Karnataka dams: ಕಬಿನಿ ಜಲಾಶಯಕ್ಕೆ ಹೆಚ್ಚು ನೀರು, ಹೊರಹರಿವು ಮತ್ತೆ ಏರಿಕೆ

Karnataka dams: ಕಬಿನಿ ಜಲಾಶಯಕ್ಕೆ ಹೆಚ್ಚು ನೀರು, ಹೊರಹರಿವು ಮತ್ತೆ ಏರಿಕೆ

Karnataka dams: ಕಬಿನಿ ಜಲಾಶಯಕ್ಕೆ ಹೆಚ್ಚು ನೀರು, ಹೊರಹರಿವು ಮತ್ತೆ ಏರಿಕೆ

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವಾರ ಉತ್ತಮ ಮಳೆಯಾಗಿದ್ದರಿಂದ ಬಹುತೇಕ ಎಲ್ಲಾ ಜಲಾಶಯಗಳ ಒಳಹರಿವು ಈಗಲೂ ಹೆಚ್ಚಾಗಿಯೇ ಇದೆ. ಅದರಲ್ಲೂ ಉತ್ತರ ಕರ್ನಾಟಕದ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಹೊರಹರಿವೂ ಕೂಡ ಅಧಿಕವಾಗಿಯೇ ಇದೆ.

ಮಲೆನಾಡಿನಲ್ಲಿ ಮಳೆಯಾಗಿದ್ದರಿಂದ ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೂ ಹೆಚ್ಚಿನ ನೀರು ಹರಿದು ಬರುತ್ತಿದೆ. ಕೇರಳದಲ್ಲಿ ಮಳೆಯಾಗಿದ್ದರಿಂದ ಕಬಿನಿ ಜಲಾಶಯಕ್ಕೆ ಮತ್ತೊಂದು ಸುತ್ತಿನ ನೀರು ಹರಿದು ಬಂದಿದೆ. ಜಲಾಶಯ ಈಗಾಗಲೇ ಭರ್ತಿಯಾಗಿರುವುದರಿಂದ ಹೊರ ಹರಿವನ್ನೂ ಹೆಚ್ಚು ಮಾಡಲಾಗಿದೆ.

ಮಲೆನಾಡಿನ ಲಿಂಗನಮಕ್ಕಿ, ಸೂಪಾ ಜಲಾಶಯಗಳಿಗೂ ಹೆಚ್ಚಿನ ನೀರು ಹರಿದು ಬರುತ್ತಿದೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ, ಕೊಡಗಿನ ಹಾರಂಗಿ ಜಲಾಶಯದ ಒಳಹರಿವು ಉತ್ತಮವಾಗಿದೆ.

ಜಲಸಂಪನ್ಮೂಲ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಈಗಲೂ ಸುಮಾರು 10 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಸುಮಾರು 12 ಸಾವಿರ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಸದ್ಯ ಶೇ 96ರಷ್ಟು ನೀರು ಲಭ್ಯವಿದೆ. ಜಲಾಶಯದ ನೀರಿನ ಮಟ್ಟವು 2282.76 ಅಡಿಯಷ್ಟಿದ್ದು, 19 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ನೀರು ಕಬಿನಿ ಜಲಾಶಯದಲ್ಲಿದೆ.

ಆಲಮಟ್ಟಿ ಜಲಾಶಯಕ್ಕೆ ಈಗಲೂ 69 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, 60 ಸಾವಿರ ಕ್ಯೂಸೆಕ್‌ ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಶೇ 98ರಷ್ಟು ನೀರಿದ್ದು, 120 ಟಿಎಂಸಿ ನೀರು ಸಂಗ್ರಹವಾಗಿದೆ. ನಾರಾಯಣಪುರ ಜಲಾಶಯಕ್ಕೆ 57 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 61 ಸಾವಿರ ಕ್ಯೂಸೆಕ್‌ ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ. ಜಲಾಶಯದಲ್ಲಿ ಶೇ 99ರಷ್ಟು ನೀರು ಲಭ್ಯವಿದೆ.

ಹಾರಂಗಿ ಜಲಾಶಯಕ್ಕೆ 5600 ಕ್ಯೂಸೆಕ್‌ ನೀರು ಒಳಹರಿವು ಇದ್ದರೆ, ಶೇ 97ರಷ್ಟು ಭರ್ತಿಯಾಗಿದೆ. ಹೇಮಾವತಿಯಲ್ಲಿ ಶೇ 84ರಷ್ಟು ನೀರಿದ್ದು, 3117 ಕ್ಯೂಸೆಕ್‌ ಹರಿದು ಬರುತ್ತಿದೆ. ಕೆಆರ್ ಎಸ್ ಜಲಾಶಯಕ್ಕೂ ಈಗ 8354 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದರೆ, ಹೊರ ಹರಿವನ್ನು 2325ಕ್ಕೆ ಏರಿಕೆ ಮಾಡಲಾಗಿದೆ. ಜಲಾಶಯದಲ್ಲಿ ಶೇ 63ರಷ್ಟು ನೀರಿದ್ದು, ನೀರಿನ ಮಟ್ಟವು 109 ಅಡಿಗೆ ತಲುಪಿದೆ.

ಭದ್ರಾ ಜಲಾಶಯಕ್ಕೆ 9552 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಶೇ 76ರಷ್ಟು ಭರ್ತಿಯಾಗಿದೆ. ತುಂಗಭದ್ರ ಜಲಾಶಯಕ್ಕೆ ಈಗಲೂ 41 ಸಾವಿರ ಕ್ಯೂಸೆಕ್‌ ಒಳಹರಿವು ಇದ್ದರೆ, ಶೇ 78ರಷ್ಟು ಭರ್ತಿಯಾಗಿದೆ. 82 ಟಿಎಂಸಿ ನೀರು ಇಲ್ಲಿ ಲಭ್ಯವಿದೆ.

ಘಟಪ್ರಭಾಕ್ಕೆ 8 ಸಾವಿರ ಕ್ಯೂಸೆಕ್‌ ಒಳಹರಿವಿದ್ದು, ಶೇ 94ರಷ್ಟು ಭರ್ತಿಯಾಗಿದೆ. ಮಲಪ್ರಭಾ ಜಲಾಶಯ ಶೇ55ರಷ್ಟು ತುಂಬಿದ್ದರೆ, 3376 ಕ್ಯೂಸೆಕ್‌ ಹರಿದು ಬರುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ