ದಾರೆ. ಮಂಜ, ಕಿರಣ್ ಶಾಸ್ತ್ರೀ ಇಬ್ಬರು ಮೊಣಕಾಲು ಕೆಳಗಿನ ಭಾಷೆನ ಕೇಳ್ತಿದ್ರೆ ಬಿಗ್ ಬಾಸ್ ನೋಡೋದೇ ಬೇಡ ಅನ್ನಸ್ತಿದೆ. ಬಾಯಿ ಬಿಟ್ಟರೆ ಹೊಲಸು ಬೈಗುಳ..
ಇವರನ್ನು ಕರಕೊಂಡು ಬಂದು ಜಗಳ ಹಚ್ಚಿದಾರೆ. ನಾವು ಹಳ್ಳಿಯವರಿಗೆ ಇವರನ್ನು ನೋಡೋಕೆ ಆಗ್ತಿಲ್ಲ ಅಂತ ಸಂಜಯ್ ಭೂಮಣ್ಣವರ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.

ನಮ್ಮ ಅಚ್ಚುಮೆಚ್ಚಿನ ಕಾರ್ಯಕ್ರಮ ಬಿಗ್ ಬಾಸ್ ಆಗಿದೆ. ಈ ಬಾರಿ ತುಂಬಾ ಬೇಜಾರು ನೋಡೋದಕ್ಕೆ ಏಕೆಂದರೆ ಆ ನಾಲ್ಕು ಜನ ಅಂತೂ ತುಂಬಾ ಬೇಜಾರ್ ಮಾಡ್ತಾರೆ ಟಿವಿ ನೋಡಕ್ಕೆ ಅಂತಲೂ ಕೆಲವರು ಹೇಳಿದ್ದಾರೆ. ಆದರೆ ಇನ್ನೂ ಕೆಲವರು ಕಾಮನ್ ಮ್ಯಾನ್‌ಗಳನ್ನು ಸಮರ್ಥಿಸಿಕೊಂಡಿದ್ದಾರೆ. ಎಲ್ಲಾ ಮಂಜನಿಗೆ ಬೈತಿದ್ರೆ ಸೆಲೆಬ್ರಿಟಿಗಳು ಮಾಡೋದನ್ನ ಯಾರು ಹೇಳ್ತಿಲ್ಲ. ಕಾಮೆಂಟ್ ಅಲ್ಲಿ ಅವರದ್ದೇ ಒಂದು ಗುಂಪು ಸಾಮಾನ್ಯ ಜನರದ್ದೇ ಒಂದು ಗುಂಪು ಮಾಡ್ಬಿಟಿದ್ದಾರೆ ಈ ಸೆಲೆಬ್ರಿಟಿಗಳು ಅಂತಲೂ ಕೆಲವರು ಕಾಮನ್‌ ಮ್ಯಾನ್‌ಗಳನ್ನು ಸಮರ್ಥಿಸಿಕೊಂಡಿದ್ದಾರೆ.

bigg boss kannada sudeep viral

bigg boss kannada sudeep viral

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ