
Daily Horoscope Aug 9: ಈ ಎರಡು ರಾಶಿಯವರಿಗೆ ಅದೃಷ್ಟದ ದಿನ, ಕೆಲಸಕ್ಕೆ ಸಿಗುವುದು ತಕ್ಕ ಫಲ, 12 ದ್ವಾದಶ ರಾಶಿಗಳ ನಿತ್ಯ ಭವಿಷ್ಯ
Daily Horoscope Aug 9: ಆಗಸ್ಟ್ 9ರ ಸೋಮವಾರ 2 ಪ್ರಮುಖ ರಾಶಿಗಳಿಗೆ ಅದೃಷ್ಟದ ದಿನವಾಗಿದೆ. ಇನ್ನು ಪ್ರಮುಖ ರಾಶಿಗಳಿಗೆ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಸೋಮವಾರದ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಇಂದಿನ 12 ರಾಶಿಗಳ ಸಂಪೂರ್ಣ ಭವಿಷ್ಯ, ಫಲಾಫಲಗಳ ವಿವರ ನೋಡೋಣ.
ಇಂದು ಸಂತೋಷದಿಂದ ತುಂಬಿದ ದಿನವಾಗಿರುತ್ತದೆ. ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಸಮೃದ್ಧಿ ಹೆಚ್ಚಾಗುವುದು. ಸಮಸ್ಯೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾಗುವಿರಿ. ಮನೆಯ ಕೆಲಸದಲ್ಲಿ ಬ್ಯುಸಿಯಾಗಿರುವಿರಿ. ಅತಿಥಿಗಳ ಆಗಮನದಿಂದ ಸಂತೋಷ ಹೆಚ್ಚಾಗಲಿದೆ.
ಕೈ ಹಾಕಿದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸುವಿರಿ. ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಇವತ್ತು ತೆಗೆದುಕೊಳ್ಳುವ ನಿರ್ಧಾರದಿಂದ ಲಾಭವಾಗುವುದು. ಆರೋಗ್ಯ ಉತ್ತಮವಾಗಿರುವುದು.
ಹೊಸ ಉತ್ಸಾಹದೊಂದಿಗೆ ದಿನದ ಆರಂಭವಾಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಹೊಸ ಉದ್ಯೋಗಾವಕಾಶಗಳು ಸಿಗುವುದು. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಉಳಿತಾಯದ ಅಭ್ಯಾಸವನ್ನು ಅಳವಡಿಸಿಕೊಳ್ಳಿ. ವೈವಾಹಿಕ ಸಂಬಂಧವು ಸಿಹಿಯಾಗಿರುವುದು.
ಕರ್ಕಾಟಕ ರಾಶಿ (Cancer)
ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಬಹುದು. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಆರೋಗ್ಯವು ಉತ್ತಮವಾಗಿರುವುದು. ದಿನದ ಅಂತ್ಯದ ವೇಳೆಗೆ ಒಳ್ಳೆಯ ಸುದ್ದಿ ಕೇಳುವಿರಿ.
ಹೊಸ ಆಲೋಚನೆಗಳೊಂದಿಗೆ ಕೆಲಸ ಮಾಡುವಿರಿ. ಇದರಿಂದ ಹೆಚ್ಚಿನ ಲಾಭವಾಗುವುದು. ಗುರಿಗಳ ಮೇಲೆ ಗಮನಹರಿಸಿದರೆ ಶೀಘ್ರದಲ್ಲೇ ಸಕಾರಾತ್ಮಕ ಫಲ ಸಿಗುವುದು. ಯಾವುದೇ ಕೆಲಸವನ್ನು ಮುಂದಕ್ಕೆ ಹಾಕಬೇಡಿ. ಹಿಡಿದ ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸುವಂತೆ ನೋಡಿಕೊಳ್ಳಿ.
ಇಂದು ಅದ್ಭುತವಾದ ದಿನವಾಗಿರುವುದು. ವೃತ್ತಿ ಜೀವನದ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು. ಸಂತೋಷ ಹೆಚ್ಚಾಗುವುದು. ಮನೆಯಲ್ಲಿ ಪೂಜಾ ಕಾರ್ಯಗಳು ನಡೆಯುವುದು.
ಇಂದು ನಿಮಗೆ ಉತ್ತಮ ದಿನವಾಗಿರುವುದು. ವ್ಯವಹಾರದಲ್ಲಿ ಹೆಚ್ಚು ಆರ್ಥಿಕ ಲಾಭವಾಗುವುದು. ಮನೆಯಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಇರುವುದು. ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುವುದು. ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸಾಮರಸ್ಯದಿಂದ ಇರುವುದು.
ವೃಶ್ಚಿಕ ರಾಶಿ (Scorpio)
ಇವತ್ತು ಕೆಲವು ಸವಾಲುಗಳು ಎದುರಾಗುವುದು. ಬುದ್ದಿವಂತಿಕೆಯಿಂದ ಎಲ್ಲವನ್ನೂ ಎದುರಿಸುವಿರಿ. ಖರ್ಚು ವೆಚ್ಚದ ಬಗ್ಗೆ ಎಚ್ಚರಿಕೆ ಇರಲಿ. ಎಲ್ಲಾ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ಆರ್ಥಿಕ ಲಾಭಕ್ಕಾಗಿ ಅತ್ಯುತ್ತಮ ಅವಕಾಶಗಳು ಸಿಗುವುದು. ಸಮಯಕ್ಕೆ ಸರಿಯಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಧನು ರಾಶಿ (Sagitarius)
ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಶೀಘ್ರದಲ್ಲೇ ಯಶಸ್ಸಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ಉದ್ಯೋಗಗಳಲ್ಲಿನ ಸಮಸ್ಯೆಗಳು ಇಂದು ಬಗೆಹರಿಯುವುದು. ಕುಟುಂಬದ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪ್ರಗತಿಗೆ ಅನೇಕ ಅವಕಾಶಗಳು ಸಿಗುವುದು.
ಸಂತೋಷ ಹೆಚ್ಚಿಸುವ ದಿನ. ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಸಿಗುವುದು. ಭವಿಷ್ಯಕ್ಕೆ ಸಂಬಂಧಿಸಿದಂತೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವಿರಿ. ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ ಹೆಚ್ಚುವುದು.
ಸೋಮಾರಿತನದಿಂದಲೇ ದಿನದ ಆರಂಭವಾಗುವುದು. ಅನಿರೀಕಿತವಾಗಿ ಸ್ನೇಹಿತರು ಮನೆಗೆ ಬರುವರು. ಮನಸ್ಸು ಉಲ್ಲಾಸಗೊಳ್ಳುವುದು.ಇಂದು ಆರೋಗ್ಯ ಉತ್ತಮವಾಗಿರುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.
ನಿಮ್ಮ ಪಾಲಿನ ಸುವರ್ಣ ದಿನವಾಗಲಿದೆ. ಸಂತೋಷ ಹೆಚ್ಚಾಗುವುದು. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು. ಹೊಸ ಮನೆ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಕುಟುಂಬದ ಹಿರಿಯ ಸದಸ್ಯರೊಂದಿಗೆ ಮಾತನಾಡುವುದು ಒಳ್ಳೆಯದು. ಕಠಿಣ ಪರಿಶ್ರಮದಿಂದ ವ್ಯವಹಾರದಲ್ಲಿ ಲಾಭವಾಗುವುದು.