ಚಿಕ್ಕಮಗಳೂರು: ಕೆಪಿಟಿಸಿಎಲ್ ಸಹಕಾರ ಸಂಘದಲ್ಲಿ ₹3.34 ಕೋಟಿ ದುರುಪಯೋಗ

ಚಿಕ್ಕಮಗಳೂರು: ಕೆಪಿಟಿಸಿಎಲ್ ಸಹಕಾರ ಸಂಘದಲ್ಲಿ ₹3.34 ಕೋಟಿ ದುರುಪಯೋಗ

ಚಿಕ್ಕಮಗಳೂರು: ಕೆಪಿಟಿಸಿಎಲ್ ಸಹಕಾರ ಸಂಘದಲ್ಲಿ ₹3.34 ಕೋಟಿ ದುರುಪಯೋಗ

ಚಿಕ್ಕಮಗಳೂರು: ಕೆಪಿಟಿಸಿಎಲ್ ಮತ್ತು ಮೆಸ್ಕಾಂ ನೌಕರರ ಪತ್ತಿನ ಸಹಕಾರ ಸಂಘದಲ್ಲಿ ₹3.34 ಕೋಟಿ ಹಣ ದುರುಪಯೋಗ ಆಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಸಂಘದ ನಗದು ಗುಮಾಸ್ತನ ವಿರುದ್ಧ ನ್ಯಾಯಾಲಯದಲ್ಲಿ ಸಂಘ ಖಾಸಗಿ ದೂರು (ಪಿಸಿಆರ್‌) ದಾಖಲಿಸಿದೆ.

1972ರಲ್ಲಿ ನೋಂದಣಿಯಾಗಿರುವ ಸಂಘಕ್ಕೆ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಧ್ಯಕ್ಷರಾಗಿದ್ದರೆ, ಲೆಕ್ಕಾಧಿಕಾರಿ ಎನ್.ರಾಘವೇಂದ್ರ ಕಾರ್ಯದರ್ಶಿಯಾಗಿದ್ದಾರೆ. ಸಂಘದ ನಗದು ಗುಮಾಸ್ತ ಆರ್‌. ಅರುಣ್‌ಕುಮಾರ್ ವಿರುದ್ಧ ಪಿಸಿಆರ್‌ ದಾಖಲಿಸಿದ್ದಾರೆ.

ಪಿಸಿಆರ್ ಆಧರಿಸಿ ಬಸವನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸಹಕಾರ ಇಲಾಖೆಲೆಕ್ಕಪರಿಶೋಧಕರು ಮತ್ತು ಜಿಲ್ಲಾ ಸಹಕಾರ ಬ್ಯಾಂಕಿನ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಪ್ರಮುಖ ಆರೋಪಿ ಅರುಣ್‌ಕುಮಾರ್ ನಾಪತ್ತೆಯಾಗಿದ್ದು, ಜುಲೈ 29ರಂದು ಪ್ರಕರಣ ದಾಖಲಾಗಿದ್ದರೂ ಆರೋಪಿಯ ಬಂಧನವಾಗಿಲ್ಲ.

ಸಂಘದ ಸದಸ್ಯರಿಗೆ ಅಲ್ಪಾವಧಿ ಸಾಲವಾಗಿ ₹50 ಸಾವಿರ ಮತ್ತು ದೀರ್ಘಾವಧಿ ಸಾಲ ₹3 ಲಕ್ಷ ತನಕ ನೀಡಲಾಗುತ್ತಿದೆ. ಸಂಘದ ದಿನನಿತ್ಯದ ವ್ಯವಹಾರ ನೋಡಿಕೊಳ್ಳಲು, ಲೆಕ್ಕಪತ್ರ ನಿರ್ವಹಿಸಲು, ಸಾಲದ ಅರ್ಜಿಗಳನ್ನು ಪರಿಶೀಲಿಸಲು ಹಾಗೂ ಸಾಲದ ಕಂತು ಮತ್ತು ಮರುಪಾವತಿ ಮೊತ್ತ ಸಂಗ್ರಹಿಸಿ ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ಗೆ ಜಮಾ ಮಾಡಲು ಆರ್‌. ಅರುಣ್‌ಕುಮಾರ್ ಅವರನ್ನು ನೇಮಿಸಲಾಗಿತ್ತು.

ಸಾಲ ಬಯಸಿ ಅರ್ಜಿ ಸಲ್ಲಿಸುವ ಸದಸ್ಯರ ಅರ್ಜಿಗಳನ್ನು ಪರಿಶೀಲಿಸಿ ಸಂಘ ಸಾಲ ನೀಡುತ್ತದೆ. ಸಾಲದ ಬಯಸದ ಸದಸ್ಯರ ಹೆಸರುಗಳನ್ನು ಸಾಲ ಬಯಸಿದವರ ಪಟ್ಟಿಗೆ ಸೇರಿ ಅಲ್ಪಾವಧಿ ಸಾಲ ಪಡೆಯಲಾಗಿದೆ. ಆ ಮೊತ್ತವನ್ನು ನಗದು ಗುಮಾಸ್ತ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ಅರುಣ್‌ಕುಮಾರ್ ಮೇಲಿರುವ ದೂರು.

2020ರಿಂದ 2025ರ ಅವಧಿಯಲ್ಲಿ ಒಟ್ಟಾರೆ ₹3.34 ಕೋಟಿ ಹಣ ದುರುಪಯೋಗವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೂಡಲೇ ಆರೋಪಿಯನ್ನು ಪತ್ತೆ ಹಚ್ಚಿ ಸಂಘದ ಹಣ ದುರುಪಯೋಗ ಮಾಡಿಕೊಂಡಿರುವ ಅರುಣಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವಂಚನೆ ಬೆಳಕಿಗೆ ಬಂದಿದ್ದು ಹೇಗೆ?

ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನೀಡುವ ವಾರ್ಷಿಕ ವರದಿಯ ಪುಸ್ತಕದಲ್ಲಿ ಎಲ್ಲಾ ವಿವರ ದಾಖಲಿಸಲಾಗುತ್ತದೆ. ಸಂಘದಲ್ಲಿ ಸಾಲ ಪಡೆದವರ ಹೆಸರು, ಮೊತ್ತ ಎಲ್ಲವನ್ನೂ ನಮೂದಿಸಲಾಗುತ್ತದೆ.

ಅದನ್ನು ಗಮನಿಸಿದ ಸದಸ್ಯ ಬಸವರಾಜ್ ಬಿ.ಸಿ., ‘ನಾನು ಸಾಲವನ್ನೇ ಪಡೆದಿಲ್ಲ. ಸಾಲಗಾರರ ಪಟ್ಟಿಯಲ್ಲಿ ನನ್ನ ಹೆಸರಿದೆ ಏಕೆ’ ಎಂದು ಪ್ರಶ್ನಿಸಿದ್ದರು. ನಂತರ ಪದಾಧಿಕಾರಿಗಳು ಪರಿಶೀಲಿಸಿದ್ದು, ಹಣ ದುರುಪಯೋಗ ಆಗಿರುವುದು ಗೊತ್ತಾಗಿದೆ. ಬಳಿಕ ಹೆಚ್ಚಿನ ಪರಿಶೀಲನೆ ನಡೆಸಿದಾಗ ಒಟ್ಟಾರೆ ₹3.34 ಕೋಟಿ ದುರುಪಯೋಗ ಆಗಿರುವುದು ಗೊತ್ತಾಯಿತು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸಹಕಾರ ಸಂಘದ ಹಣ ₹.3.34 ಕೋಟಿ ದುರುಪಯೋಗ ಆಗಿರುವುದು ಸದಸ್ಯರಲ್ಲಿ ಆತಂಕ ಮೂಡಿಸಿದೆ.

ಸಂಘದ ಸದಸ್ಯತ್ವ ವಾಪಸ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ 500ಕ್ಕೂ ಹೆಚ್ಚಿದ್ದ ಸದಸ್ಯರ ಸಂಖ್ಯೆ ಈಗ 260ಕ್ಕೆ ಇಳಿಕೆಯಾಗಿದೆ. ಹಣ ದುರುಪಯೋಗ ಆಗಿರುವುದರಿಂದ ತಮ್ಮ ಹಣ ವಾಪಸ್ ಬರುವುದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ.

ನಗದು ಗುಮಾಸ್ತ ಅರುಣಕುಮಾರ್ ನಂಬಿಕೆ ದ್ರೋಹ ಮಾಡಿದ್ದಾನೆ. ಹಣ ದುರುಪಯೋಗದ ಬಗ್ಗೆ ಗೊತ್ತಾದ ಬಳಿಕ ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಲಾಗಿದೆ.

ಎನ್.ರಾಘವೇಂದ್ರ, ಸಂಘದ ಕಾರ್ಯದರ್ಶಿ

260922-126-1543819829

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ