Kubera Yoga: ಸೂರ್ಯ ಗುರು ಸಂಯೋಗದಿಂದ ಈ ರಾಶಿಯವರಿಗೆ ಕುಬೇರ ಯೋಗ: 6 ರಾಶಿಗೆ ಹೆಚ್ಚುವುದು ಸಿರಿ ಸಂಪತ್ತು, ಸುಖ ಸಮೃದ್ಧಿ!

Kubera Yoga: ಸೂರ್ಯ ಗುರು ಸಂಯೋಗದಿಂದ ಈ ರಾಶಿಯವರಿಗೆ ಕುಬೇರ ಯೋಗ: 6 ರಾಶಿಗೆ ಹೆಚ್ಚುವುದು ಸಿರಿ ಸಂಪತ್ತು, ಸುಖ ಸಮೃದ್ಧಿ!

Kubera Yoga: ಸೂರ್ಯ ಗುರು ಸಂಯೋಗದಿಂದ ಈ ರಾಶಿಯವರಿಗೆ ಕುಬೇರ ಯೋಗ: 6 ರಾಶಿಗೆ ಹೆಚ್ಚುವುದು ಸಿರಿ ಸಂಪತ್ತು, ಸುಖ ಸಮೃದ್ಧಿ!

Kubera Yoga: ಗುರು ಗ್ರಹವನ್ನು ಜ್ಞಾನ, ಉತ್ತಮ ಫಲಿತಾಂಶಗಳು ಮತ್ತು ಅಭಿವೃದ್ಧಿಗೆ ಕಾರಣನಾಗುವವನು ಎಂದು ಹೇಳಲಾಗ್ತದೆ. ಗ್ರಹಗಳ ರಾಜ ಸೂರ್ಯ ಹೆಸರು, ಪ್ರತಿಷ್ಠೆ ಮತ್ತು ಆತ್ಮವಿಶ್ವಾಸದ ಸಂಕೇತ. ಈ ಎರಡು ಗ್ರಹಗಳ ಸಂಯೋಗವು ಉದ್ಯೋಗ, ವ್ಯವಹಾರ ಮತ್ತು ಆರ್ಥಿಕ ಸ್ಥಿತಿಗಳಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗಬಹುದು.

ಪೂರ್ವಾಷಾಢ ನಕ್ಷತ್ರದ ಪ್ರಭಾವದಿಂದ ಚಂದ್ರನು ಧನು ರಾಶಿಯಲ್ಲಿ ಸಂಚಾರ ಮಾಡಿ, ವರಿಷ್ಠ ಯೋಗವನ್ನು ರೂಪಿಸಿದ್ದಾನೆ. ಅದೇ ದಿನ, ವಿಷ್ಕಂಬ ಯೋಗ ಮತ್ತು ಪ್ರೀತಿ ಯೋಗವೂ ರೂಪುಗೊಂಡಿತ್ತು. ಅಲ್ಲದೆ, ಸೂರ್ಯ, ಗುರು ಮತ್ತು ಮಂಗಳನ ವಿಶೇಷ ಸ್ಥಾನಗಳಿಂದಾಗಿ ತ್ರಿ-ಏಕಾದಶ ಯೋಗ ಕೂಡಾ ನಿರ್ಮಾಣವಾಗಿದೆ. ಈ ಪ್ರಬಲ ಯೋಗಗಳ ಪ್ರಭಾವದಿಂದಾಗಿ, ಕೆಲವು ರಾಶಿಯವರು ಉದ್ಯೋಗ, ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸುತ್ತಾರೆ. ಆರ್ಥಿಕ ಲಾಭವಾಗಿ ಸಮಾಜದಲ್ಲಿ ಗೌರವ ಹೆಚ್ಚಾಗುವುದು.

ಮೇಷ ರಾಶಿ (Aries): ಈ ರಾಶಿಯವರಿಗೆ ಇದು ಅದೃಷ್ಟದ ಕಾಲ. ಹಣದ ಸಮಸ್ಯೆಗೆ ಪರಿಹಾರ ಸಿಗುವುದು. ಕೆಲಸದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ, ಬೆಂಬಲ ಸಿಗುವುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಕುಟುಂಬದಲ್ಲಿ ಒಳ್ಳೆಯ ಸುದ್ದಿ ಕೇಳಿಬರುವುದು. ಮನೆಯಲ್ಲಿ ಸಂತೋಷದ ವಾತಾವರಣ ನೆಲೆಯಾಗುವುದು.

ವೃಷಭ ರಾಶಿ (Taurus): ಹಿಂದೆ ಮಾಡಿದ ಹೂಡಿಕೆಗಳಿಂದ ಉತ್ತಮ ಲಾಭವಾಗುವ ಸಾಧ್ಯತೆಯಿದೆ. ಭೂಮಿ ಅಥವಾ ಆಸ್ತಿಯಲ್ಲಿ ಹೂಡಿಕೆ ಮಾಡುವಾಗ ಜಾಗರೂಕರಾಗಿರಬೇಕು. ಆರೋಗ್ಯದ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಉತ್ತಮ.

ಮಿಥುನ ರಾಶಿ (Gemini): ಸೂರ್ಯ-ಗುರು ಸಂಯೋಗ ಮತ್ತು ಭದ್ರ ರಾಜಯೋಗದ ಪ್ರಭಾವದಿಂದಾಗಿ, ಈ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಹಣಕಾಸಿಗೆ ಸಂಬಂಧಪಟ್ಟ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಹಿಂದಿನ ನಷ್ಟಗಳು ಲಾಭವಾಗಿ ಬದಲಾಗುವ ಸಮಯ ಇದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು.

ಕರ್ಕಾಟಕ ರಾಶಿ (Cancer): ಉದ್ಯೋಗ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಸಮಯ ಅನುಕೂಲಕರವಾಗಿರುವುದು. ಮೇಲಧಿಕಾರಿಗಳು ನಿಮ್ಮ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವರು. ನಿರುದ್ಯೋಗಿಗಳು ಮತ್ತು ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಅವಕಾಶಗಳು ಸಿಗುವುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು.

ಕನ್ಯಾ ರಾಶಿ (Virgo): ಗ್ರಹಗಳ ಅನುಕೂಲಕರ ಚಲನೆಯಿಂದಾಗಿ ಈ ಸಮಯವು ನಿಮಗೆ ವಿಶೇಷವಾಗಿರುವುದು. ಪಾಲುದಾರಿಕೆಯ ವ್ಯವಹಾರದಲ್ಲಿ ಲಾಭವಾಗುವುದು. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಅನುಕೂಲಕರ ಸಮಯ. ಕುಟುಂಬ ಸದಸ್ಯರ ಬೆಂಬಲದೊಂದಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.

ಸಿಂಹ ರಾಶಿ (Leo): ಸೂರ್ಯ ಮತ್ತು ಗುರುವಿನ ಸಂಯೋಗ ಇದೇ ರಾಶಿಯಲ್ಲಿ ಆಗುವುದರಿಂದ ಇದು ತುಂಬಾ ಅದೃಷ್ಟದ ಸಮಯ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವುದು. ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಹೊಸ ಯೋಜನೆಗಳು ಮತ್ತು ಹೂಡಿಕೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ.

ತುಲಾ ರಾಶಿ (Libra): ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭ ಗಳಿಸುವುದಕ್ಕೆ ಉತ್ತಮ ಅವಕಾಶಗಳು ಸಿಗುತ್ತವೆ. ಕಷ್ಟದ ಸಮಯ ಬದಿಗೆ ಸರಿಯುವ ಕಾಲ. ಮಾನಸಿಕ ಶಾಂತಿ ಹೆಚ್ಚುವುದು. ಕುಟುಂಬ ವ್ಯವಹಾರಗಳಿಗೆ ಸಂಬಂಧಿಸಿದ ನಿರ್ಧಾರಗಳು ನಿಮ್ಮ ಪರವಾಗಿ ಇರುವುದು.

ವೃಶ್ಚಿಕ ರಾಶಿ (Scorpio): ನೀವು ಕುಟುಂಬ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸುವಿರಿ. ಮನೆಯ ಸೌಂದರ್ಯವನ್ನು ಹೆಚ್ಚಿಸುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಹೂಡಿಕೆ ಮಾಡಲು ಉತ್ತಮ ಅವಕಾಶ ಸಿಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ.

ಧನು ರಾಶಿ (Sagitarius): ನಿಮ್ಮ ರಾಶಿಯಲ್ಲಿ ಚಂದ್ರನ ಸಂಚಾರವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ತುಂಬಾ ಸಮಯದಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುವುದು. ನಿಂತು ಹೋಗಿದ್ದ ಕೆಲಸಗಳು ಮತ್ತೆ ಆರಂಭವಾಗುವುದು. ಉದ್ಯೋಗಿಗಳಿಗೆ ಬಡ್ತಿ ಸಿಗುವುದು. ಹೊಸ ಉದ್ಯೋಗಾವಕಾಶಗಳು ಕೂಡಾ ಸಿಗಬಹುದು.

ಮಕರ ರಾಶಿ (Capricorn): ಕೆಲಸದಲ್ಲಿ ಆಸಕ್ತಿ ಹೆಚ್ಚಾಗುವುದು. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ಕೆಲಸ ಸರಾಗವಾಗಿ ನಡೆಯುವುದು. ಆದಾಯ ಸ್ಥಿರವಾಗಿರುವುದು. ಹಾಗಂತ ಅತಿಯಾದ ಖರ್ಚಿಗೆ ಮುಂದಾಗಬೇಡಿ. ಹೂಡಿಕೆ ಮಾಡುವ ಮೊದಲು ಕೂಡಾ ಸರಿಯಾಗಿ ಯೋಚನೆ ಮಾಡಿದರೆ ಒಳ್ಳೆಯದು.

ಕುಂಭ ರಾಶಿ (Aquarius): ಈ ರಾಶಿಯವರಿಗೆ ಮಿಶ್ರ ಫಲ ಸಿಗುವುದು. ಭಾವನೆಗಳಿಗೆ ಕಟ್ಟು ಬಿದ್ದು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ಕೆಲಸದಲ್ಲಿ ಕೆಲವು ಸವಾಲುಗಳು ಎದುರಾಗಬಹುದು. ತಾಳ್ಮೆಯಿಂದ ಮುನ್ನಡೆದರೆ ಗೆಲುವುದು ಸಿಗುವುದು.

ಮೀನ ರಾಶಿ (Pisces): ಮಾನಸಿಕ ಶಾಂತಿ ಸಿಗುವುದು. ಕಿರಿ ಕಿರಿಗಳು ಕಡಿಮೆಯಾಗುವುದು. ತಕ್ಷಣವೇ ಫಲ ಸಿಗಬೇಕು ಎನ್ನುವುದನ್ನು ಬಿಟ್ಟು ದೀರ್ಘಕಾಲೀನ ಗುರಿಗಳ ಮೇಲೆ ಗಮನಹರಿಸಿದರೆ, ಉತ್ತಮ ಯಶಸ್ಸನ್ನು ಸಾಧಿಸುವ ಅವಕಾಶವಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ