ಸೆ.26 ರಿಂದ ರಾಜ್ಯ ಯುವಜನ ಸಮ್ಮೇಳನ: DYFIನಿಂದ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಸೆ.26 ರಿಂದ ರಾಜ್ಯ ಯುವಜನ ಸಮ್ಮೇಳನ: DYFIನಿಂದ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಸೆ.26 ರಿಂದ ರಾಜ್ಯ ಯುವಜನ ಸಮ್ಮೇಳನ: DYFIನಿಂದ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಬಾಗೇಪಲ್ಲಿ: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ) ವತಿಯಿಂದ ಸೆ.26 ರಿಂದ 28ರವರೆಗೆ ಬಾಗೇಪಲ್ಲಿ ಪಟ್ಟಣದಲ್ಲಿ ನಡೆಯುವ ರಾಜ್ಯಮಟ್ಟದ 13ನೇ ಯುವಜನ ಸಮ್ಮೇಳನದ ಪೋಸ್ಟರ್ ಅನ್ನು ಬುಧವಾರ ಪಟ್ಟಣದಲ್ಲಿ ಬಿಡುಗಡೆಗೊಳಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಡಿವೈಎಫ್‍ಐ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರಾಜಶೇಖರ್, ‘ಸಮ್ಮೇಳನದ ಅಂಗವಾಗಿ ಚೇಳೂರಿನಲ್ಲಿ ಯುವಜನರಿಗೆ ಕ್ರಿಕೆಟ್ ಪಂದ್ಯಾವಳಿ, ಚಿಕ್ಕಬಳ್ಳಾಪುರದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಗೌರಿಬಿದನೂರಿನ ವಿದುರಾಶ್ವತ್ಥದಲ್ಲಿ ಕಲಾ ಜಾಥಾ ಪ್ರಾರಂಭವಾಗಿದ್ದು, ಚಿಕ್ಕಬಳ್ಳಾಫುರ, ಶಿಡ್ಲಘಟ್ಟ, ಚಿಂತಾಮಣಿ, ಚೇಳೂರು, ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳಲ್ಲಿ ಸಂಚರಿಸಿ ಬೀದಿನಾಟಕ, ಕ್ರಾಂತಿಕಾರಿ ಗೀತೆಗಳೊಂದಿಗೆ ಸಮ್ಮೇಳನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಸೆ.26 ರಂದು ತಾಲ್ಲೂಕು ಪಂಚಾಯಿತಿ ಪಕ್ಕದಲ್ಲಿ ಸಮ್ಮೇಳನದ ಬಹಿರಂಗ ಸಭೆ ನಡೆಯಲಿದೆ. ಸಭೆಗೂ ಮುನ್ನ ಪಟ್ಟಣದ ಚಿತ್ರಾವತಿ ಮೇಲ್ಸೇತುವೆಯಿಂದ ರ್‍ಯಾಲಿ ಪ್ರಾರಂಭವಾಗಿ ಡಿವಿಜಿ ಮುಖ್ಯರಸ್ತೆಯ ಗುಳೂರು ವೃತ್ತದಲ್ಲಿ ಕೊನೆಯಾಗುತ್ತದೆ. ಇದರಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ನಟ ಪ್ರಕಾಶ್‍ ರಾಜ್, ಕಿಶೋರ್, ರಾಜ್ಯ ಸಭಾ ಸದಸ್ಯ ರಹೀಮ್ ಮುಖ್ಯ ಅತಿಥಿಗಳಾಗಿ  ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಡಿವೈಎಫ್‍ಐ ಜಿಲ್ಲಾ ಸಮಿತಿ ಕಾರ್ಯದರ್ಶಿ ವೈ.ಎನ್.ಹರೀಶ್, ಡಿವೈಎಫ್‍ಐ ಜಿಲ್ಲಾ ಸಮಿತಿ ಖಜಾಂಚಿ ಸುರೇಶ್ (ಮದಕರಿ), ಉಪಾಧ್ಯಕ್ಷ ಇಮ್ರಾನ್, ರೈಜುಲ್, ಕೆ.ಎಸ್.ವೇಣು, ನರಸಿಂಹಮೂರ್ತಿ, ಹಜಮತ್, ರಾಮಾಂಜಿ, ಬಿ.ಎಚ್.ರಫೀಕ್ ಮತ್ತಿತರರು ಹಾಜರಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ