
Karnataka Dam Water Level: ರಾಜ್ಯದ ಡ್ಯಾಂಗಳಿಗೆ ಭರ್ಜರಿ ಒಳಹರಿವು; ನೀರಿನ ಮಟ್ಟದಲ್ಲಿ ಏರಿಕೆ
ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿರುವ ಪರಿಣಾಮ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ವಿಶೇಷವಾಗಿ ಕೃಷ್ಣಾ ಹಾಗೂ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಕಬಿನಿ ಜಲಾಶಯ ಭರ್ತಿಗೆ ಕೇವಲ ಒಂದು ಅಡಿಗಿಂತಲೂ ಕಡಿಮೆ ಬಾಕಿ ಉಳಿದಿದೆ.
ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿರುವ ಪರಿಣಾಮ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಿಗೆ ಒಳಹರಿವು ಕೊಂಚ ಕಡಿಮೆಯಾಗಿದೆ. ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಿಗೆ ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಒಳಹರಿವು ಇಳಿಕೆಯಾಗಿದ್ದರೂ, ಜಲಾಶಯಗಳಲ್ಲಿನ ನೀರಿನ ಮಟ್ಟ ಉತ್ತಮವಾಗಿದೆ.
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೂ ಕೃಷ್ಣಾ ನದಿಯಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಕೆಆರ್‌ಎಸ್ ಸೇರಿದಂತೆ ಹಲವು ಜಲಾಶಯಗಳಲ್ಲಿ ನೀರಿನ ಸಂಗ್ರಹವೂ ಉತ್ತಮವಾಗಿದ್ದು, ಮಳೆ ಮುಂದುವರಿದರೆ ಜಲಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇತ್ತ ಮಲೆನಾಡಿನಲ್ಲಿ ಮತ್ತೆ ಮಳೆಯಾಗುವುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾದರೆ ತುಂಗಭದ್ರಾ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯ ಗರಿಷ್ಠ ಮಟ್ಟದ ಸಮೀಪದಲ್ಲಿದೆ. ಕೃಷ್ಣಾ ನದಿಯಿಂದ ಸುಮಾರು 89,777 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಜಲಾಶಯದ ನೀರಿನ ಮಟ್ಟ 519.42 ಮೀಟರ್ ತಲುಪಿದೆ.
ಗರಿಷ್ಠ ಮಟ್ಟ: 519.60 ಮೀಟರ್
ಪ್ರಸ್ತುತ ಮಟ್ಟ: 519.42 ಮೀಟರ್
ಒಳಹರಿವು:89,777 ಕ್ಯೂಸೆಕ್
ಹೊರಹರಿವು: 41,155 ಕ್ಯೂಸೆಕ್. ಇನ್ನೂ ಗರಿಷ್ಠ ಮಟ್ಟಕ್ಕೆ ಆಲಮಟ್ಟಿ ಜಲಾಶಯ ಕೇವಲ 0.18 ಮೀಟರ್‌ದೂರದಲ್ಲಿದೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಲ್ಲೂ ನೀರಿನ ಸಂಗ್ರಹ 30 ಟಿಎಂಸಿ ಗಡಿ ದಾಟಿದೆ. ಒಳಹರಿವು ಮುಂದುವರಿದಿರುವುದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬರುತ್ತಿದೆ.
ಗರಿಷ್ಠ ಮಟ್ಟ: 124.80 ಅಡಿ
ಪ್ರಸ್ತುತ ಮಟ್ಟ:108.66 ಅಡಿ
ಗರಿಷ್ಠ ಸಾಮರ್ಥ್ಯ:49.452 ಟಿಎಂಸಿ
ಪ್ರಸ್ತುತ ಸಂಗ್ರಹ:30.396 ಟಿಎಂಸಿ
ಒಳಹರಿವು:11,857 ಕ್ಯೂಸೆಕ್
ಹೊರಹರಿವು: 2,335 ಕ್ಯೂಸೆಕ್
ಭರ್ತಿಯತ್ತ ಕಬಿನಿ ಜಲಾಶಯ
ಮೈಸೂರಿನ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ.84 ಅಡಿ ಗರಿಷ್ಠ ಮಟ್ಟದ ಪೈಕಿ 83.04 ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೇವಲ 0.96 ಅಡಿ ಬಾಕಿ ಉಳಿದಿದೆ.
ಗರಿಷ್ಠ ಮಟ್ಟ:84 ಅಡಿ
ಪ್ರಸ್ತುತ ಮಟ್ಟ: 83.04 ಅಡಿ
ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ
ಪ್ರಸ್ತುತ ಸಂಗ್ರಹ: 18.89 ಟಿಎಂಸಿ
ಒಳಹರಿವು: 12,044 ಕ್ಯೂಸೆಕ್
ಒಟ್ಟು ಹೊರಹರಿವು: 12,000 ಕ್ಯೂಸೆಕ್
ಕಬಿನಿ ಜಲಾನಯನ ಪ್ರದೇಶದಲ್ಲಿ ಸುಮಾರು 10 ಮಿ.ಮೀ. ಮಳೆ ದಾಖಲಾಗಿದ್ದು, ಜಲಾಶಯಕ್ಕೆ ಒಳಹರಿವು ಮುಂದುವರಿದಿದೆ. ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟದ ಸಮೀಪದಲ್ಲಿರುವ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಗರಿಷ್ಠ ಮಟ್ಟ: 1819 ಅಡಿ
ಪ್ರಸ್ತುತ ಮಟ್ಟ: 1791.55 ಅಡಿ
ಒಟ್ಟು ಸಾಮರ್ಥ್ಯ: 151.64 ಟಿಎಂಸಿ
ಲಭ್ಯವಿರುವ ನೀರು: 76.46 ಟಿಎಂಸಿ
ಒಳಹರಿವು: 18,078 ಕ್ಯೂಸೆಕ್
ಹೊರಹರಿವು: 741 ಕ್ಯೂಸೆಕ್
ಗರಿಷ್ಠ ಮಟ್ಟ ತಲುಪಿದ ತುಂಗಾ ಜಲಾಶಯ
ತುಂಗಾ ಜಲಾಶಯದ ನೀರಿನ ಮಟ್ಟ 588.24 ಮೀಟರ್ ತಲುಪಿದ್ದು, ಇದು ಅದರ ಗರಿಷ್ಠ ಮಟ್ಟವಾಗಿದೆ. ಜಲಾಶಯಕ್ಕೆ 27,362 ಕ್ಯೂಸೆಕ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಗರಿಷ್ಠ ಮಟ್ಟ: 588.24 ಮೀಟರ್
ಪ್ರಸ್ತುತ ಮಟ್ಟ: 588.24 ಮೀಟರ್
ಒಟ್ಟು ಸಾಮರ್ಥ್ಯ: 3.24 ಟಿಎಂಸಿ
ಲಭ್ಯವಿರುವ ನೀರು: 2.411 ಟಿಎಂಸಿ
ಒಳಹರಿವು: 27,362 ಕ್ಯೂಸೆಕ್
ಹೊರಹರಿವು: 27,362 ಕ್ಯೂಸೆಕ್
ಭದ್ರಾ ಜಲಾಶಯದಲ್ಲೂ ನೀರಿನ ಸಂಗ್ರಹ ಉತ್ತಮವಾಗಿದೆ. ಪ್ರಸ್ತುತ ಜಲಮಟ್ಟ 170 ಅಡಿ 6 ಇಂಚು ಇದ್ದು, ಜಲಾಶಯಕ್ಕೆ 8,440 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಗರಿಷ್ಠ ಮಟ್ಟ: 186 ಅಡಿ
ಪ್ರಸ್ತುತ ಮಟ್ಟ: 170 ಅಡಿ 6 ಇಂಚು
ಒಟ್ಟು ಸಾಮರ್ಥ್ಯ: 71.535 ಟಿಎಂಸಿ
ಲಭ್ಯವಿರುವ ನೀರು: 53.425 ಟಿಎಂಸಿ
ಒಳಹರಿವು: 8,440 ಕ್ಯೂಸೆಕ್
ಹೊರಹರಿವು: 199 ಕ್ಯೂಸೆಕ್
ಒಟ್ಟಾರೆ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿರುವುದು ನೀರಿನ ಸಂಗ್ರಹದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಕಬಿನಿ ಮತ್ತು ಆಲಮಟ್ಟಿ ಸೇರಿದಂತೆ ಹಲವು ಜಲಾಶಯಗಳು ಗರಿಷ್ಠ ಮಟ್ಟದತ್ತ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹಾಗೂ ಜಲಾನಯನ ಪ್ರದೇಶಗಳಲ್ಲಿನ ಒಳಹರಿವಿನ ಮೇಲೆ ಜಲಾಶಯಗಳ ಸ್ಥಿತಿ ಮತ್ತಷ್ಟು ಅವಲಂಬಿತವಾಗಲಿದೆ.