
Namma Metro: ಆಗಸ್ಟ್ 9ರಂದು ಬೆಂಗಳೂರು ಮೆಟ್ರೋ ಸೇವೆಯಲ್ಲಿ ಬದಲಾವಣೆ, 2 ನಿಲ್ದಾಣಗಳ ಮಧ್ಯೆ ವ್ಯತ್ಯಯ
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದನ್ನು BMRCL ನೀಡಿದೆ. ಕಾಮಗಾರಿ, ತಾಂತ್ರಿಕ ದೋಷ ಹಾಗೂ ಹೊಸ ರೈಲಗಳ ಸೇರ್ಪಡೆಯಿಂದ ಇತ್ತೀಚೆಗೆ ಕೆಲವು ಬಾರಿ ರೈಲು ಸಂಚಾರ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದೀಗ ಆಗಸ್ಟ್ 9ರಂದು ಭಾನುವಾರ ಪ್ರಮುಖ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.
2026ರ ಆಗಸ್ಟ್ 9ರಂದು ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವೆ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತಗೊಳಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ನಮ್ಮ ಮೆಟ್ರೋದ ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ರೈಲು ಸೇವೆಯನ್ನು ಆಗಸ್ಟ್ 9ನೇ ರಂದು ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಸುಮಾರು ಎರಡು ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ಈ ಅವಧಿಯಲ್ಲಿ ಮೆಟ್ರೋ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ಮೆಟ್ರೋ ರೈಲು ಸೇವೆಗಳು ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲಿವೆ, ಅವುಗಳ ಮಾಹಿತಿ ಇಲ್ಲಿದೆ.
ಈ ಮಾರ್ಗಗಳಲ್ಲಿ ಮೆಟ್ರೋ ಸೇವೆ ಲಭ್ಯ
ಉದ್ದೇಶಿತ ಬಂದ್ ಮಾಗ ಬಿಟ್ಟು ಚಲ್ಲಘಟ್ಟದಿಂದ ಎಂ.ಜಿ. ರಸ್ತೆ, ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ (ಕಾಡುಗೋಡಿ)ವರೆಗೆ ಸಂಚಾರ ಇರಲಿದೆ. ಇನ್ನೂ ಹಸರಿ ಮಾರ್ಗದ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್, ಹಳದಿ ಮಾರ್ಗವಾದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ಲೈನ್, ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ ಮಾರ್ಗವನ್ನು ಒಳಗೊಂಡಂತೆ ಸಂಪೂರ್ಣ ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಪುನರಾರಂಭಗೊಳ್ಳಲಿವೆ ಎಂದು BMRCL ಪ್ರಕಟಣೆ ತಿಳಿಸಿದೆ.
ಇಂದು ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಪರಿಷ್ಕರಣೆ
ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಹಾಲಿ ಮೆಟ್ರೋ ರೈಲುಗಳ ಸಂಖ್ಯೆ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಚೀನಾ ನಿರ್ಮಿತ ಮೂರು ಹೊಸ ರೈಲುಗಳು ಬೆಂಗಳೂರಿಗೆ ಈಗಾಗಲೇ ಆಗಮಿಸಿವೆ. ಅವುಗಳಿಂದ ಅಧಿಕೃತ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ಮುನ್ನ ತಪಾಸಣೆ, ಪ್ರಾಯೋಗಿಕ ಸಂಚಾರ ನಡೆಸಬೇಕಾಗುತ್ತದೆ.
ಮೆಟ್ರೋ ಆಯುಕ್ತರು, ಅಧಿಕಾರಿಗಳು ಹೊಸ ರೈಲುಗಳ ತಪಾಸಣೆ ಕಾರ್ಯವನ್ನು ಯಶವಂತಪುರ ಮತ್ತು ಮಾದಾವರವರೆಗಿನ ಹಸಿರು ಮಾರ್ಗದಲ್ಲಿ ಇಂದು ಆ.7ರಂದು ರಾತ್ರಿ 10.30ರಿಂದ ನಡೆಸಲಿದೆ. ಈ ವೇಳೆ ಮೆಟ್ರೋ ರೈಲುಗಳು 10ನಿಮಿಷಕ್ಕೆ ಬದಲಾಗಿ 20ನಿಮಿಷಕ್ಕೆ ಒಂದರಂತೆ ಸಂಚಾರ ಮಾಡಲಿವೆ. ಸೇವೆಯ ಅಡಚಣೆಗೆ ಸಹಕರಿಸುವಂತೆ ಬಿಎಂಆರ್‍ಸಿಎಲ್ ಪ್ರಯಾಣಿಕರಲ್ಲಿ ಕೋರಿದೆ.