
ಏಷ್ಯಾಡ್ ಪದಕ ವಿಜೇತ ಬಾಕ್ಸರ್‌ಗಳಿಗೆ ವಿಶ್ವ ಚಾಂಪಿಯನ್‌ಷಿಪ್‌ಗೆ ನೇರಪ್ರವೇಶ
ನವದೆಹಲಿ: ಇದೇ 19ರಂದು ಆರಂಭವಾಗುವ ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತ ಭಾರತದ ಬಾಕ್ಸರ್‌ಗಳು ಮುಂದಿನ ವರ್ಷ ನಡೆಯುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಗೆ ನೇರ ವಾಗಿ ಅರ್ಹತೆ ಪಡೆಯಲಿದ್ದಾರೆ ಭಾರತ ಬಾಕ್ಸಿಂಗ್ ಫೆಡರೇಷನ್ (ಬಿಎಫ್‌ಐ) ಬುಧವಾರ ಹೇಳಿದೆ.
ಏಷ್ಯಾಡ್ ಕೂಟವು 2028ರ ಒಲಿಂಪಿಕ್ಸ್‌ಗೆ ಮೊದಲ ಕ್ವಾಲಿಫಯರ್ ಟೂರ್ನಿಯಾಗಿದೆ. ಲಾಸ್ ಏಂಜಲೀಸ್ ನಲ್ಲಿ ನಡೆಯುವ ಕೂಟಕ್ಕೆ ಗರಿಷ್ಠ ಸಂಖ್ಯೆಯ ಬಾಕ್ಸರ್‌ಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ವಿಶಾಲವಾದ ಆಯ್ಕೆ ನೀತಿಯನ್ನು ಬಿಎಫ್‌ಐ ಬಿಡುಗಡೆ ಮಾಡಿದೆ.
ವಿಶ್ವ ಬಾಕ್ಸಿಂಗ್ ಅಭಿವೃದ್ಧಿಪಡಿಸಿದ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅನುಮೋದಿಸಿದ ಅರ್ಹತಾ ಮಾನದಂಡವನ್ನು ಆಧರಿಸಿದ ನಾಲ್ಕು ಹಂತದ ಮಾರ್ಗವನ್ನು ಈ ನೀತಿಯು ರೂಪಿಸುತ್ತದೆ
ವಿಶ್ವ ಬಾಕ್ಸಿಂಗ್ ಮಾನದಂಡಗಳ ಪ್ರಕಾರ, 2027ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಮೊದಲ ಅರ್ಹತಾ ಟೂರ್ನಿಯಾಗಿದ್ದು, ನಂತರ ಚೀನಾದಲ್ಲಿ ಏಷ್ಯನ್ ಕ್ವಾಲಿಫೈಯರ್ ಮತ್ತು 2028ರಲ್ಲಿ ಎರಡು ವಿಶ್ವ ಅರ್ಹತಾ ಟೂರ್ನಿಗಳು ನಡೆಯಲಿವೆ.
ಏಷ್ಯನ್ ಗೇಮ್ಸ್ ಪದಕ ವಿಜೇತರನ್ನು ಅವರವರ ತೂಕದ ವಿಭಾಗಗಳಲ್ಲಿ ಪ್ರಮುಖ ಸ್ಪರ್ಧಿಯಾಗಿ ಆಯ್ಕೆ ಮಾಡಲಾಗುತ್ತದೆ. 10ನೇ ಎಲೀಟ್ ರಾಷ್ಟ್ರೀಯ ಚಾಂಪಿಯನ್‌ಷ್‌ಪ್‌ನ ಚಿನ್ನದ ಪದಕ ವಿಜೇತರು ಆ ತೂಕದ ವಿಭಾಗದಲ್ಲಿ ಮೀಸಲು ಸ್ಪರ್ಧಿಯಾಗಿ ಇರಲಿದ್ದಾರೆ ಎಂದು ಬಿಎಫ್‌ಐ ಹೊರಡಿಸಿದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
‘ರಾಷ್ಟ್ರೀಯ ತರಬೇತಿ ಶಿಬಿರ ಮತ್ತು ವಿಶ್ವ ಬಾಕ್ಸಿಂಗ್‌ನ ಅರ್ಹತಾ ಟೂರ್ನಿಗಳಲ್ಲಿ ನೀಡಿದ ಪ್ರದರ್ಶನವನ್ನು ಆಧರಿಸಿ, ನಮ್ಮ ಬಾಕ್ಸರ್‌ಗಳಿಗೆ 2028ರ ಒಲಿಂಪಿಕ್ಸ್‌ಗೆ ಸ್ಪಷ್ಟ ಮತ್ತು ಸಂಘಟಿತ ಮಾರ್ಗವನ್ನು ಒದಗಿಸಲು ಈ ನೀತಿಯನ್ನು ರೂಪಿಸಲಾಗಿದೆ’ ಎಂದು ಬಿಎಫ್‌ಐ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.