
ಈ ದಿನದ ಪ್ರಮುಖ 10 ಸುದ್ದಿಗಳು: ಭಾನುವಾರ, 06 ಸೆಪ್ಟೆಂಬರ್ 2026
ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ಜನರ ಮನೆಬಾಗಿಲಿಗೆ ಸರ್ಕಾರ: ‘ಪ್ರಜಾಸೇವೆ’ ಅಭಿಯಾನ ಆರಂಭ
ಜನರ ಕಷ್ಟ ಕೇಳಿ, ಸಮಸ್ಯೆ ಬಗೆಹರಿಸಲು ಆರಂಭಿಸಿದ ಪ್ರಜಾಸೇವೆ ಇಲಾಖೆಯ ಮುಖ್ಯ ಧ್ಯೇಯವೇ ಜನರ ಮನೆಬಾಗಿಲಿಗೆ ಸರ್ಕಾರವನ್ನು ಕೊಂಡೊಯ್ಯುವುದು. ಇನ್ನು ಮುಂದೆ ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿಗೆ ಎರಡು ಬಾರಿ ಅವರ ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಕಷ್ಟ ಆಲಿಸುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಜೈಲಿನಲ್ಲಿರುವಾಗ ಆಹಾರಕ್ಕೆ ವಿಷ ಬೆರೆಸಿರುವ ಅನುಮಾನ ಇದೆ: ಸಂಜಯ್ ರಾವುತ್ ಆರೋಪ
ಜೈಲಿನಲ್ಲಿದ್ದಾಗಲೇ ನನಗೆ ಕ್ಯಾನ್ಸರ್ ಬಂದಿತ್ತು ಎಂಬ ಅನುಮಾನವಿದೆ. ಅಲ್ಲಿ ನೀಡಲಾಗಿದ್ದ ಆಹಾರದಲ್ಲಿ ವಿಷ ಬೆರೆಸಲಾಗಿದೆಯೇ ಎಂದು ಪತ್ತೆಹಚ್ಚಲು 'ಟಾಕ್ಸಿಸಿಟಿ' (ವಿಷಕಾರಿ ಅಂಶ ಪತ್ತೆ) ಪರೀಕ್ಷೆಗೆ ಒಳಗಾಗುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದರು ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಶನಿವಾರ ಹೇಳಿದ್ದಾರೆ.
ದೇಶದ ಈ ಭಾಗಗಳಲ್ಲಿ ಭಾರಿ ಮಳೆ: ವಿವಿಧ ರಾಜ್ಯಗಳಿಗೆ ಹೈ ಅಲರ್ಟ್ ಘೋಷಣೆ
ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಈಶಾನ್ಯ ಹಾಗೂ ಉತ್ತರ ಭಾರತದ ಹಲವು ಭಾಗಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಅಂಡಮಾನ್-ನಿಕೋಬಾರ್ ದ್ವೀಪ: ನೂತನ ಲೆ. ಗವರ್ನರ್ ಆಗಿ ದಿನೇಶ್ ಶರ್ಮಾ ನೇಮಕ
ಬಿಜೆಪಿ ರಾಜ್ಯಸಭಾ ಸಂಸದ ದಿನೇಶ್ ಶರ್ಮಾ ಅವರನ್ನು ಅಂಡಮಾನ್- ನಿಕೋಬಾರ್ ದ್ವೀಪದ ನೂತನ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಆಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನ ಶನಿವಾರ ತಿಳಿಸಿದೆ.
ಜೆಎಂಎಂ ಹಿರಿಯ ನಾಯಕ, ಸಚಿವ ಸುದಿವ್ಯ ಕುಮಾರ್ ಸೋನು ನಿಧನ
ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಹಿರಿಯ ನಾಯಕ,ರಾಜ್ಯದ ಉನ್ನತ ಶಿಕ್ಷಣ ಹಾಗೂ ನಗರಾಭಿವೃದ್ಧಿ ಸಚಿವ ಸುದಿವ್ಯ ಕುಮಾರ್ ಸೋನು ಭಾನುವಾರ ನಿಧನರಾಗಿದ್ದಾರೆ.
ಶಿಕ್ಷಕರಿಗೆ ಇನ್ನು ‘Tr’ ಗೌರವ
ಎಲ್ಲ ಶಿಕ್ಷಕರು ಇನ್ನು ಮುಂದೆ ತಮ್ಮ ಹೆಸರಿಗಿಂತ ಮೊದಲು ಟಿಆರ್ (‘Tr’– Teacher) ಎಂಬ ಪದವನ್ನು ಬಳಸಲು ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Census: ಈ ನಾಲ್ಕು ರಾಜ್ಯಗಳಲ್ಲಿ ಡಿಸೆಂಬರ್ 1ರಿಂದಲೇ ಜನಗಣತಿ
ಗೋವಾ, ಉತ್ತರ ಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡದಲ್ಲಿ (ಹಿಮಪಾತ ಆಗುವ ಪ್ರದೇಶಗಳನ್ನು ಹೊರತುಪಡಿಸಿ) 2026ರ ಡಿಸೆಂಬರ್ 1ರಿಂದ 2027ರ ಜನವರಿ 4ರವರೆಗೆ ಜನಗಣತಿ ನಡೆಯಲಿದೆ ಎಂದು ಶನಿವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸಿನಿ ಸಿಪ್: ಡಾ. ರಾಜ್‌ಕುಮಾರ್ ಸಂಖ್ಯಾಸಮೃದ್ಧಿಯ ಸಿರಿತೇರು
ಕಳೆದ ‘ಸಿನಿ ಸಿಪ್’ನಲ್ಲಿ ನಾವು ಧೂಮಲೀಲೆಯ ಘಟನೆಗಳನ್ನು ತೆರೆದು ನೋಡಿದೆವು. ಈ ಸಲ ಸಿನಿಮಾ ಸಂಖ್ಯಾಸಮೃದ್ಧಿಯ ಅಧ್ಯಾಯದತ್ತ ಹೊರಳೋಣ.
ದೇಶದ 8 ಹೈಕೋರ್ಟ್‌ಗಳಿಗೆ ನೂತನ ಮುಖ್ಯ ನ್ಯಾಯಮೂರ್ತಿಗಳ ನೇಮಕ
ದೇಶದ ವಿವಿಧ 8 ಹೈಕೋರ್ಟ್‌ಗಳಿಗೆ ನೂತನ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಲಾಗಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಒಳನೋಟ: ಸೋಜಿಗದ ಉಪ್ಪಿನ ಆಗರ
ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಬಹುಭಾಗದ ಜನರ ಊಟದ ಎಲೆಯಲ್ಲಿ ಕೆಂಬಣ್ಣದ ಹರಳು ಕಾಣಸಿಗುತ್ತದೆ. ಹೀಗೆ ಕಾಣಸಿಗುವುದು ಪರಿಶುದ್ಧ ಉಪ್ಪು. ಯಂತ್ರಗಳ ಒತ್ತಡಕ್ಕೆ ಸಿಲುಕಿ ಪುಡಿಯಾಗದ, ರಾಸಾಯನಿಕ ಅಂಶಗಳನ್ನು ಅಂಟಿಸಿಕೊಳ್ಳದ ಅಪ್ಪಟ ನೈಸರ್ಗಿಕ ಉಪ್ಪು.