Yash Toxic: ಟಾಕ್ಸಿಕ್ ರೋಮ್ಯಾನ್ಸ್‌ ಸೀನ್‌ಗೆ ಯಶ್ ಉತ್ತರ; ರೂಲ್ಸ್‌ ಬ್ರೇಕ್ ಮಾಡಿದೆ ಎಂದ ನಟಿ ನಯನತಾರಾ

Yash Toxic: ಟಾಕ್ಸಿಕ್ ರೋಮ್ಯಾನ್ಸ್‌ ಸೀನ್‌ಗೆ ಯಶ್ ಉತ್ತರ; ರೂಲ್ಸ್‌ ಬ್ರೇಕ್ ಮಾಡಿದೆ ಎಂದ ನಟಿ ನಯನತಾರಾ

Yash Toxic: ಟಾಕ್ಸಿಕ್ ರೋಮ್ಯಾನ್ಸ್‌ ಸೀನ್‌ಗೆ ಯಶ್ ಉತ್ತರ; ರೂಲ್ಸ್‌ ಬ್ರೇಕ್ ಮಾಡಿದೆ ಎಂದ ನಟಿ ನಯನತಾರಾ

Yash Toxic: ಕನ್ನಡಿಗರು ಹಾಗೂ ಭಾರತೀಯ ಸಿನಿಮಾ ಪ್ರಿಯರು ಹೆಚ್ಚು ಕಾತುರದಿಂದ ಕಾಯುತ್ತಿರುವ ಟಾಕ್ಸಿಕ್ (Toxic) ಟ್ರೇಲರ್ ಲಾಂಚ್ ಆಗಿದೆ. ನಟ ಯಶ್ ಅವರು ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾಗಾಗಿ ನಟ ಯಶ್ ಅವರು ವರ್ಷಗಳ ಕಾಲ ಕಷ್ಟಪಟ್ಟಿದ್ದಾರೆ. ಶನಿವಾರ ಸಂಜೆ ಈ ಟ್ರೇಲರ್ ಬಿಡುಗಡೆಯಾಗಿದ್ದು, ನಟ ಯಶ್, ಶಿವರಾಜ್ ಕುಮಾರ್ ಹಾಗೂ ನಟಿ ನಯನತಾರಾ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಟ ಯಶ್‌ ಅವರು ಸಹ ಕನ್ನಡಿಗರಿಗೆ ವಿಶೇಷ ಸಂದೇಶ ನೀಡಿದ್ದಾರೆ. ಅದರ ಸಂಪೂರ್ಣ ಮಾಹಿತಿ ಲೇಖನದಲ್ಲಿದೆ.

"ಟಾಕ್ಸಿಕ್" ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ಆದರೆ ಇದೇ ಕಾರಣಕ್ಕಾಗಿ ಪ್ರಾರಂಭದಲ್ಲಿ "ಟಾಕ್ಸಿಕ್" ಸಿನಿಮಾದಲ್ಲಿ ನಟಿಸುವುದಕ್ಕೆ ನಿರಾಕರಿಸಿದ್ದಾಗಿ ಲೇಡಿ ಸೂಪರ್‌ ಸ್ಟಾರ್ ಅಂತಲೇ ಖ್ಯಾತಿ ಗಳಿಸಿರುವ ನಟಿ ನಯನತಾರಾ ಅವರು ಹೇಳಿದ್ದಾರೆ. ರಾಕಿಸ್ಟಾರ್ ನಟ ಯಶ್ ನಟಿಸಿರುವ, ಗೀತು ಮೋಹನ್‌ದಾಸ್ ನಿರ್ದೇಶಿಸಿರುವ ಹಾಗೂ ಕೆವಿಎನ್ ಪ್ರೊಡೆಕ್ಷನ್ಸ್‌ ನಿರ್ಮಾಣದ ಟಾಕ್ಸಿಕ್ ಸಿನಿಮಾದಲ್ಲಿ ನಟಿ ನಯನತಾರಾ ಅವರು ಗಂಗಾ ಆಗಿ ಅಭಿನಯಿಸಿದ್ದಾರೆ. ಹಾಟ್ & ಗ್ಲಾಮರಸ್‌ ಲುಕ್‌ನಲ್ಲಿ ನಯನತಾರಾ ಅವರು ಮಿಂಚಿದ್ದಾರೆ. ಟಾಕ್ಸಿಕ್ ಸಿನಿಮಾ ಹಾಗೂ ನಟ ಯಶ್ ಅವರ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.

ಯಶ್ ಅವರಿಗಾಗಿ ನಾನು ರೂಲ್ಸ್‌ ಬ್ರೇಕ್ ಮಾಡಿದೆ ಎಂದೂ ನಯನತಾರಾ ಅವರು ಹೇಳಿಕೊಂಡಿದ್ದಾರೆ. ನಟಿ ನಯನತಾರಾ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಹಾಗೂ ವೇದಿಕೆಗಳಲ್ಲಿ ಮಾತನಾಡುವುದು ತೀರ ಅಪರೂಪ. ಇನ್ನು ನಟಿ ನಯನತಾರ ಅವರು ಇತ್ತೀಚಿನ ದಿನಗಳಲ್ಲಿ ಯಾರನ್ನಾದರು ಮೆಚ್ಚಿಕೊಂಡು ಅಥವಾ ಹೊಗಳುವುದು ಸಹ ಅಪರೂಪವೇ. ಆದರೆ ಟಾಕ್ಸಿಕ್ ಸಿನಿಮಾದ ಟ್ರೇಲರ್‌ನಲ್ಲಿ ನಯನತಾರಾ ಅವರು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಟಾಕ್ಸಿಕ್ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿರುವ ನಟಿ ನಯನತಾರಾ ಅವರು, ಟಾಕ್ಸಿಕ್ ಚಿತ್ರದಲ್ಲಿ ಯಶ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಮಾತನಾಡಿದ್ದಾರೆ. ನಟ ಯಶ್ ಅವರ 'ಬಿಗ್‌ಸ್ಟಾರ್' ವ್ಯಕ್ತಿತ್ವ ಸಿನಿಮಾದಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ಅಳವಡಿಸಿಕೊಂಡಿದ್ದಾರೆ ಎಂದು ನಯನತಾರಾ ಅವರು ಹೇಳಿದ್ದಾರೆ. ಅಲ್ಲದೆ ನಯನತಾರಾ ಅವರು ಪ್ರೀತಿಯಿಂದ ಯಶ್ ಅವರನ್ನು "ರಾಕಿ ಭಾಯ್" ಎಂದು ಕರೆದಿದ್ದಾರೆ.

ಟ್ರೇಲರ್‌ನಲ್ಲಿ ನೀವು ಅವರನ್ನು ನೋಡುವ ರೀತಿಯೇ ಇದೆ, ಅಲ್ಲವೇ? ಅವರು ನಿಜವಾಗಿಯೂ ಹಾಗೆ ಇದ್ದಾರೆ. ಯಶ್‌ಗಿಂತ ಹೆಚ್ಚು ಶ್ರಮಶೀಲ ನಟನನ್ನು ನಾನು ಎಂದಿಗೂ ನೋಡಿಲ್ಲ. ಸೆಟ್‌ನಲ್ಲಿ ಪ್ರತಿ ದಿನವೂ, ಅವರು ಕೆಲಸ ಮಾಡುವ ರೀತಿಯನ್ನು ನೋಡಿ ನನಗೆ ಆಶ್ಚರ್ಯವಾಗುತ್ತದೆ ಅಂತಲೂ ಅವರು ಹೇಳಿದ್ದಾರೆ. ಯಶ್ ಅವರು ಈ ಸಿನಿಮಾಗಾಗಿ ತಮ್ಮ ಜೀವನದ 4.5 ವರ್ಷಗಳನ್ನು ನೀಡಿದ್ದಾರೆ. ತಮ್ಮ ಜೀವನವನ್ನು, ತಮ್ಮ ಕುಟುಂಬಕ್ಕೆ ಕೊಡಬೇಕಾಗಿದ್ದ ಸಮಯವನ್ನು, ತಮ್ಮ ಮಕ್ಕಳೊಂದಿಗೆ ಕಳೆಯಬೇಕಾಗಿದ್ದ ಸಮಯ ಹಾಗೂ ವೈಯಕ್ತಿಕ ಜೀವನ, ಅವರು ಆನಂದಿಸುವ ಎಲ್ಲವನ್ನೂ ಅವರು ಟಾಕ್ಸಿಕ್‌ಗೋಸ್ಕರ ತ್ಯಾಗ ಮಾಡಿದ್ದಾರೆ ಅಂತ ನಟಿ ನಯನತಾರಾ ಅವರು ಹೇಳಿದ್ದಾರೆ.

ಯಶ್ ಕೆಲಸದ ಮೇಲೆ ಮಾತ್ರ ಗಮನ ಕೊಡುತ್ತಾರೆ. ಪ್ರತಿಯೊಬ್ಬ ನಟ ಮತ್ತು ಸಿಬ್ಬಂದಿ ಚಿತ್ರಕ್ಕೆ ತಮ್ಮ ಅತ್ಯುತ್ತಮವಾದದ್ದನ್ನು ನೀಡುವ ಬಗ್ಗೆ ಕಾಳಜಿ ವಹಿಸುತ್ತಾರೆ. ಯಾವ ನಟ ಅಥವಾ ನಿರ್ಮಾಪಕರು ಸಹ ಈ ರೀತಿ ಮಾಡುವುದನ್ನು ನಾನು ನೋಡಿಯೇ ಇಲ್ಲ ಎಂದೂ ಹೇಳಿದ್ದಾರೆ.

Yash Toxic: ನಟ ಯಶ್ ಟಾಕ್ಸಿಕ್ ಸಿನಿಮಾದ ಬಗ್ಗೆ ಹೇಳಿದ್ದೇನು ?

ಇನ್ನು ನಟ ಯಶ್ ಅವರು ಸಹ ಈ ಸಿನಿಮಾದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಸಿನಿಮಾದಲ್ಲಿನ ರೋಮ್ಯಾನ್ಸ್‌ ಸೀನ್‌ಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲರಿಗೂ ನಮಸ್ಕಾರ, ಕರ್ನಾಟಕಕ್ಕೆ ಸ್ವಾಗತ ಸುಸ್ವಾಗತ ಎಂದು ಎಲ್ಲರನ್ನು ನಟ ಯಶ್ ಅವರು ಸ್ವಾಗತಿಸಿದರು. ಇಂದು ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂದರೆ ಇದಕ್ಕೆ ಮುಖ್ಯ ಕಾರಣ ಕರ್ನಾಟಕದ ಜನತೆ. ಕರ್ನಾಟಕದ ಜನರು ನನಗೆ ಕೊಟ್ಟಿರುವ ಶಕ್ತಿ ಹಾಗೂ ಜವಾಬ್ದಾರಿ ಅವರು ಕೊಟ್ಟಿರುವ ಗೆಲವು, ಪ್ರತಿ ಗೆಲುವು ಸಿಕ್ಕಾಗಲೂ ನನ್ನ ತಲೆಯಲ್ಲಿದ್ದದ್ದು ಒಂದೇ ವಿಚಾರ. ಅದು ನನ್ನ ಸಾಧನೆ ಅಲ್ಲ ಹೋಗಿ ಅಲ್ಲಿ ಕೆಲಸ ಮಾಡು ಅಂತ ಜನ ಕೊಡುತ್ತಿದ್ದ ಜವಾಬ್ದಾರಿ ಅಂತ ನಾನು ನಂಬಿದ್ದೇನೆ. ಅದೇ ರೀತಿ ನಾನು ಪ್ರತಿ ಸಿನಿಮಾದಲ್ಲೂ ಕೆಲಸ ಮಾಡುತ್ತಾ ಈಗ ಮುಂದಿನ ಹೆಜ್ಜೆ ಇರಿಸುತ್ತಿದ್ದೇನೆ. ಆ ಹೆಜ್ಜೆಯನ್ನೂ ಎಲ್ಲ ಗೌರವಿಸಿದ್ದೀರಿ. ಟಾಕ್ಸಿಕ್ ನೀವು ಕೊಟ್ಟ ಹಳೇ ಗೆಲುವಿನ ಪ್ರತಿಕಾವಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಇರಿಸಿದ್ದೀವಿ. ಯಶ್‌ ಮೇಲೆ ನಂಬಿಕೆ ಇರಲಿ.

ದಾರಿ ಯಾವುದಾದರೂ ಆಗಬಹುದು, ಗುರಿ ಮುಟ್ಟಬೇಕು. ಆ ದಾರಿಗಳಲ್ಲಿ ಕೆಲವು ಹೋರಾಟಗಳು ಇರುತ್ತವೆ. ಹೋರಾಡಿಕೊಂಡು ಮುಟ್ಟಬೇಕು. ಕೆಲವೊಮ್ಮೆ ಕಾಲಕ್ಕೆ ತಕ್ಕಂತೆ ನಡೆಯಬೇಕು. ತಾಳಕ್ಕೆ ತಕ್ಕಂತೆ ಕುಣಿಯಬೇಕು ಅಂತ ನಟ ಯಶ್ ಅವರು ಹೇಳಿದ್ದಾರೆ. ಇವತ್ತಿನ ಮನಸ್ಸುಗಳು, ಇವತ್ತಿನ ಯುವ ಪೀಳಿಗೆಯ ಗೊಂದಲಗಳೇನಿದೆ. ಆ ಎಲ್ಲಗೊಂದಲಗಳ ಪ್ರತಿನಿಧ್ಯ ಇದರಲ್ಲಿ ಇರಲಿದೆ. ತುಂಬಾ ಅದ್ಭುತವಾದ ಸಿನಿಮಾ ಇದಾಗಿರಲಿದೆ. ಕನ್ನಡಿಗರು ಹೆಮ್ಮೆಯಿಂದ ಹೇಳಬಹುದು, ಕನ್ನಡಿಗರು ಯಾವೊತ್ತು ತಲೆ ತಗ್ಗಿಸುವುದಕ್ಕೆ ಬಿಡಲ್ಲ. ತಲೆ ಎತ್ತಿ ನೋಡುವಂತೆ ಇರುತ್ತದೆ. ಹೆಮ್ಮೆಯಿಂದ ಈ ಸಿನಿಮಾ ನೋಡಿ ಅಂತಲೂ ನಟ ಯಶ್ ಅವರು ಹೇಳಿದ್ದಾರೆ.

Yash Toxic: ಟಾಕ್ಸಿಕ್ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ?

ಇನ್ನು ಟಾಕ್ಸಿಕ್ ಸಿನಿಮಾ ಆಗಸ್ಟ್‌ 26ಕ್ಕೆ ಬಿಡುಗಡೆ ಆಗಲಿದೆ. ಟಾಕ್ಸಿಕ್ ಚಿತ್ರದಲ್ಲಿ ಐವರು ನಟಿಯರು ಇದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದಾರೆ. ಇವರೊಂದಿಗೆ ದೊಡ್ಡ ತಾರಾ ಬಳಗವೇ ಈ ಸಿನಿಮಾದಲ್ಲಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ