
ಶಿಡ್ಲಘಟ್ಟ ಲೋಕ ಅದಾಲತ್‌ನಲ್ಲಿ 301 ಪ್ರಕರಣಗಳು ಇತ್ಯರ್ಥ
ಶಿಡ್ಲಘಟ್ಟ: ನಗರದ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿಗೆ ಕೌಟುಂಬಿಕ ಜೀವನದ ಮಹತ್ವದ ಕುರಿತು ಮನವರಿಕೆ ಮಾಡಿಕೊಟ್ಟು, ಇಬ್ಬರನ್ನೂ ಮತ್ತೆ ಒಂದಾಗಿಸಲಾಯಿತು.
ನ್ಯಾಯಾಲಯದ ಮಾರ್ಗದರ್ಶನ ಹಾಗೂ ಸಂಧಾನದ ಬಳಿಕ ದಂಪತಿ ಪರಸ್ಪರ ಒಪ್ಪಿಗೆಯಿಂದ ಪ್ರಕರಣ ಇತ್ಯರ್ಥಪಡಿಸಿಕೊಂಡು, ಮತ್ತೆ ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದರು.
ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಒಟ್ಟು 301 ಪ್ರಕರಣಗಳು ಇತ್ಯರ್ಥಗೊಂಡವು. ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಮಹಮ್ಮದ್ ರೋಷನ್ ಷಾ, ನ್ಯಾಯಾಧೀಶರಾದ ಸುಕನ್ಯಾ ಸಿ.ಎಸ್., ಭಾವನಾ, ವಕೀಲರಾದ ಮೊನಿಕಾ, ಶ್ರೀಕಾಂತ್ ಮತ್ತು ಟಿ.ಎನ್.ನವೀನ್ ಕುಮಾರ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಹಾಜರಿದ್ದರು.