Bengaluru Metro Costs: ಮುಂಬೈನಲ್ಲಿ 100 ಕಿಮೀ ಸಂಚಾರ ದರ ಕಡಿಮೆ, ಬೆಂಗಳೂರಲ್ಲಿ 25 ಕಿಮೀ ಪ್ರಯಾಣಕ್ಕೆ ಜೇಬಿಗೆ ಕತ್ತರಿ!

Bengaluru Metro Costs: ಮುಂಬೈನಲ್ಲಿ 100 ಕಿಮೀ ಸಂಚಾರ ದರ ಕಡಿಮೆ, ಬೆಂಗಳೂರಲ್ಲಿ 25 ಕಿಮೀ ಪ್ರಯಾಣಕ್ಕೆ ಜೇಬಿಗೆ ಕತ್ತರಿ!

Bengaluru Metro Costs: ಮುಂಬೈನಲ್ಲಿ 100 ಕಿಮೀ ಸಂಚಾರ ದರ ಕಡಿಮೆ, ಬೆಂಗಳೂರಲ್ಲಿ 25 ಕಿಮೀ ಪ್ರಯಾಣಕ್ಕೆ ಜೇಬಿಗೆ ಕತ್ತರಿ!

ಬೆಂಗಳೂರು: ರಾಜಧಾನಿ ಬೆಂಗಳೂರು ಮೆಟ್ರೋ ಮತ್ತು ಇಲ್ಲಿನ ನಗರವಾಸಿಗಳಿಗೆ ಹೋಲಿಕೆ ಮಾಡಿದರೆ ಕೊಲ್ಕತ್ತಾ, ದೆಹಲಿ, ಮುಂಬೈ ಹಾಗೂ ಚೆನ್ನೈ ಮಹಾನಗರಗಳ ಮೆಟ್ರೋ ಜಾಲದ ಸಂಚಾರ ದರ ಕಡಿಮೆ ಇದೆ. ಮುಂಬೈ 100 ಕಿಮೀ ದೂರದ ವಾಸಸ್ಥಳದಿಂದಲೂ ಮೆಟ್ರೋ ಸಾರಿಗೆಯಲ್ಲಿ ಸಂಚರಿಸಬಹುದು. ಆದರೆ ಬೆಂಗಳೂರಿನಲ್ಲಿ 20-25ಕಿಮೀ ದೂರ ಪ್ರಯಾಣ, ವಾಸಸ್ಥಳದಿಂದ ಸಂಚರಿಸಲು ಅಧಿಕ ದರ ವ್ಯಯಿಸಬೇಕಾದ ಸ್ಥಿತಿ ಇದೆ. ಇಲ್ಲಿ ಒಂದು ಕಿಮೀ ಸಂಚಾರಕ್ಕೆ ಒಬ್ಬರು ₹3.57 ರೂ.ವ್ಯಯಿಸಬೇಕಿದೆ. ಇದು ಇತರ ಮಹಾನಗರಗಳಿಗಿಂತ ಮತ್ತು ದೇಶದಲ್ಲಿ ಅತ್ಯಧಿಕ ದುಬಾರಿ ದರವಾಗಿದೆ.

ಸಾಮಾನ್ಯವಾಗಿ ಕಡಿಮೆ ದೂರದ ಸ್ಥಳಗಳ ನಡುವಿನ ಸಂಚಾರ ಕೊಂಚ ದುಬಾರಿ ಇರುತ್ತದೆ. 50-70 ಮತ್ತು 100 ಕಿಲೋ ಮೀಟರ್ ಸಂಚಾರ ಮಾಡಲು ಜನರಿಗೆ ಖರ್ಚು ಕಡಿಮೆ ಬರುತ್ತದೆ. ಈ ವ್ಯವಸ್ಥೆಯನ್ನು ನೀವು ಚೆನ್ನೈ, ದೆಹಲಿಗಳ ನಗರಗಳಲ್ಲಿ ಕಾಣಬಹುದು. ಆದರೆ ಬೆಂಗಳೂರಿನಲ್ಲಿ ಮೆಟ್ರೋ ಜಾಲ ಇರುವುದೇ 96 ಕಿಮಿ. ಇದರಲ್ಲಿ 20-25 ಕಿಲೋ ಮೀಟರ್ ದೂರ ಮಾದಾವರದಿಂದ ನಗರಕ್ಕೆ ಬರಲು, ಚಲಘಟ್ಟದಿಂದ ವೈಟ್‌ಫಿಲ್ಡ್‌ಗೆ ಕಡಿಮೆ ದೂರ ಪ್ರಯಾಣಕ್ಕೆ ಹೆಚ್ಚಿನ ಹಣ ಖರ್ಚು ಮಾಡಬೇಕಿದೆ ಎಂದು 'ದಿ ಹಿಂದು' ವರದಿ ಮಾಡಿದೆ.

ಸರಳವಾಗಿ ಹೇಳುವುದಾದರೆ ಸಾರ್ವಜನಿಕ ಸಾರಿಗೆ ಅದರಲ್ಲೂ ವೇಗದ, ಪರಿಸರಕ್ಕೆ ಕೊಡುಗೆ ನೀಡುವ, ಟ್ರಾಫಿಕ್ ಕಿರಿ ಕಿರಿ ಇಲ್ಲದೇ ಮೆಟ್ರೋ ಸಾರಿಗೆ ಜಾಲ ವ್ಯಾಪಿಸಿದಷ್ಟು ಜನರಿಗೆ ಅನುಕೂಲವಾಗಬೇಕು. ದೆಹಲಿಯಲ್ಲಿ100 ಕೀಮೀ ದೂರದಲ್ಲಿ ವಾಸಿಸುವವರು ವಸತಿ ಪ್ರದೇಶದಿಂದ ಕೇಂದ್ರ ವಾಣಿಜ್ಯ ಪ್ರದೇಶಕ್ಕೆ (CBD) ಕಡಿಮೆ ಖರ್ಚಿನಲ್ಲಿ ನಿತ್ಯ ಸಂಚಾರ ಮಾಡಬಹುದಾಗಿದೆ. ಗಾಜಿಯಾಬಾದ್ ಮತ್ತು ಫರಿದಾಬಾದ್‌ನಿಂದ ನಗರದ ಕೇಂದ್ರವಾದ ಕಾನಾಟ್ ಪ್ಲೇಸ್‌ ವರೆಗೆ ಸಂಚರಿಸುವಷ್ಟು ಮೆಟ್ರೋ ಜಾಲ ದೆಹಲಿಯಲ್ಲಿ ವಿಸ್ತಾರಗೊಂಡಿದೆ.

ಆದರೆ ಬೆಂಗಳೂರಿನಲ್ಲಿ ಕೊನೆ ಮೈಲಿ ಸಂಪರ್ಕ ಸಾಧಿಸಲು ಮೆಟ್ರೋ ಜಾಲ ವಿಸ್ತರಣೆ ಆಗಬೇಕಿದೆ. ಟಿಕೆಟ್ ದರ ದುಬಾರಿ ಹಿನ್ನೆಲೆಯಲ್ಲಿ ಜನರು ಸಾರ್ವಜನಿಕ ಸಾರಿಗೆ ಬಳಸಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಸಾಮಾನ್ಯವಾಗಿ ಕಡಿಮೆ ಅಂತರದ ಸ್ಥಳಗಳಿಗೆ ಓಡಾಡಲು ಜನರು ಖಾಸಗಿ ವಾಹನ ಬಳಸುತ್ತಾರೆ. ದೂರದ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆ ಬಳಸುತ್ತಾರೆ. ಆದರೆ ಬೆಂಗಳೂರಿನ ಮೆಟ್ರೋ ಮಟ್ಟಿಗೆ ಇದು ಉಲ್ಟಾ ಎನ್ನಬಹುದು. ಟಿಕೆಟ್ ದರ ಏರಿಕೆ, ಕೆಲವೆಡೆ ಮೆಟ್ರೋ ನಿಲ್ದಾಣದಿಂದ ಜನವಸತಿ ಪ್ರದೇಶಗಳಲ್ಲಿ ಫೀಡರ್ ಬಸ್ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ಬೆಂಗಳೂರಿನಂತಹ ನಗರದಲ್ಲಿ ಮೆಟ್ರೋಗಿಂತ ಬಿಎಂಟಿಸಿ ಬಸ್ ಟಿಕೆಟ್ ದರವೇ ಅಗ್ಗವೆಂದು ಅದರಲ್ಲಿ ಒಡಾಡುತ್ತಾರೆ. ಇದು ಮೆಟ್ರೋ ಸಾರಿಗೆ ಆದಾಯ ಕುಸಿತಕ್ಕೂ ಕಾರಣವಾಗಿದೆ ಎನ್ನಲಾಗಿದೆ.

ಬೆಂಗಳೂರಿಗರ ಮೆಟ್ರೋ ಸಂಚಾರ ಸರಾಸರಿ 22 ಕಿ.ಮೀ!

ನಗರದ ಪ್ರಮುಖ ವಾಣಿಜ್ಯ ಕೇಂದ್ರದಿಂದ (CBD) 100 ಕಿ.ಮೀ ದೂರದವರೆಗೂ ನಾಗರಿಕರು ವಾಸಿಸುತ್ತಾರೆ. ಕೋಲ್ಕತ್ತಾದಲ್ಲಿ 70-100 ಕಿ.ಮೀ, ಚೆನ್ನೈನಲ್ಲಿ 60-75 ಕಿ.ಮೀ ಮತ್ತು ದೆಹಲಿ ಎನ್‌ಸಿಆರ್ (NCR) ವ್ಯಾಪ್ತಿಯಲ್ಲಿ 30-40 ಕಿ.ಮೀ ದೂರದವರೆಗೆ ವಾಸಿಸಲು, ನಿತ್ಯ ಅಲ್ಲಿದ್ದುಕೊಂಡೆ ಸಂಚಾರ ಸಾಧ್ಯವಾಗಿದೆ. ಈ ವಿಚಾರದಲ್ಲಿ ಬೆಂಗಳೂರಿನಲ್ಲಿ ಕಡಿಮೆ ಮೆಟ್ರೋ ಜಾಲ ಇರುವ ಕಾರಣ ಇದರ ವ್ಯಾಪ್ತಿಯು ಕೇವಲ 20-25 ಕಿ.ಮೀ (ಸರಾಸರಿ 22 ಕಿ.ಮೀ) ನಷ್ಟಿದೆ.

ಇತರ ನಗರಗಳಿಗಿಂತ ಹಿಂದೆ ಬಿದ್ದ ಬೆಂಗಳೂರು ಮೆಟ್ರೋ

ಮುಂದಿನ ದಿನಗಳಲ್ಲಿ ನೀಲಿ ಮಾರ್ಗವು ಬೆಂಗಳೂರು ಏರ್‌ಪೋರ್ಟ್‌ವರೆಗೆ ವಿಸ್ತರಣೆ ಆದರೂ ಸಹಿತ ಅಧಿಕ ಖರ್ಚಿನ ಕಾರಣದಿಂದಾಗಿ ನಮ್ಮ ಮೆಟ್ರೋ ಆಗಲೂ ಹಿಂದೆ ಬೀಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇಲ್ಲಿನ ವೈಟ್‌ಫೀಲ್ಡ್, ಕೆಂಗೇರಿ ಅಥವಾ ಮಾದಾವರದ ಬಳಿ ವಾಸಿಸುವವರು 'ನಮ್ಮ ಮೆಟ್ರೋ' ಮೂಲಕ ಸಿಬಿಡಿ ಪ್ರದೇಶಕ್ಕೆ ಸಂಚಾರ ಮಾಡಿದರೂ ಅದರ ದೂರ ಕೇವಲ 20 ರಿಂದ 25 ಕಿ.ಮೀ ಮಾತ್ರವೇ ಆಗಿರುತ್ತದೆ. ಮೆಟ್ರೋ ಜಾಲಕ್ಕೆ ಹೋಲಿಸಿದರೆ ಬೆಂಗಳೂರು ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಕ್ಕಿಂತ ತುಂಬಾ ಹಿಂದೆಯೇ ಇದೆ.

ಮೆಟ್ರೋ ಪ್ರಯಾಣದ ವೆಚ್ಚದ ಹೋಲಿಕೆ

* ಮುಂಬೈ ನಗರದಲ್ಲಿ ಒಂದು ಕಡೆಗಿನ 100 ಕಿ.ಮೀ. ಮೆಟ್ರೋ ಸಂಚಾರಕ್ಕೆ ಮಾಸಿಕವಾಗಿ ₹1,200, ಕೊನೆ ಮೈಲಿ ಸಂಪರ್ಕವು ₹880 ರೂಪಾಯಿ ಸೇರಿ ಒಟ್ಟು ಮಾಸಿಕ ₹2,080 ಎನ್ನಲಾಗಿದೆ. ಅಂದರೆ ಇಲ್ಲಿ ಪ್ರತಿ ಕಿಮೀಗೆ ₹0.46 ತಗುಲುತ್ತದೆ.

* ಕೋಲ್ಕತ್ತಾದಲ್ಲಿ ಏಕಮುಖ 85 ಕಿ.ಮೀ. ಸಂಚಾರ ಮಾಡಲು ಪ್ರಯಾಣಿಕರೊಬ್ಬರು ₹1,100 ಹಾಗೂ ಇತರ ಕೊನೆ ಮೈಲಿ ಸಂಪರ್ಕ ವೆಚ್ಚ 880 ರೂ. ಸೇರಿ ಒಟ್ಟು ಮಾಸಿಕ ₹1,980 ಆಗಲಿದೆ. ಅಂದರೆ ಇಲ್ಲಿ ಪ್ರತಿ ಕಿಮೀ ಸಂಚಾರಕ್ಕೆ ₹0.52 ಆಗುತ್ತದೆ.

* ಅದೇ ರೀತಿ ಚೆನ್ನೈನಲ್ಲಿ ಏಕಮುಖ 70 ಕಿ.ಮೀ. ಸಂಚಾರಕ್ಕೆ ₹1,250 ಹಾಗೂ ಇತರ ಸಂಪರ್ಕದ ವೆಚ್ಚ ₹880 ಸೇರಿ ಮಾಸಿಕ ಒಬ್ಬರಿಗೆ ₹2,130 ಆಗುತ್ತದೆ. ಇಲ್ಲಿ ಪ್ರತಿ ಕಿಮೀ ಒಬ್ಬರಿಗೆ ₹0.67 ವೆಚ್ಚ ತಗಲುತ್ತದೆ.

* ದೆಹಲಿಯಲ್ಲಿ ಒಂದು ಬದಿಯ 35 ಕಿ.ಮೀ. ಸಂಚಾರಕ್ಕೆ ₹2,816 ಮತ್ತ ಇತರ ಸಂಪರ್ಕ ವೆಚ್ಚ 880 ರೂ. ಸೇರಿ ಮಾಸಿಕ ವೆಚ್ಚ ₹3,696 ಆಗುತ್ತದೆ. ಅಂದರೆ ಇಲ್ಲಿ ಪ್ರತಿ ಕಿಮೀ ಸಂಚಾರಕ್ಕೆ ಒಬ್ಬರಿಗೆ 2.27 ರೂಪಾಯಿ ತಗುಲುತ್ತದೆ.

* ಇನ್ನೂ ಬೆಂಗಳೂರಿನಲ್ಲಿ ಏಕಮುಖವಾಗಿ 22.5 ಕಿ.ಮೀ. ಸಂಚರಿಸಲು ಒಬ್ಬರಿಗೆ ₹2,970 ಮತ್ತು ಇತರ ಸಂಪರ್ಕ ವೆಚ್ಚ ₹880 ಸೇರಿ ಮಾಸಿಕವಾಗಿ ಒಟ್ಟು ₹3,850 ಆಗುತ್ತದೆ. ಅಂದರೆ ಬೆಂಗಳೂರಿನಲ್ಲಿ ಒಬ್ಬರು ಒಂದು ಕಿಮೀ ಓಡಾಟಕ್ಕೆ ಬರೋಬ್ಬರಿ ₹3.57 ವೆಚ್ಚ ತಗುಲುತ್ತದೆ. ಭಾರತದಲ್ಲಿ ಬೆಂಗಳೂರಿನಲ್ಲೇ ಅತ್ಯಧಿಕ ಹಣ ಪ್ರಯಾಣಿಕರು ಮೆಟ್ರೋಗಾಗಿ ವ್ಯಯಿಸಬೇಕಿದೆ.

namma metro bmrcl commuters mumbai delhi

namma metro bmrcl commuters mumbai delhi

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ