ಬೆಂಗಳೂರಲ್ಲಿ ಸಿನಿಮೀಯ ರೀತಿ ಯುವತಿ ಕಿಡ್ನಾಪ್‌ಗೆ ಯತ್ನ! ರಾಶ್ ಡ್ರೈವಿಂಗ್‌ಗೆ 6 ಮಂದಿ ಗಾಯ: Video Viral

ಬೆಂಗಳೂರಲ್ಲಿ ಸಿನಿಮೀಯ ರೀತಿ ಯುವತಿ ಕಿಡ್ನಾಪ್‌ಗೆ ಯತ್ನ! ರಾಶ್ ಡ್ರೈವಿಂಗ್‌ಗೆ 6 ಮಂದಿ ಗಾಯ: Video Viral

ಬೆಂಗಳೂರಲ್ಲಿ ಸಿನಿಮೀಯ ರೀತಿ ಯುವತಿ ಕಿಡ್ನಾಪ್‌ಗೆ ಯತ್ನ! ರಾಶ್ ಡ್ರೈವಿಂಗ್‌ಗೆ 6 ಮಂದಿ ಗಾಯ: Video Viral

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ರಾಜಸ್ಥಾನದ ಮೂಲದ ಯುವತಿಯನ್ನು ಕರೆತರಲು ಆಕೆಯ ಕುಟುಂಬಸ್ಥರು ಕಳುಹಿಸಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನು ಕಿಡ್ನಾಪ್ ಮಾಡಿ ಕರೆದೊಯ್ಯುವಾಗ ರಾಶ್ ಡ್ರೈವಿಂಗ್ ಮಾಡಿದ್ದಾರೆ. ಈ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಸಿನಿಮೀಯ ರೀತಿಯಲ್ಲಿ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ರಾಜಸ್ಥಾನದ ಮೂಲದ ಯುವತಿ 21ವರ್ಷದ ಪೂಜೆ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ 23 ವರ್ಷದ ಯುವಕನನ್ನು ಮದುವೆಯಾಗಿದ್ದಳು. ಇದು ಮನೆಯವರಿಗೆ ಗೊತ್ತಾಗಿ ಆಕೆಯನ್ನು ಕರೆ ತರುವಂತೆ ನಾಲ್ವರನ್ನು ಬೆಂಗಳೂರಿಗೆ ಕಳುಹಿಸಿದ್ದರು. ಈ ನಾಲ್ವರು ಪೂಜಾಳನ್ನು ಪತಿಯಿಂದ ಬೇರೆ ಮಾಡಿ, ಅಪಹರಿಸಿ ಕಾರಿನಲ್ಲಿ ಕರೆದೊಯ್ಯಲು ಮುಂದಾಗಿದ್ದಾಗ ಈ ಅಪಘಾತ ಘಟನೆ ಬುಧವಾರ ನಡೆದಿದೆ. ಕಾರು ಮೈಮೇಲೆ ಹರಿದಿದ್ದು, ಕೆಲವರಿಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ರಾಜಸ್ಥಾನದ ಮೇಲ್ವಾಸ್ ಗ್ರಾಮದ ನಿವಾಸಿಯಾದ ಗುಣರಾಮು ಎಂಬುವವರ ಪುತ್ರಿ ಪೂಜಾ ಓಂ ಪ್ರಕಾಶ್ (23) ನನ್ನು ಪ್ರೀತಿಸುತ್ತಿದ್ದಳು. ಸುಮಾರು 9 ತಿಂಗಳ ಹಿಂದೆ ಪ್ರಿಯಕರನನ್ನು ಪ್ರೀತಿಸಿ ಮದುವೆ ಆಗಿದ್ದಳು. ಬಳಿಕ ದಂಪತಿ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಈ ವಿಚಾರ ತಿಳಿದು ಯುವತಿ ಕುಟುಂಬ ಮಗಳನ್ನು ಕರೆ ತರುವಂತೆ ಕಳುಹಿಸಿದ್ದ ನಾಲ್ವರು ಆಕೆಯನ್ನು ಅಪಹರಿಸಲು ಮುಂದಾಗಿದ್ದರು ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜಸ್ಥಾನದಿಂದ ಬೆಂಗಳೂರಿಗೆ ಬಂದ ಆರೋಪಿಗಳು ಪೂಜಾಳನ್ನು ಆಕೆಯ ಬಾಡಿಗೆ ಮನೆಯಿಂದ 'RJ 22 CC 9691' ನೋಂದಣಿ ಸಂಖ್ಯೆಯ ಹ್ಯುಂಡೈ ವೆನ್ಯೂ ಕಾರಿನಲ್ಲಿ ಅಪಹರಿಸಿ ಕರೆದೊಯ್ಯಲು ಯತ್ನಿಸಿದ್ದರು. ಈ ವೇಳೆ ರಾಶ್ ಡ್ರೈವಿಂಗ್ ಮಾಡಿದ್ದಾರೆ. ಆಗ ರಸ್ತೆಯಲ್ಲಿ ಸಾರ್ವಜನಿಕರು, ಸವಾರರು, ಮಹಿಳೆಯರಿಗೆ ಕಾರು ಡಿಕ್ಕಿ ಹೊಡೆದಿದೆ. ಇಬ್ಬರು ಮಳೆಯರ ಮೇಲೆ ಕಾರು ಹರಿದಿದೆ. ಕಾರು ನಿಲ್ಲಿಸದಿದ್ದದಾಗ ಸಾರ್ವಜನಿಕರು ಚೇಸ್ ಮಾಡಿ ಆರೋಪಿಗಳಿಗೆ ಬುದ್ಧಿ ಕಲಿಸಿದ್ದಾರೆ. ಆರೋಪಿಗಳನ್ನು ಥಳಿಸಿದ್ದಾರೆ. ಕಾರಿನ ಗ್ಲಾಜು ಒಡೆದು ಆಕ್ರೋಶ ಹೊರ ಹಾಕಿದ್ದಾರೆ. ರಸ್ತೆ ಅಪಘಾತದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೂವರು ವಶಕ್ಕೆ, ಕಾರಿನ ಡ್ರೈವರ್ ಪರಾರಿ

ಆರೋಪಿಗಳನ್ನು ರಾಜಸ್ಥಾನ ಮೂಲದ ರಾಕೇಶ್ (31), ಕರಣ್ (25) ಮತ್ತು ಅಯಾನ್ (18) ಎಂದು ಗುರುತಿಸಲಾಗಿದೆ. ವಾಹನ ಚಲಾಯಿಸುತ್ತಿದ್ದ ಮತ್ತೊಬ್ಬ ಆರೋಪಿ ಸದ್ದಾಂ ಘಟನೆ ಬಳಿಕ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರಿಂದ ಹುಡುಕಾಟ ನಡೆದಿದ್ದು ಕಾರನ್ನು ವಶಕ್ಕೆ ಪಡೆಯಲಾಗಿದೆ.

ಇನ್ನೂ ಗಾಯಗೊಂಡವರನ್ನು ಪೃಥ್ವಿರಾಜ್ (12), ಯಶಿಕಾ (9), ಅಮೂಲ್ (35), ಮಣಿ (64), ಜಯಲಕ್ಷ್ಮಿ (57) ಮತ್ತು ಸಂತೋಷ್ (33) ಎಂದು ಗುರುತಿಸಲಾಗಿದೆ. ಜಯಲಕ್ಷ್ಮಿ ಅವರಿಗೆ ತಲೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ (ICU) ದಾಖಲಿಸಲಾಗಿದೆ.

Love marriage row turns into kidnapping and road crash injuring six

Pooja and Om Prakash, who married against their families’ wishes 8 months ago, were living in Agrahara Dasarahalli.

Pooja was allegedly kidnapped by four men sent by her family. While fleeing in a Hyundai… pic.twitter.com/VisUn311St

— Imran Khan (@KeypadGuerilla) September 16, 2026

Love marriage row turns into kidnapping and road crash injuring six

Pooja and Om Prakash, who married against their families’ wishes 8 months ago, were living in Agrahara Dasarahalli.

Pooja was allegedly kidnapped by four men sent by her family. While fleeing in a Hyundai… pic.twitter.com/VisUn311St

viral video car accident ವಿಡಿಯೋ ಯುವತಿ

viral video car accident ವಿಡಿಯೋ ಯುವತಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ