Namma Metro: ತಮಿಳುನಾಡು ಗಡಿವರೆಗೆ 'ಬೆಂಗಳೂರು ಮೆಟ್ರೋ': 10.5 ಕಿಮೀ ಲೈನ್‌ಗೆ ಸರ್ಕಾರ ಗ್ರೀನ್ ಸಿಗ್ನಲ್

Namma Metro: ತಮಿಳುನಾಡು ಗಡಿವರೆಗೆ 'ಬೆಂಗಳೂರು ಮೆಟ್ರೋ': 10.5 ಕಿಮೀ ಲೈನ್‌ಗೆ ಸರ್ಕಾರ ಗ್ರೀನ್ ಸಿಗ್ನಲ್

Namma Metro: ತಮಿಳುನಾಡು ಗಡಿವರೆಗೆ 'ಬೆಂಗಳೂರು ಮೆಟ್ರೋ': 10.5 ಕಿಮೀ ಲೈನ್‌ಗೆ ಸರ್ಕಾರ ಗ್ರೀನ್ ಸಿಗ್ನಲ್

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ತಮಿಳುನಾಡುವರೆಗೆ ಮೆಟ್ರೋ ಜಾಲ ವಿಸ್ತರಣೆಗೆ ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರ ಮೆಟ್ರೋ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಇದಕ್ಕು ಮುನ್ನ ಈಗಾಗಲೇ ವಿಳಂಬವಾಗಿರುವ ಹೊಸ ಗುಲಾಬಿ ಮಾರ್ಗ, ನೀಲಿ ಮಾರ್ಗಗಳ ಕಾರ್ಯಾಚರಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೆಲವು ಪ್ರಯಾಣಿಕರು ಆಗ್ರಹಿಸಿದ್ದಾರೆ. ಬೆಂಗಳೂರು-ತಮಿಳುನಾಡುವರೆಗೆ ಎಷ್ಟು ಉದ್ದದ ಮೆಟ್ರೋ ನಿರ್ಮಾಣವಾಗಲಿದೆ, ನಿಲ್ದಾಣಗಳೆಷ್ಟು? ಏನಿದು ಹೊಸ ಬೆಳವಣಿಗೆ?

ಈ ಹಿಂದೆಯು ತಮಿಳುನಾಡು ಅಧಿಕಾರಿಗಳು ಬೆಂಗಳೂರಿಗೆ ಭೇಟಿ ನೀಡಿ ಹೊಸೂರುವರೆಗೆ (ಸುಮಾರು 23 ಕಿಮೀ) ಮೆಟ್ರೋ ನಿರ್ಮಿಸುವ ಕಾರ್ಯಸಾಧ್ಯತಾ ವರದಿ ಸಲ್ಲಿಸಿದ್ದರು. ಮೊದಲು ಆಸಕ್ತಿ ತೋರಿದ್ದ ತಮಿಳುನಾಡು ಕೆಲವು ತಾಂತ್ರಿಕ ಕಾರಣಗಳಿಂದ ಹಿಂದೆ ಸರಿಯಿತು. ಆದರೆ ಕರ್ನಾಟಕ ಸರ್ಕಾರ ತಮಿಳುನಾಡುವರೆಗೆ ಅಂದರೆ ಕರ್ನಾಟಕದ ಗಡಿವರೆಗೆ ಹಳದ ಮೆಟ್ರೋ (ಆರ್.ವಿ.ರಸ್ತೆ-ಬೊಮ್ಮಸಂದ್ರ) ಮಾರ್ಗವನ್ನು ವಿಸ್ತರಣೆ ಮಾಡಲು ಮುಂದಾಗಿದೆ ಎಂದು ಡಿಎಚ್ ವರದಿ ಮಾಡಿದೆ.

ಪ್ಲ್ಯಾನ್‌ನಲ್ಲಿದೆ 10 ಕಿಮೀ ಲೈನ್, 9 ನಿಲ್ದಾಣಗಳು

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಕಾರ್ಯಸಾಧ್ಯತಾ ವರದಿ ಸಿದ್ದಪಡಿಸಿದ್ದಾರೆ. ಹಾಲಿ ಮೆಟ್ರೋ ನಿಲ್ದಾಣ ಬೊಮ್ಮಸಂದ್ರದಿಂದ ಒಟ್ಟು 10.5 ಕಿಲೋ ಮೀಟರ್ ವರೆಗೆ (ಅತ್ತಿಬೆಲೆ) ಎತ್ತರಿಸಿದ ಮೆಟ್ರೋ (ಕಾರಿಡಾರ್) ಮಾರ್ಗ ನಿರ್ಮಾಣಗೊಳ್ಳಲಿದೆ. ಬಹುಕೋಟಿ ವೆಚ್ಚದಲ್ಲಿ ತಲೆ ಎತ್ತಿರುವ ಈ ಉದ್ದೇಶಿತ ಮಾರ್ಗದಲ್ಲಿ ಒಟ್ಟು 09 ನಿಲ್ದಾಣಗಳು ಬರಲಿವೆ. ಬೆಂಗಳೂರಿನಿಂದ ಹೊಸೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಬಲ ಬದಿಗೆ ಮೆಟ್ರೋ ಲೈನ್ ನಿರ್ಮಾಣಗೊಳ್ಳಲಿದೆ.

ರಾಜ್ಯ ಸರ್ಕಾರ ಅತ್ತಿಬೆಲೆವರೆಗಿನ ಮೆಟ್ರೋ ಪ್ರಸ್ತಾವಕ್ಕೆ ಒಪ್ಪಿಗೆ ನೀಡುತ್ತಿದ್ದಂತೆ ಯೋಜನೆಗೆ ವೇಗ ಸಿಕ್ಕಿದೆ. ನಮ್ಮ ಮೆಟ್ರೋ ಅಧಿಕಾರಿಗಳು ಶೀಘ್ರವೇ ವಿಸೃತ ಯೋಜನಾ ವರದಿ (DPR) ತಯಾರಿಸಲು ಟೆಂಡರ್ ಆಹ್ವಾನಿಸಲಿದ್ದಾರೆ.

ಹೊಸ 9 ನಿಲ್ದಾಣಗಳು ಯಾವುವು?

ಸದ್ಯ ಹಳದಿ ಮಾರ್ಗ ಆರ್.ವಿ.ರಸ್ತೆಯಿಂದ 19 ಕೀಮಿ ಸಾಗಿ ಬೊಮ್ಮಸಂದ್ರ ನಿಲ್ದಾಣಕ್ಕೆ ಅಂತ್ಯವಾಗುತ್ತಿದೆ. ಅಲ್ಲಿಂದ ಮುಂದೆ "ನಾರಾಯಣ ಹೃದ್ರೋಗ ಸಂಸ್ಥೆ, ಚಂದಾಪುರ ವೃತ್ತ, ಹಳೆ ಚಂದಾಪುರ, ತಿರುಮಗೊಂಡನಹಳ್ಳಿ, ಬಾಲಗಾರನಹಳ್ಳಿ, ಯಾದವನಹಳ್ಳಿ, ಅತ್ತಿಬೆಲೆ ಕೈಗಾರಿಕೆ ಪ್ರದೇಶ,
ಅತ್ತಿಬೆಲೆ ಮತ್ತು ಅತ್ತಿಬೆಲೆ ಟರ್ಮಿನಲ್' ವರೆಗೆ ಒಟ್ಟು ಒಂಭತ್ತು ನಿಲ್ದಾಣಗಳು ತಲೆ ಎತ್ತಲಿವೆ. ಇದರಿಂದ ರಾಜ್ಯದ ಗಡಿವರೆಗೆ ಸಂಚಾರ ಮಾಡುವ ಕನ್ನಡಿಗರಿಗೆ, ಅನೇಕಲ್ ಭಾಗಕ್ಕೆ ತೆರಳುವವರಿಗೆ ಸಾಕಷ್ಟು ಪ್ರಯೋಜನವಾಗಲಿದೆ.

ತಮಿಳುನಾಡು ಸರ್ಕಾರ ಹಿಂದೆ ಸರಿದಿದ್ದೇಕೆ?

ಈ ಹಿಂದೆ ತಮಿಳುನಾಡು ಸರ್ಕಾರ ಬೆಂಗಳೂರು ಜೊತೆ ಸೇರಿ ಮೆಟ್ರೋ ನಿರ್ಮಿಸಲು ಮುಂದಾಗಿತ್ತು. ಆದರೆ ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ BMRCL 750 ವೋಲ್ಟ್ ವಿದ್ಯುತ್ ಬಳಸುತ್ತದೆ, ಆದರೆ ತಮಿಳುನಾಡು 25ಕೆವಿ ವಿದ್ಯುತ್ ಬಳಸುತ್ತದೆ. ಬೆಂಗಳೂರು ಮೆಟ್ರೋ ಗೆ ಆರು ಬೋಗಿಗಳು ಇದ್ದರೆ, ತಮಿಳುನಾಡು ಮೂರು ಬೋಗಿಗಳನ್ನು ಪ್ರಸ್ತಾಪಿಸಿತ್ತು. ಅಲ್ಲದೇ ಎರಡು ರಾಜ್ಯಗಳ ಗಡಿಯಲ್ಲಿ ಭೂಮಿಸ್ವಾಧೀನ ಕುರಿತು ಗೊಂದಲಗಳು ಇದ್ದವು. ಇದು ಸೇರಿದಂತೆ ಒಂದಷ್ಟು ಮಹತ್ವದ ಕಾರಣಗಳಿಂದ ತಮಿಳುನಾಡು ಯೋಜನೆಯಿಂದ ಹಿಂದೆ ಸರಿಯಿತು. ಕರ್ನಾಟಕ ಸರ್ಕಾರ ರಾಜ್ಯದ ಕೊನೆಯ ಪ್ರದೇಶವರೆಗೂ ಮೆಟ್ರೋ ನಿರ್ಮಿಸಲು ನಿರ್ಧರಿಸಿದೆ. ಅದೇ ರೀತಿ ತಮಿಳುನಾಡು ತನ್ನ ಗಡಿಯವರೆಗೆ ಮೆಟ್ರೋ ನಿರ್ಮಿಸಿದರೆ ಎರಡು ರಾಜ್ಯಗಳು ತಮ್ಮ ತಮ್ಮ ಗಡಿಯವರೆಗೆ ಪ್ರತ್ಯೇಕವಾಗಿ ಮೆಟ್ರೋ ನಿರ್ಮಿಸಿದಂತಾಗುತ್ತದೆ.

namma metro tamil nadu bmrcl ನಮ್ಮ ಮೆಟ್ರೋ metro station

namma metro tamil nadu bmrcl ನಮ್ಮ ಮೆಟ್ರೋ metro station

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ