HC ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸೇಡಂನ ಹೇಮಾ ಕುಲಕರ್ಣಿ ನೇಮಕ: ಜನರಲ್ಲಿ ಸಂತಸ

HC ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸೇಡಂನ ಹೇಮಾ ಕುಲಕರ್ಣಿ ನೇಮಕ: ಜನರಲ್ಲಿ ಸಂತಸ

HC ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸೇಡಂನ ಹೇಮಾ ಕುಲಕರ್ಣಿ ನೇಮಕ: ಜನರಲ್ಲಿ ಸಂತಸ

ಸೇಡಂ: ಕರ್ನಾಟಕ ಹೈಕೋರ್ಟ್‌ಗೆ ಆರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕೇಂದ್ರ ಕಾನೂನು ಸಚಿವಾಲಯ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಸೇಡಂನ ಹೇಮಾ ಕುಲಕರ್ಣಿ ನೇಮಕರಾಗಿರುವುದು ಸೇಡಂ ಜನರಲ್ಲಿ ಸಂತಸ ಮೂಡಿದೆ.

ಪ್ರಸ್ತುತ ಕಲಬುರ್ಗಿಯಲ್ಲಿ ನೆಲೆಸಿರುವ ಹೇಮಾ ಕುಲಕರ್ಣಿ ಅವರು ಮೂಲತಃ ಸೇಡಂನವರು. ತಂದೆ ವೆಂಕಟ ಸುರೇಂದ್ರ ಕುಲಕರ್ಣಿ ಸೇಡಂನಲ್ಲಿ ಖ್ಯಾತ ವಕೀಲರಾಗಿದ್ದರು. ಅವರ ಐದು ಜನ ಮಕ್ಕಳಲ್ಲಿ ನಾಲ್ವರು ಪುತ್ರಿಯರು. ನಾಲ್ಕನೇ ಪುತ್ರಿಯೇ ಹೇಮಾ ಕುಲಕರ್ಣಿ.

ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಪ್ರಾಥಮಿಕ ಬಾಲಭಾರತಿ, ಪ್ರೌಢ ಮತ್ತು ಪಿಯು ಶಿಕ್ಷಣ ಮಾತೃಛಾಯಾ ಕಾಲೇಜಿನಲ್ಲಿ ಓದಿದ್ದಾರೆ. ನಂತರ ಪದವಿ ಶಿಕ್ಷಣವನ್ನು ಕಲಬುರಗಿಯ ವಿ.ಜಿ .ಮಹಿಳಾ ಕಾಲೇಜು, ಎಸ್ಎಸ್ಎಲ್ ಕಾಲೇಜಿನಲ್ಲಿ ಕಾನೂನು ಪದವಿ, ಆಂಧ್ರಪ್ರದೇಶದ ನಾಗಾರ್ಜುನ ಕಾನೂನು ವಿಶ್ವವಿದ್ಯಾಲಯದಲ್ಲಿ ಎಲ್ಎಲ್ಎಂ ಅಧ್ಯಯನ ಮಾಡಿದ್ದಾರೆ.

ಹೇಮಾ ಕುಲಕರ್ಣಿ ಅವರು ಭಾರತ ಸರ್ಕಾರದ ಹಿರಿಯ ಕಾನೂನು ಸಲಹೆಗಾರರು, ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ, ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ಮಾಧ್ಯಮಿಕ ಶಿಕ್ಷಣ, ನೌಕರರ ರಾಜ್ಯ ವಿಮಾ ನಿಗಮ, ಯುಜಿಸಿಗೆ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

‘ನಾನು 1999ರಲ್ಲಿ ಕೆ.ಅಪ್ಪಾರಾವ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲ ವೃತ್ತಿಯನ್ನು ಪ್ರಾರಂಭಿಸಿದ್ದೇನೆ. ನಂತರ 2008ರಿಂದ ಕಲಬುರಗಿಯಲ್ಲಿ ಪ್ರಭಾಕರ ಯಳಸಂಗಿ ಮಾರ್ಗದರ್ಶನದಲ್ಲಿ ಹೈಕೋರ್ಟ್ ವಕೀಲರಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ಹೇಮಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

2001ರಲ್ಲಿ ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿಯ ಲಕ್ಷ್ಮಿಕಾಂತ ಕುಲಕರ್ಣಿ ಅವರ ಜೊತೆಗೆ ವಿವಾಹವಾಗಿದೆ. ಪ್ರಸ್ತುತ ಕಲಬುರಗಿಯಲ್ಲಿ ನೆಲೆಸಿರುವ ಲಕ್ಷ್ಮಿಕಾಂತ ಕುಲಕರ್ಣಿ ಅವರು ಹೈಕೋರ್ಟ್‌ ವಕೀಲರಾಗಿದ್ದಾರೆ. ಸೇಡಂ ಮೂಲದ ಹೇಮಾ ಹೈಕೋರ್ಟ್ ನ್ಯಾಯಮೂರ್ತಿಯಾಗುತ್ತಿದ್ದಂತೆ ಸೇಡಂನಲ್ಲಿ ಸಂತಸ ಮನೆ ಮಾಡಿದೆ. ಸೇಡಂನ ವಕೀಲರು ಹೇಮಾ ಅವರನ್ನು ಅಭಿನಂದಿಸಿ ಸತ್ಕರಿಸಿದ್ದಾರೆ.

ಬೆಂಗಳೂರಿನಲ್ಲಿ ಹೇಮಾ ಕುಲಕರ್ಣಿ ಅವರ ಪ್ರಮಾಣ ವಚನ ಆ.9ರಂದು ಮಧ್ಯಾಹ್ನ 3.30ಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರಿಂದ ಜರುಗಲಿದೆ ಎಂದು ಮೂಲಗಳು ತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-34-1827949365

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ