Horoscope August 1: ತಿಂಗಳ ಮೊದಲ ದಿನವೇ ಈ ರಾಶಿಯವರಿಗೆ ಧನಲಾಭ, ಸಮಸ್ಯೆಗಳಿಗೆ ಸಿಗುವುದು ಪರಿಹಾರ

Horoscope August 1: ತಿಂಗಳ ಮೊದಲ ದಿನವೇ ಈ ರಾಶಿಯವರಿಗೆ ಧನಲಾಭ, ಸಮಸ್ಯೆಗಳಿಗೆ ಸಿಗುವುದು ಪರಿಹಾರ

Horoscope August 1: ತಿಂಗಳ ಮೊದಲ ದಿನವೇ ಈ ರಾಶಿಯವರಿಗೆ ಧನಲಾಭ, ಸಮಸ್ಯೆಗಳಿಗೆ ಸಿಗುವುದು ಪರಿಹಾರ

Horoscope August 1: ಇಂದಿನ ದಿನವು ಕೆಲವರಿಗೆ ಹೊಸ ಅವಕಾಶಗಳು, ಉದ್ಯೋಗದಲ್ಲಿ ಬಡ್ತಿ ಮತ್ತು ಧನಲಾಭವನ್ನು ತಂದರೆ, ಇನ್ನು ಕೆಲವರಿಗೆ ಕಠಿಣ ಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಹಾಗೂ ಕುಟುಂಬದಲ್ಲಿ ಸಂತಸ ತರಲಿದೆ. ಹಾಗಾದ್ರೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.

ತಿಂಗಳ ಮೊದಲ ದಿನ ಸಂತೋಷದಿಂದಲೇ ಇಂದು ನಿಮಗೆ ಉತ್ತಮ ದಿನವಾಗಲಿದೆ. ಬೇಡದ ವಿಷಯಗಳ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ದೇವಸ್ಥಾನಗಳಿಗೆ ಹೋಗುವಿರಿ. ಇವತ್ತು ಯಾವುದೇ ರೀತಿಯ ಸಾಲ ಅಥವಾ ಹಣದ ವಹಿವಾಟು ಮಾಡದಿರುವುದೇ ಒಳ್ಳೆಯದು. ವ್ಯವಹಾರದಲ್ಲಿ ಲಾಭವಾಗುವುದು. ಮನೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುವಿರಿ.

ಈ ದಿನ ನಿಮಗೆ ಸ್ಮರಣೀಯ ದಿನವಾಗಿರಲಿದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ವಿಯಾಗುವುದು. ಸಂಬಂಧಿಕರ ನೆರವಿನಿಂದ ವ್ಯವಹಾರ ವಿಸ್ತರಿಸಲು ಅವಕಾಶ ಸಿಗುವುದು. ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ.

ಈ ದಿನ ನಿಮಗೆ ಅದ್ಭುತವಾಗಿರಲಿದೆ. ಇಂದು ಹಣಕಾಸಿನ ವಹಿವಾಟಿನಿಂದ ದೂರ ಇದ್ದರೆ ಒಳ್ಳೆಯದು. ಕೌಟುಂಬಿಕ ಭಿನ್ನಾಭಿಪ್ರಾಯಗಳು ಬಗೆಹರಿಯುವುದು. ಎಲ್ಲರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಆರೋಗ್ಯ ಉತ್ತಮವಾಗಿರುವುದು.

ಸಂತೋಷದಿಂದ ಕೂಡಿದ ದಿನವಾಗಿರುವುದು. ಕೆಲವು ವ್ಯವಹಾರ ಉದ್ದೇಶಗಳಿಗಾಗಿ ಪ್ರಯಾಣ ಮಾಡ ಬೇಕಾಗಬಹುದು. ಈ ಪ್ರಯಾಣ ನಿಮ್ಮ ಭವಿಷ್ಯಕ್ಕೆ ಅನುಕೂಲಕರವಾಗಿರಲಿದೆ. ಬಾಲ್ಯದ ಸ್ನೇಹಿತನನ್ನು ಭೇಟಿಯಾಗುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಈ ದಿನ ಹೊಸ ಉತ್ಸಾಹದಿಂದ ಪ್ರಾರಂಭವಾಗುತ್ತದೆ. ಹತ್ತಿರದ ಸಂಬಂಧಿಗೆ ಹಣಕಾಸಿನ ನೆರವು ನೀಡುವಿರಿ. ಆತ್ಮವಿಶ್ವಾಸ ಹೆಚ್ಚಾಗುವುದು. ಬಾಕಿ ಇರುವ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಆರೋಗ್ಯದತ್ತ ಗಮನ ಹರಿಸಿ.

ವ್ಯವಹಾರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಲಾಭವಾಗುವುದು. ಹಣಕಾಸಿನ ವಹಿವಾಟು ನಡೆಸುವಾಗ ಎಚ್ಚರಿಕೆಯಿಂದ ಇರಿ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ತಾಳ್ಮೆಯಿಂದ ಇದ್ದರೆ ಯಶಸ್ಸಿನ ಹಾದಿ ಸುಗಮವಾಗುವುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರಲಿದೆ.

ವೃತ್ತಿಜೀವನದಲ್ಲಿ ಹೊಸ ಬದಲಾವಣೆ ಕಾಣುವಿರಿ. ವ್ಯಾಪಾರಿಗಳಿಗೆ ದಿನ ಅನುಕೂಲಕರವಾಗಿರುತ್ತವೆ. ಹೆಚ್ಚಿನ ಲಾಭವಾಗುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.

ದಿನವಿಡೀ ಉಲ್ಲಾಸದಿಂದ ಇರುವಿರಿ. ಸಕಾರಾತ್ಮಕ ಶಕ್ತಿ ನಿಮ್ಮನ್ನು ಸುತ್ತುವರೆದಿರುತ್ತದೆ. ವ್ಯಾಪಾರದಲ್ಲಿ ಯಶಸ್ಸು ಸಿಗುವುದು ಖಚಿತ. ವ್ಯವಹಾರದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಲಾಭವಾಗುವುದು. ಕಲೆಗಳಲ್ಲಿ ತೊಡಗಿಸಿಕೊಂಡವರು ಸಮಾಜದಲ್ಲಿ ಹೆಚ್ಚಿನ ಗೌರವವನ್ನು ಪಡೆಯುವರು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುವುದು. ಹಣದ ಸಮಸ್ಯೆ ನಿವಾರಣೆಯಾಗುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ಇಂದು ನಿಮಗೆ ಬಿಡುವಿಲ್ಲದ ದಿನವಾಗಿರುತ್ತದೆ. ಹೊಸ ಮೂಲಗಳಿಂದ ಆರ್ಥಿಕ ಲಾಭವಾಗುವುದು. ನಿಮ್ಮ ಸಂಗಾತಿಗೆ ಅನುಕೂಲಕರ ದಿನವಾಗಿರುತ್ತದೆ. ಉದ್ಯೋಗ ಯೋಜನೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಇತರರನ್ನು ಅವಲಂಬಿಸುವ ಬದಲು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಷೇರು ಮಾರುಕಟ್ಟೆಯಿಂದ ಲಾಭವಾಗುವುದು.

ದಿನವಿಡೀ ಚೈತನ್ಯಶೀಲರಾಗಿರುವಿರಿ. ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುತ್ತದೆ. ಖರ್ಚುಗಳನ್ನು ನಿಯಂತ್ರಿಸಬೇಕು. ಹೆತ್ತವರ ಕಡೆಯಿಂದ ಒಳ್ಳೆಯ ಸುದ್ದಿ ಬರುವ ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಬಹುದು.

ಇಂದು ನಿಮಗೆ ಅದ್ಭುತವಾದ ದಿನವಾಗಿರಲಿದೆ. ಕಚೇರಿ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಮಕ್ಕಳೊಂದಿಗೆ ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶಗಳು ನಿಮ್ಮ ಪರವಾಗಿರುತ್ತವೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು.

horoscope prediction zodiac signs

horoscope prediction zodiac signs

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ