Librarians' Day | ಕನಿಷ್ಠ ವೇತನಕ್ಕೆ ತತ್ವಾರ: ದುಸ್ತರವಾದ ಗ್ರಂಥಪಾಲಕರ ಬದುಕು

Librarians' Day | ಕನಿಷ್ಠ ವೇತನಕ್ಕೆ ತತ್ವಾರ: ದುಸ್ತರವಾದ ಗ್ರಂಥಪಾಲಕರ ಬದುಕು

Librarians' Day | ಕನಿಷ್ಠ ವೇತನಕ್ಕೆ ತತ್ವಾರ: ದುಸ್ತರವಾದ ಗ್ರಂಥಪಾಲಕರ ಬದುಕು

ಹೊನ್ನಾವರ: ‘ಗ್ರಂಥಪಾಲಕರ ದಿನಾಚರಣೆಗೆ ಪ್ರತಿವರ್ಷದಂತೆ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ನಮ್ಮಲ್ಲಿ ಎಂದಿನ ಸಡಗರ ಉಳಿದಿಲ್ಲ. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನವೂ ನಮಗೆ ಸಿಗುತ್ತಿಲ್ಲ. ಕುಟುಂಬ ನಿರ್ವಹಣೆ ತೀರ ದುಸ್ತರವಾಗಿದೆ’

ಹೀಗೆಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯದ ಮೇಲ್ವಿಚಾರಕರು ತಮ್ಮ ಅಳಲು ತೋಡಿಕೊಂಡರು.

ಅಕ್ಷರ ಬೆಳಕು ಹಾಗೂ ಸಾಕ್ಷರತಾ ಆಂದೋಲನದ ಭಾಗವಾಗಿ ದಶಕಗಳ ಹಿಂದೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೈದಳೆದ ಗ್ರಂಥಾಲಯ ಈಗ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವಾಗಿ ಬದಲಾಗಿದ್ದು ಹಳ್ಳಿಗರ ಜ್ಞಾನದ ಹರಹು ವಿಸ್ತರಿಸಲು ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ. ಹಲವು ಗ್ರಂಥಾಲಯಗಳು ಡಿಜಿಟಲೀಕರಣಗೊಂಡು ಆಧುನಿಕತೆಗೆ ತೆರೆದುಕೊಂಡಿವೆ.

ಹೊನ್ನಾವರ ತಾಲ್ಲೂಕಿನಲ್ಲೊಂದರಲ್ಲೇ 26 ಗ್ರಂಥಾಲಯಗಳಿದ್ದು ಸಾವಿರಾರು ಓದುಗರು ಇದರ ಪ್ರಯೋಜನ ಪಡೆದಿದ್ದಾರೆ. ಆದರೆ, 30 ವರ್ಷಗಳಿಗೂ ಅಧಿಕ ಕಾಲ ಕಾರ್ಯ ನಿರ್ವಹಿಸಿರುವ ಗ್ರಂಥಪಾಲಕರ ಜೀವನದಲ್ಲಿ ಮಾತ್ರ ಬೆಳಕು ಮೂಡಿಲ್ಲ.

‘ಸರ್ಕಾರ ₹23 ಸಾವಿರ ಕನಿಷ್ಠ ಕೂಲಿ ನಿಗದಿಪಡಿಸಿದ್ದರೂ ನಮಗೆ ಕೇವಲ ₹12 ಸಾವಿರ ಮಾತ್ರ ಪಾವತಿಸಲಾಗುತ್ತಿದೆ. ಜೊತೆಗೆ ಗ್ರಾಚ್ಯುಟಿ, ನಿವೃತ್ತಿ ವೇತನ ಯಾವ ಸೌಲಭ್ಯವೂ ಇಲ್ಲ. ಹಲವರು ಈಗಾಗಲೇ ನಿವೃತ್ತಿಯಾಗಿ ಬರಿಗೈಲಿ ಮನೆಗೆ ತೆರಳಿದ್ದು ಅವರ ಬದುಕು ಇನ್ನಷ್ಟು ಕಷ್ಟಕರವಾಗಿದೆ’ ಎಂದು ಗ್ರಂಥಾಲಯಗಳ ಮೇಲ್ವಿಚಾರಕರ ಸಂಘದ ರಾಜ್ಯ ಸದಸ್ಯ ನಾಗರಾಜ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

‘ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಬಾಕಿ ವೇತನ ಪಾವತಿಸಲು ಗ್ರಂಥಾಲಯಕ್ಕೆ ಜನರಿಂದ ಪಡೆಯುವ ತೆರಿಗೆ ಹಣ ಬಳಸಲಾಗುವುದು. ಆದರೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹವಾದ ತೆರಿಗೆ ಹಣ ಇದಕ್ಕೆ ಸಾಲುತ್ತಿಲ್ಲವಾದ್ದರಿಂದ ರಾಜ್ಯಮಟ್ಟದಲ್ಲಿ ಒಟ್ಟಾರೆಯಾಗಿ ಸಂಗ್ರಹವಾಗುವ ಹಣವನ್ನು ಎಲ್ಲ ಜಿಲ್ಲೆಗಳಿಗೆ ವಿತರಿಸುವ ಪ್ರಕ್ರಿಯೆ ನಡೆದಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಶ್ ಶಶಿ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-20-1815947125

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ