
Amruthadhare Serial: ದೀಪಿಕಾ ಹಿಂದೆ ಬಿದ್ದ ಜೈದೇವ್; ಅವಳಿ-ಜವಳಿ ಟ್ವಿಸ್ಟ್‌ಗೆ ವೀಕ್ಷಕರು ಗರಂ!, ತಾಳ್ಮೆ ಪರೀಕ್ಷೆ ಎಂದಿದ್ಯಾಕೆ
Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿ ಮತ್ತೊಮ್ಮೆ ಅವಳಿ - ಜವಳಿ ಕಥೆ ಶುರುವಾಗಿದೆ. ಆದರೆ, ಅಮೃತಧಾರೆ ಸೀರಿಯಲ್‌ನ ಹೊಸ ತಿರುವಿಗೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಎಪಿಸೋಡ್‌ಗಳು ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಿದೆ ಎಂದು ಹಲವು ವೀಕ್ಷಕರು ಹೇಳಿದ್ದಾರೆ. ಅಮೃತಧಾರೆಯಲ್ಲಿ ಎದುರಾಗಿರುವ ಹೊಸ ತಿರುವೇನು. ಭೂಮಿಕಾ ತಂಗಿ ದೀಪಿಕಾ ಬಳಿ ಹೋಗಿರುವ ಜೈದೇವ್‌ಗೆ ಏನಾಯ್ತು ಎನ್ನುವ ವಿವರ ಇಲ್ಲಿದೆ.
ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ಹಾಗೂ ಮಹತ್ವದ ಟ್ವಿಸ್ಟ್ ಎದುರಾಗಿದೆ. ವೀಕ್ಷಕರು ಊಹೆ ಸಹ ಮಾಡದ ಟ್ವಿಸ್ಟ್‌ವೊಂದು ಎದುರಾಗಿದೆ. ಭೂಮಿಕಾಳ ತಂಗಿ ದೀಪಿಕಾ ಎಂಟ್ರಿಯಾಗಿದ್ದು, ಜೈದೇವ್ ಒಂದು ನಾಟಕ ಮಾಡಬೇಕು ಅದಕ್ಕೆ ದುಡ್ಡು ಸಹ ಕೊಡ್ತೀವಿ ಅಂತ ದೀಪಿಕಾ ಬಳಿ ಹೇಳಿದ್ದಾನೆ.
ಭೂಮಿಕಾ ಹಾಗೂ ದೀಪಿಕಾ ಅವಳಿ - ಜವಳಿ ಎನ್ನುವಂತೆ ತೋರಿಸಲಾಗಿದೆ. ಅಮೃತಧಾರೆಯಲ್ಲಿ ಹೊಸ ಪ್ರೋಮೋ ಬಿಡುಗಡೆ ಮಾಡಿದಾಗ ಎಲ್ಲರೂ ಜೈದೇವ್ ಪಾತ್ರ ಬದಲಾಗಬಹುದು ಅಥವಾ ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಬರಬಹುದು ಅಂತಲೇ ಲೆಕ್ಕಾಚಾರ ಹಾಕಿದ್ದರು. ಆದರೆ, ಆ ಎಲ್ಲ ಲೆಕ್ಕಾಚಾರಗಳು ಸಹ ಇದೀಗ ತಲೆಕೆಳಗಾಗಿವೆ. ಆದರೆ, ಅಮೃತಧಾರೆಯಲ್ಲಿನ ಹೊಸ ತಿರುವು ವೀಕ್ಷಕರಿಗೆ ಅಷ್ಟಾಗಿ ಇಷ್ಟವಾದಂತೆ ಇಲ್ಲ.
Amruthadhare Serial: ಅಮೃತಧಾರೆ ಸೀರಿಯಲ್ ವೀಕ್ಷಕರು ಹೇಳಿದ್ದೇನು ?
ಅಮೃತಧಾರೆ ಸೀರಿಯಲ್‌ನ ಹೊಸ ಎಪಿಸೋಡ್‌ಗಳಿಗೆ ವೀಕ್ಷಕರು ಗರಂ ಆಗಿದ್ದಾರೆ. ಸುಮ್ಮನೆ ದಾರ ಹಿಡ್ಕೊಂಡು ಎಳೆಯುತ್ತಿದ್ದಾರೆ. ಬೇಗ ಮುಗ್ಸಿ ಇದ್ರಲ್ಲಿ ಎಲ್ಲ ಸತ್ಯ ಕತೆ ಮುಗಿದಿದೆ. ಇನ್ನೂ ಈ ಧಾರಾವಾಹಿಯಲ್ಲಿ ಹೊಸ ಕಥೆ ಇಲ್ಲ. ಸುಮ್ಮನೆ ಇದೇ ತರ ಎಳೆದುಕೊಂಡು ಹೋದರೆ ಜನ ಹೆಂಗೆ ನೋಡಬೇಕು ಅಂತ ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ದೀಪಿಕಾ ಪಾತ್ರ ಬೇಕಾಗಿರಲಿಲ್ಲ ಅನ್ಸುತ್ತೆ, ಈ ಪಾತ್ರ ಚೆನ್ನಾಗಿಲ್ಲ ಅಂತಲೂ ಹೇಳುತ್ತಿದ್ದಾರೆ.
ಅಲ್ಲದೆ ಇನ್ನೂ ಕೆಲವರು ಇದು ಲಾಜಿಕ್ ಇಲ್ಲದ ಕಥೆ ತರ ಆಗ್ತಿದೆ. ಅಮೃತಧಾರೆ ಸೀರಿಯಲ್ ಚೆನ್ನಾಗಿ ಬರ್ತಿದೆ. ಈ ರೀತಿಯ ತಪ್ಪುಗಳನ್ನು ಮಾಡಬೇಡಿ ಅಂತ ಹೇಳಿದ್ದರು. ಅಮೃತಧಾರೆ ಸೀರಿಯಲ್‌ನಲ್ಲಿ ಯಾರೂ ಅಂದಾಜು ಸಹ ಮಾಡದ ತಿರುವುಗಳು ಈ ಹಿಂದೆ ಎದುರಾಗಿರುವುದು ಇದೆ. ಗೌತಮ್ ದಿವಾನ್ ತನ್ನ ಕೋಟ್ಯಾಂತರ ರೂಪಾಯಿ ಪ್ರಾಪರ್ಟಿಯನ್ನು ಬಿಟ್ಟು ಕ್ಯಾಬ್ ಚಾಲಕರಾಗಿ ಬದಲಾದಂತೆ ತೋರಿಸಿದ್ದಾಗಲೂ ಜನರಿಂದ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಮುಂದೆ ಕಥೆ ಸಾಗಿದ ರೀತಿಗೆ ಜನ ಮನಸೋತಿದ್ದರು.
Amruthadhare Serial: ದೀಪಿಕಾಗೆ ದುಂಬಲು ಬಿದ್ದ ಜೈದೇವ್!
ಇನ್ನು ಅಮೃತಧಾರೆ ಸೀರಿಯಲ್‌ನಲ್ಲಿ ಕೇಡಿ ಜೈದೇವ್ ಭೂಮಿಕಾ ತಂಗಿ ದೀಪಿಕಾಗೆ ದೊಂಬಲು ಬಿದ್ದಿದ್ದಾನೆ. ಮೊದಲು ದೀಪಿಕಾ ನನಗೆ ನಟನೆ ಎಲ್ಲ ಬರಲ್ಲ ಅಂತ ಹೇಳಿ ಜೈದೇವ್ ಹಾಗೂ ಶಕುಂತಲಾದೇವಿಯನ್ನ ವಾಪಸ್ ಕಳುಹಿಸಿದ್ದಾಳೆ. ಆದರೆ, ಜೈದೇವ್ ಬಿಡದೆ ದೀಪಿಕಾ ಹಿಂದೆ ಬಿದ್ದಿದ್ದಾನೆ.
ದೀಪಿಕಾ ಹಳ್ಳಿಯೊಂದರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿರುವಂತೆ ತೋರಿಸಲಾಗಿದೆ. ಬ್ಯಾಗ್‌ನ ತುಂಬಾ ಹಣ ತಂದಿರುವ ಜೈದೇವ್, ಇಷ್ಟೇ ಅಲ್ಲ ನಾನು ಹೇಳಿದಂಗೆ ಮಾಡಿದ್ರೆ ಇನ್ನೂ ದುಡ್ಡು ಕೊಡ್ತೀನಿ ಅಂತ ಡೀಟೆಲ್ಸ್ ಕೊಟ್ಟು ಬಂದಿದ್ದಾನೆ. ಅವಳಿ ಮಕ್ಕಳ ಕಥೆಗೆ ಮರುಗ್ತಿದ್ದಾನೆ ಸದಾಶಿವ.. ಭೂಮಿ ಹುಟ್ಟಿನ ಗುಟ್ಟು ಬೆಳಕಿಗೆ ಬರಲಿದ್ಯಾ ? ಎನ್ನುವ ಸಾಲುಗಳೊಂದಿಗೆ ಜೀ ಕನ್ನಡ ವಾಹಿನಿಯಲ್ಲಿ ಹೊಸ ಪ್ರೋಮೋ ಹಂಚಿಕೊಳ್ಳಲಾಗಿದೆ. ಹೀಗಾಗಿ, ದೀಪಿಕಾ ಮುಂದಿನ ನಡೆ ಏನಾಗಿರಲಿದೆ ಎನ್ನುವ ಕುತೂಹಲ ಮೂಡಿಸಿದೆ.