2026ರ ಸೆ.26: ಟೌನ್‌ಶಿಪ್ ಹೋರಾಟ, KPSC ಅಕ್ರಮ, SIR ಸೇರಿ 10 ಪ್ರಮುಖ ಸುದ್ದಿಗಳು

2026ರ ಸೆ.26: ಟೌನ್‌ಶಿಪ್ ಹೋರಾಟ, KPSC ಅಕ್ರಮ, SIR ಸೇರಿ 10 ಪ್ರಮುಖ ಸುದ್ದಿಗಳು

2026ರ ಸೆ.26: ಟೌನ್‌ಶಿಪ್ ಹೋರಾಟ, KPSC ಅಕ್ರಮ, SIR ಸೇರಿ 10 ಪ್ರಮುಖ ಸುದ್ದಿಗಳು

ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಬಿಡದಿ ಟೌನ್‌ಶಿಪ್ ವಿರೋಧಿಸಿ ಧರಣಿ: 70 ರೈತರು ವಶಕ್ಕೆ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಐಟಿಟಿ) ಯೋಜನೆ ವಿರೋಧಿಸಿ ರೈತರು ಬೈರಮಂಗಲ ವೃತ್ತದಲ್ಲಿ ಬಿಡದಿ– ಹಾರೋಹಳ್ಳಿ ಮುಖ್ಯರಸ್ತೆ ತಡೆದು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮತ್ತು ಉಪವಾಸ ಸತ್ಯಾಗ್ರಹ ಶುಕ್ರವಾರ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಧರಣಿನಿರತ 70 ಮಂದಿಯನ್ನು ಪೊಲೀಸರು ಏಕಾಏಕಿ ವಶಕ್ಕೆ ಪಡೆದರು. ರಸ್ತೆಯಲ್ಲಿ ರೈತರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ತೆರವುಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಿದರು. ಈ ಸಂದರ್ಭದಲ್ಲಿ ನಡೆದ ತಳ್ಳಾಟದಲ್ಲಿ ರೈತ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿದರು.

ಭಾರತದ ದಾಳಿ ವೇಳೆ ಸಕಾಲದಲ್ಲಿ ಮಧ್ಯಪ್ರವೇಶಿಸಿದ ಟ್ರಂಪ್‌ಗೆ ಧನ್ಯವಾದ: ಪಾಕ್ ಪಿಎಂ

ಪಾಕಿಸ್ತಾನವು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ವೇದಿಕೆಯಲ್ಲಿ ಮತ್ತೊಮ್ಮೆ ಕಾಶ್ಮೀರ ವಿವಾದ ಹಾಗೂ 2025ರ ಸೇನಾ ಸಂಘರ್ಷದ ವಿಚಾರ ಪ್ರಸ್ತಾಪಿಸಿದೆ.

ಅಧಿವೇಶನದಲ್ಲಿ ಪಾಲ್ಗೊಂಡು ಶುಕ್ರವಾರ ಮಾತನಾಡಿರುವ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌, ಭಾರತದೊಂದಿಗೆ 2025ರ ಮೇ ತಿಂಗಳಲ್ಲಿ ನಡೆದ ಸೇನಾ ಸಂಘರ್ಷದ ವೇಳೆ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಧನ್ಯವಾದ ಹೇಳಿದ್ದಾರೆ.

ಬಬಲೇಶ್ವರ: ಮುಸ್ಲಿಂ ಮತಕ್ಕೆ ‘ಕನ್ನ’?

ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಪ್ರತಿನಿಧಿಸುವ ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ, ಮತದಾರರ ಪಟ್ಟಿಯಿಂದ ಮತದಾರರನ್ನು ತೆಗೆದುಹಾಕುವಂತೆ ಏಳು ಮಂದಿ ಅಕ್ರಮವಾಗಿ 1,564 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಪೈಕಿ 1,500ಕ್ಕೂ ಹೆಚ್ಚು ಅರ್ಜಿಗಳು ಮುಸ್ಲಿಂ ಮತದಾರರ ವಿರುದ್ಧವೇ ಸಲ್ಲಿಕೆಯಾಗಿವೆ.

ಕೆಪಿಎಸ್‌ಸಿ ಹುದ್ದೆಗಳ ನೇಮಕಾತಿ ಅಕ್ರಮ: ಘ್ಯಾನೇಂದ್ರ ಕುಮಾರ್‌ ಜಾಮೀನು ಅರ್ಜಿ ವಜಾ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನಡೆಸಿದ್ದ ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಐಎಎಸ್‌ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.

ಜಾಗತಿಕ ಮಾರುಕಟ್ಟೆಗೆ ಕಲಬುರಗಿ ‘ತೊಗರಿಬೇಳೆ’: ಮಾಲ್ಡೀವ್ಸ್‌ಗೆ ರವಾನೆ

ರಾಜ್ಯದ ‘ತೊಗರಿ ಬಟ್ಟಲು’ ಖ್ಯಾತಿಯ ಕಲಬುರಗಿ ಜಿಲ್ಲೆಯ ಜಿಐ ಟ್ಯಾಗ್‌ ಮಾನ್ಯತೆ ಪಡೆದಿರುವ ತೊಗರಿ ಬೇಳೆಯು ಇದೀಗ ದೇಶದ ಗಡಿದಾಟಿ ಜಾಗತಿಕ ಮಾರುಕಟ್ಟೆ ಪ್ರವೇಶಿಸಿದೆ. 

ಕೇಂದ್ರ ಸರ್ಕಾರದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (APEDA) ಸೆಪ್ಟೆಂಬರ್ 24ರಂದು ಕರ್ನಾಟಕದಿಂದ ಒಂದು ಟನ್‌ ತೊಗರಿ ಬೇಳೆಯನ್ನು ಮಾಲ್ಡೀವ್ಸ್‌ ರಾಷ್ಟ್ರಕ್ಕೆ ರವಾನಿಸಿದೆ.

ಸಂಪಾದಕೀಯ | ಹಣಕಾಸು ವಿವೇಕಕ್ಕೆ ಇದು ಸಕಾಲ: ಆರ್ಥಿಕ ನೀಲನಕ್ಷೆ ಸರ್ಕಾರಕ್ಕೆ ಅಗತ್ಯ

ಸರ್ಕಾರ ಹೊಸ ಯೋಜನೆಗಳನ್ನು ಘೋಷಿಸುವ ಮೊದಲು ಆರ್ಥಿಕ ಸಂಪನ್ಮೂಲಗಳ ಲಭ್ಯತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಆರ್ಥಿಕ ಇಲಾಖೆಯು ಸಲಹೆ ನೀಡಿದೆ. ಯೋಜನೆಗಳು ‘ವಾಸ್ತವಿಕ’ ಆಗಿರಬೇಕು ಎನ್ನುವ ಇಲಾಖೆಯ ಕಿವಿಮಾತನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಏಷ್ಯನ್ ಗೇಮ್ಸ್ ಮ್ಯಾರಥಾನ್‌ನಲ್ಲಿ ಭಾರತಕ್ಕೆ ಪದಕ: 44 ವರ್ಷಗಳ ಕಾಯುವಿಕೆಗೆ ತೆರೆ

ಭಾರತದ ಯುವ ಆಟಗಾರ ಸಾವನ್‌ ಬರ್ವಾಲ್‌ ಅವರು ಏಷ್ಯನ್ ಗೇಮ್ಸ್‌ನ ಪುರುಷರ ಮ್ಯಾರಥಾನ್ ಫೈನಲ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್ ಕ್ರೀಡಾಕೂಟದಲ್ಲಿ 44 ವರ್ಷಗಳ ಬಳಿಕ ಭಾರತ ಮ್ಯಾರಥಾನ್‌ ಪದಕ ಗೆದ್ದ ಸಾಧನೆ ಮಾಡಿದೆ.

ವಾರದ ವಿಶೇಷ: ಸಂಘರ್ಷದ ಕಾಲದಲ್ಲಿ ಶಾಂತಿಯ ಧ್ಯಾನ, ಗುಟೆರಸ್‌ ವಿದಾಯ ಭಾಷಣ

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಅವರು ಇದೇ 22ರಂದು ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣ ಜಗತ್ತಿನ ಗಮನ ಸೆಳೆದಿದೆ. 2017ರ ಜನವರಿ 1ರಂದು ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಅವರ ಅಧಿಕಾರಾವಧಿ ಡಿಸೆಂಬರ್‌ 31ರಂದು ಮುಕ್ತಾಯಗೊಳ್ಳಲಿದೆ. ಹಾಗಾಗಿ, ವಿಶ್ವಸಂಸ್ಥೆಯಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳನ್ನು ಉದ್ದೇಶಿಸಿ ಅವರು ಮಾಡಿದ ಕೊನೆಯ ಭಾಷಣ ಇದು.

ರಿತು ಕಪೂರ್‌ ವಿಶ್ಲೇಷಣೆ: ಭಿನ್ನಮತದ ಪ್ರಖರ ಬೇಸಿಗೆ

ಭಾರತವು ತನ್ನ ಸ್ವಾತಂತ್ರ್ಯದ 80ನೇ ವರ್ಷ ಪ್ರವೇಶಿಸಿದ ಈ ಆಗಸ್ಟ್‌ನ ಸಂದರ್ಭದಲ್ಲಿ ‘ಮಾಧ್ಯಮ ಸ್ವಾತಂತ್ರ್ಯ’ ಎಂಬ ಚಿಂತನೆ ನನ್ನನ್ನು ಕಾಡತೊಡಗಿತು. ಏಕೆಂದರೆ, ಈಗ ‘ಮಾಧ್ಯಮ’ ಎಂದರೆ ನಿಜವಾಗಿಯೂ ಯಾರು? ಮಾನ್ಯತೆ ಪಡೆದ ಪತ್ರಕರ್ತರೇ? ಪೊಲೀಸ್‌ ದೌರ್ಜನ್ಯವನ್ನು ನೇರ ಪ್ರಸಾರ ಮಾಡುವ ವ್ಯಕ್ತಿಯೇ? ಶಿಕ್ಷಣದ ಹಕ್ಕು ಬೇಕು ಎಂದು ಮೊಬೈಲ್‌ ಫೋನ್‌ ಮೂಲಕ ಒತ್ತಾಯ ಹೇರುತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯೇ? ಮಾಧ್ಯಮ ಸ್ವಾತಂತ್ರ್ಯ ಮತ್ತು ಪೌರರಿಗೆ ಇರುವ ಸ್ವಾತಂತ್ರ್ಯವು ಈಗ ಒಂದರೊಳಗೊಂದು ಹೆಣೆದುಕೊಳ್ಳಲಾರಂಭಿಸಿವೆ.

ಷರತ್ತುಗಳನ್ನು ಪೂರೈಸಿದರೆ 7 ದಿನಗಳಲ್ಲಿ ಹೊರ್ಮುಜ್‌ ತೆರೆಯುತ್ತೇವೆ: ಇರಾನ್‌ 

‘ಪಶ್ಚಿಮ ಏಷ್ಯಾ ಸಂಘರ್ಷವನ್ನು ಕೊನೆಗೊಳಿಸಿ, ಹೊರ್ಮುಜ್‌ ಜಲಸಂಧಿಯನ್ನು 7 ದಿನಗಳಲ್ಲಿ ತೆರೆಯುವ ಹೊಸ ಪ್ರಸ್ತಾವವನ್ನು ಇರಾನ್‌, ಅಮೆರಿಕದ ಮುಂದಿಟ್ಟಿದೆ’ ಎಂದು ಮೂಲಗಳು ಹೇಳಿವೆ. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ