Karnataka Dams: ಪ್ರಮುಖ ಡ್ಯಾಂಗಳಿಗೆ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ಒಳಹರಿವು! ಇಂದಿನ ನೀರಿನ ಮಟ್ಟ, ಅಂಕಿ-ಸಂಖ್ಯೆ

Karnataka Dams: ಪ್ರಮುಖ ಡ್ಯಾಂಗಳಿಗೆ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ಒಳಹರಿವು! ಇಂದಿನ ನೀರಿನ ಮಟ್ಟ, ಅಂಕಿ-ಸಂಖ್ಯೆ

Karnataka Dams: ಪ್ರಮುಖ ಡ್ಯಾಂಗಳಿಗೆ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ಒಳಹರಿವು! ಇಂದಿನ ನೀರಿನ ಮಟ್ಟ, ಅಂಕಿ-ಸಂಖ್ಯೆ

ಬೆಂಗಳೂರು: ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಭರ್ಜರಿ ಏರಿಕೆ ಆಗಿದೆ. ಎರಡು ವಾರಗಳ ಹಿಂದಷ್ಟೇ ಇದ್ದ ನೀರಿನ ಕೊರತೆ ಚಿತ್ರಣವನ್ನು ಈ ಮಳೆ ಬದಲಾಯಿಸಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಲಿಂಗಮನಕ್ಕಿ, ಕಬಿನಿ, ಕೆಆರ್ ಎಸ್, ನಾರಾಯಣಪುರ ಸೇರಿದಂತೆ ಪ್ರಮುಖ ಜಲಾಶಯಗಳ ಒಳಹರಿವು ಇಂದು ಆ.7ರಂದು ಮತ್ತೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಕರ್ನಾಟಕ ಕರಾವಳಿ, ಮಲೆನಾಡು ಸೇರಿದಂತೆ ಒಳನಾಡು ಕೆಲವೆಡೆ ಜುಲೈ ಅಂತ್ಯದಿಂದ ಆಗಸ್ಟ್ ಎರಡನೇವಾರದವರೆಗೂ ಮುಂದುವರಿದಿದೆ. ಕೇರಳ ಭಾಗದಲ್ಲೂ ಭಾರೀ ಮಳೆ ಆಗಿದ್ದು, ಕೊಡಗು, ಮೈಸೂರು, ಮಡಿಕೇರಿ, ಭಾಗಮಂಡಲ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಅರಣ್ಯ ತಪ್ಪಲಿನಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಪರಿಣಾಮ ಕೃಷ್ಣರಾಜ ಸಾಗರ, ಕಬಿನಿ, ಹಾರಂಗಿ , ಹೇಮಾವತಿ, ಭದ್ರಾ, ತುಂಗಭದ್ರಾ ನದಿಗಳು, ಅಣೆಕಟ್ಟಗಳಿಗೆ ಜೀವಕಳೆ ಮರುಕಳಿಸಿದೆ.

ವಿಶೇಷವೆಂದರೆ ಇಂದು ಒಂದೇ ದಿನಕ್ಕೆ ಆಲಮಟ್ಟಿ ಡ್ಯಾಂನ ಒಳಹಿರುವ ಬರೋಬ್ಬರಿ 1,18, 751 ಕ್ಯೂಸೆಕ್ ಹಾಗೂ ನಾರಾಯಣಪುರ ಅಣೆಕಟ್ಟಿನಲ್ಲಿ 1,52,843 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ರಾಜ್ಯದ ಪ್ರಮುಖ 14 ಜಲಾಶಗಳಲ್ಲೂ ನೀರಿನ ಮಟ್ಟ ಏರಿಕೆ ಆಗಿದೆ. ಪ್ರಮುಖ ಜಲಾಶಯಗಳ ಇಂದಿನ ಶುಕ್ರವಾರದ (ಆಗಸ್ಟ್ 7)ರವರೆಗಿನ ನೀರಿನ ಸಂಗ್ರಹ, ಒಳ ಮತ್ತು ಹೊರ ಹರಿವು ಮಾಹಿತಿ, ಅಂಕಿ ಸಂಖ್ಯೆಗಳು ಇಲ್ಲಿವೆ.

ಡ್ಯಾಂನ ಒಟ್ಟು ನೀರಿನ ಸಾಮರ್ಥ್ಯ: 49 ಟಿಎಂಸಿ
ಇಂದಿನ ನೀರಿನ ಸಂಗ್ರಹ: 28.23 ಟಿಎಂಸಿ
ಇಂದಿನ ಒಳಹರಿವು: 7477 ಕ್ಯೂಸೆಕ್
ಹೊರಹರಿವು: 2032 ಕ್ಯೂಸೆಕ್

ಡ್ಯಾಂನ ಒಟ್ಟು ನೀರಿನ ಸಾಮರ್ಥ್ಯ: 151 ಟಿಎಂಸಿ
ಇಂದಿನ ನೀರಿನ ಸಂಗ್ರಹ: 71.24 ಟಿಎಂಸಿ
ಇಂದಿನ ಒಳಹರಿವು: 22,030 ಕ್ಯೂಸೆಕ್
ಹೊರಹರಿವು: 3334 ಕ್ಯೂಸೆಕ್

ಡ್ಯಾಂನ ಒಟ್ಟು ನೀರಿನ ಸಾಮರ್ಥ್ಯ: 8.50 ಟಿಎಂಸಿ
ಇಂದಿನ ನೀರಿನ ಸಂಗ್ರಹ: 8.26 ಟಿಎಂಸಿ
ಇಂದಿನ ಒಳಹರಿವು: 5626 ಕ್ಯೂಸೆಕ್
ಹೊರಹರಿವು: 5083 ಕ್ಯೂಸೆಕ್

ಡ್ಯಾಂನ ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ನೀರಿನ ಸಂಗ್ರಹ: 18.42 ಟಿಎಂಸಿ
ಇಂದಿನ ಒಳಹರಿವು: 9217 ಕ್ಯೂಸೆಕ್
ಹೊರಹರಿವು: 7000 ಕ್ಯೂಸೆಕ್

ಡ್ಯಾಂನ ಒಟ್ಟು ನೀರಿನ ಸಾಮರ್ಥ್ಯ: 105 ಟಿಎಂಸಿ
ಇಂದಿನ ನೀರಿನ ಸಂಗ್ರಹ: 68.78 ಟಿಎಂಸಿ
ಇಂದಿನ ಒಳಹರಿವು: 47,559 ಕ್ಯೂಸೆಕ್
ಹೊರಹರಿವು: 1497 ಕ್ಯೂಸೆಕ್

ಡ್ಯಾಂನ ಒಟ್ಟು ನೀರಿನ ಸಾಮರ್ಥ್ಯ: 51 ಟಿಎಂಸಿ
ಇಂದಿನ ನೀರಿನ ಸಂಗ್ರಹ: 45 ಟಿಎಂಸಿ
ಇಂದಿನ ಒಳಹರಿವು: 17,680 ಕ್ಯೂಸೆಕ್
ಹೊರಹರಿವು: 1785 ಕ್ಯೂಸೆಕ್

ಡ್ಯಾಂನ ಒಟ್ಟು ನೀರಿನ ಸಾಮರ್ಥ್ಯ: 123 ಟಿಎಂಸಿ
ಇಂದಿನ ನೀರಿನ ಸಂಗ್ರಹ: 106 ಟಿಎಂಸಿ
ಇಂದಿನ ಒಳಹರಿವು: 1,18, 751 ಕ್ಯೂಸೆಕ್
ಹೊರಹರಿವು: 1,50, 433 ಕ್ಯೂಸೆಕ್

ಡ್ಯಾಂನ ಒಟ್ಟು ನೀರಿನ ಸಾಮರ್ಥ್ಯ: 33.31 ಟಿಎಂಸಿ
ಇಂದಿನ ನೀರಿನ ಸಂಗ್ರಹ: 29,06 ಟಿಎಂಸಿ
ಇಂದಿನ ಒಳಹರಿವು: 1,52,843 ಕ್ಯೂಸೆಕ್
ಹೊರಹರಿವು: 1,52,843 ಕ್ಯೂಸೆಕ್

dam water level rain weather water reservoir

dam water level rain weather water reservoir

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ